ನವದೆಹಲಿ: ಜಗತ್ತಿನ ಅತಿ ಉದ್ದನೆಯ ಮತ್ತು ಐಷಾರಾಮಿ ಹಡಗು ಗಂಗಾ ವಿಲಾಸ್ಗೆ (Ganga Vilas Cruise) ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ವಾರಾಣಸಿಯಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ (PM Narendra Modi) ಗಂಗಾ ವಿಲಾಸ್ ಹಡಗನ್ನು ಲೋಕಾರ್ಪಣೆ ಮಾಡಿದ್ದಾರೆ. ಇದರ ಜೊತೆಗೆ ವಾರಾಣಸಿ (Varanasi) ಗಂಗಾ ದಡದಲ್ಲಿನ ‘ಟೆಂಟ್ ಸಿಟಿ’ಯನ್ನೂ ಮೋದಿ ಉದ್ಘಾಟಿಸಿದ್ದಾರೆ. ನದಿ ಮಾರ್ಗದಲ್ಲಿ ಸಾಗುವ ಈ ಐಷಾರಾಮಿ ಗಂಗಾ ವಿಲಾಸ್ ಹಡಗು ವಾರಾಣಸಿಯ ಗಂಗಾ ನದಿಯಲ್ಲಿ ಪ್ರಯಾಣ ಆರಂಭಿಸಿ ಬಾಂಗ್ಲಾದೇಶ ಮಾರ್ಗವಾಗಿ ಅಸ್ಸಾಂನ ದಿಬ್ರುಗಢದಲ್ಲಿ ಪ್ರಯಾಣ ಮುಗಿಸಲಿದೆ.
ಒಟ್ಟು 3200 ಕಿ.ಮೀ. ದೂರ ಸಾಗಲಿರುವ ಗಂಗಾ ವಿಲಾಸ್ ಹಡಗು 51 ದಿನಗಳ ಕಾಲ ಗಂಗೆ, ಬ್ರಹ್ಮಪುತ್ರ, ಹೂಗ್ಲಿ ಸೇರಿ 27 ನದಿಗಳಲ್ಲಿ ಸಂಚರಿಸಲಿದ್ದು, ನದಿ ಅಕ್ಕಪಕ್ಕದ 50 ಪ್ರವಾಸಿ ತಾಣಗಳಲ್ಲಿ ನಿಲ್ಲಲಿದೆ. ಇಂದು (ಜ.13) ಆರಂಭವಾಗುವ ಈ ಪ್ರಯಾಣ ಮಾ.1ಕ್ಕೆ ಅಂತ್ಯವಾಗಲಿದೆ. 27 ನದಿಗಳಲ್ಲಿ ನೌಕಾಯಾನ ಮಾಡುವ ಮೂಲಕ ಆ ಭವ್ಯವಾದ ಕ್ಷಣಗಳನ್ನು ವೀಕ್ಷಿಸಲು ನೀವು 51 ದಿನಗಳ ಪ್ಯಾಕೇಜ್ ಬುಕ್ ಮಾಡಬಹುದು. ಈ ಹಡಗಿನಲ್ಲಿ ನೀವು ಉತ್ತಮ ಭೋಜನ, ಸ್ಪಾ ಮತ್ತು ಬಹು ವಿಶ್ರಾಂತಿ ಆಯ್ಕೆಗಳನ್ನು ಸಹ ಪಡೆಯಬಹುದು.
PM Modi to virtually inaugurate the Tent City in Varanasi &flag off the world’s longest river cruise MV Ganga Vilas b/w Varanasi-Dibrugarh
Union Min S Sonowal, UP CM Adityanath are present at the launch event.Bihar Dy CM Tejashwi Yadav& Assam CM HB Sarma join the event virtually pic.twitter.com/RIzixONIHL
— ANI (@ANI) January 13, 2023
ರಿವರ್ ಕ್ರೂಸ್ MV ಗಂಗಾ ವಿಲಾಸ್ ರಾಜ್ಯದ ಬಕ್ಸರ್, ಚಾಪ್ರಾ, ಪಾಟ್ನಾ, ಮುಂಗೇರ್, ಸುಲ್ತಂಗಂಜ್ ಮತ್ತು ಕಹಲ್ಗಾಂವ್‌ಗೆ ಭೇಟಿ ನೀಡಲಿದೆ. ಪ್ರತಿ ಬಂದರಿನಲ್ಲಿ ಪ್ರವಾಸಿಗರಿಗೆ ಸಾಂಪ್ರದಾಯಿಕ ಸ್ವಾಗತ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಲಾಗುವುದು ಎಂದು ಉದ್ಘಾಟನೆ ವೇಳೆ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ತಿಳಿಸಿದ್ದಾರೆ.
ಗಂಗಾ ವಿಲಾಸ್ ನಲ್ಲಿ ಸಂಚರಿಸಲು ಬುಕ್ ಮಾಡುವುದು ಹೇಗೆ?:
ಟ್ರಿಪಲ್ ಡೆಕ್ ಗಂಗಾ ವಿಲಾಸ್ ಕ್ರೂಸ್ ಐಷಾರಾಮಿ ಹಡಗಾಗಿದ್ದು, ವಾರಾಣಸಿಯಿಂದ ಅಸ್ಸಾಂನ ದಿಬ್ರುಗಢ್‌ಗೆ ವಿಶ್ವದ ಅತಿ ಉದ್ದದ ಜಲಮಾರ್ಗದಲ್ಲಿ ಪ್ರಯಾಣಿಸಲಿದೆ. ಐಷಾರಾಮಿ ಕ್ರೂಸ್ 3,200 ಕಿಮೀ ದೂರವನ್ನು ಕ್ರಮಿಸುತ್ತದೆ. ಭಾರತ ಮತ್ತು ಬಾಂಗ್ಲಾದೇಶದ 5 ರಾಜ್ಯಗಳ ಮೂಲಕ ಇದು ಹಾದುಹೋಗುತ್ತದೆ. ಈ ಐಷಾರಾಮಿ ಗಂಗಾ ವಿಲಾಸ್ ಹಡಗಿನ ಟಿಕೆಟ್‌ಗಳು ಅಂಟಾರಾ ಐಷಾರಾಮಿ ರಿವರ್ ಕ್ರೂಸಸ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ. ಪ್ರತಿ ವ್ಯಕ್ತಿಗೆ 1 ರಾತ್ರಿಗೆ ಸರಾಸರಿ 25,000 ರೂ. ದರವಿರಲಿದೆ ಎನ್ನಲಾಗಿದೆ.
ಗಂಗಾ ವಿಲಾಸ್ ಸಂಚರಿಸುವ ಮಾರ್ಗಗಳು:
ಈ ಹಡಗಿನಲ್ಲಿ ಪ್ರಯಾಣಿಸಲು ಸ್ವಿಜರ್ಲೆಂಡ್ ಕಂಪನಿಯಿಂದ 32 ಸ್ವಿಸ್ ಪ್ರವಾಸಿಗರಿಗೆ ಚೊಚ್ಚಲ ಪ್ರವಾಸಕ್ಕಾಗಿ ಸಂಪೂರ್ಣ ಬರ್ತ್‌ಗಳನ್ನು ಕಾಯ್ದಿರಿಸಲಾಗಿದೆ. ವಿಶ್ವ ಪರಂಪರೆಯ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು, ನದಿ ಘಟ್ಟಗಳು ಮತ್ತು ಭಾರತದ ಪ್ರಮುಖ ನಗರಗಳಾದ ಪಾಟ್ನಾ, ಕೋಲ್ಕತ್ತಾ ಗುವಾಹಟಿ ಮತ್ತು ಬಾಂಗ್ಲಾದೇಶದ ಢಾಕಾ ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ 51 ದಿನಗಳ ವಿಹಾರವನ್ನು ಯೋಜಿಸಲಾಗಿದೆ. ಈ ವಿಹಾರವು ಮೂರು ಪ್ರಮುಖ ನದಿಗಳಾದ ಗಂಗಾ, ಮೇಘನಾ ಮತ್ತು ಬ್ರಹ್ಮಪುತ್ರ ಮೂಲಕ ಹಾದು ಹೋಗಲಿದೆ. ಬಾಂಗ್ಲಾದೇಶದಲ್ಲಿ ಮೇಘನಾ, ಪದ್ಮ ಮತ್ತು ಜಮುನಾ ಮೂಲಕ ಹಾದುಹೋಗುತ್ತದೆ. ನಂತರ ಅಸ್ಸಾಂನ ಬ್ರಹ್ಮಪುತ್ರ ನದಿಯನ್ನು ಪ್ರವೇಶಿಸುತ್ತದೆ.
PM Narendra Modi inaugurates the ‘Tent City’ built on the banks of river Ganga in Varanasi, Uttar Pradesh pic.twitter.com/IH80mjX9rp
— ANI (@ANI) January 13, 2023
ಗಂಗಾ ವಿಲಾಸ್ ಟಿಕೆಟ್ ದರ ಎಷ್ಟು?:
ಕಾಶಿಯಿಂದ ಸಾರನಾಥದವರೆಗೆ, ಮಜುಲಿಯಿಂದ ಮಯೋಂಗ್‌ವರೆಗೆ, ಸುಂದರ್‌ಬನ್ಸ್‌ನಿಂದ ಕಾಜಿರಂಗದವರೆಗೆ ಈ ಕ್ರೂಸ್ ಸಂಚರಿಸಲಿದೆ ಎಂದು ಕೇಂದ್ರ ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಹೇಳಿದ್ದಾರೆ. ಈ ಗಂಗಾ ವಿಲಾಸ್ ವಿಹಾರಕ್ಕೆ ಸುಮಾರು 20 ಲಕ್ಷ ರೂ. ವೆಚ್ಚವಾಗುತ್ತದೆ. ಈ ಐಷಾರಾಮಿ ಕ್ರೂಸ್ ಭಾರತ ಮತ್ತು ಬಾಂಗ್ಲಾದೇಶದ 5 ರಾಜ್ಯಗಳಲ್ಲಿ 27 ನದಿಗಳಲ್ಲಿ 3,200 ಕಿ.ಮೀ.ಗೂ ಹೆಚ್ಚು ದೂರವನ್ನು ಕ್ರಮಿಸುತ್ತದೆ.
ಇದನ್ನೂ ಓದಿ: Ganga Vilas: ಜಗತ್ತಿನ ಅತಿ ಉದ್ದದ ಐಷಾರಾಮಿ ಹಡಗಾದ ಗಂಗಾ ವಿಲಾಸ್ಗೆ ಟಿಕೆಟ್ ಬುಕ್ ಮಾಡುವುದು ಹೇಗೆ?
ಗಂಗಾ ವಿಲಾಸ್ ಹಡಗು 62 ಮೀಟರ್ ಉದ್ದ, 12 ಮೀಟರ್ ಅಗಲ ಮತ್ತು 1.4 ಮೀಟರ್ ಡ್ರಾಫ್ಟ್ನೊಂದಿಗೆ ಆರಾಮವಾಗಿ ಸಾಗುತ್ತದೆ. ಇದು ಮೂರು ಡೆಕ್‌ಗಳನ್ನು ಹೊಂದಿದೆ. 36 ಪ್ರವಾಸಿಗರ ಸಾಮರ್ಥ್ಯವಿರುವ 18 ಸೂಟ್‌ಗಳನ್ನು ಹೊಂದಿದೆ. ಪ್ರವಾಸಿಗರಿಗೆ ಸ್ಮರಣೀಯ ಮತ್ತು ಐಷಾರಾಮಿ ಅನುಭವವನ್ನು ಒದಗಿಸಲು ಎಲ್ಲಾ ಸೌಕರ್ಯಗಳನ್ನು ನೀಡಲಾಗಿದೆ. ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಲ್ಲಿ ಸ್ಟಾಪ್ ಓವರ್‌ಗಳೊಂದಿಗೆ ಭಾರತದ ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಲು ವಾರಾಣಸಿಯ ಗಂಗಾ ಆರತಿಯನ್ನು ಪ್ರದರ್ಶಿಸಲಾಗುವುದು.
ಈ ಗಂಗಾ ವಿಲಾಸ್ ವಿಹಾರ ಬೌದ್ಧ ಧರ್ಮದ ಅತ್ಯಂತ ಗೌರವದ ಸ್ಥಳವಾದ ಸಾರನಾಥದಲ್ಲಿ ನಿಲ್ಲುತ್ತದೆ. ಇದು ತಾಂತ್ರಿಕ ಕರಕುಶಲತೆಗೆ ಹೆಸರುವಾಸಿಯಾದ ಮಯೋಂಗ್ ಮತ್ತು ಅಸ್ಸಾಂನ ಅತಿದೊಡ್ಡ ನದಿ ದ್ವೀಪ ಮತ್ತು ವೈಷ್ಣವ ಸಂಸ್ಕೃತಿಯ ಕೇಂದ್ರವಾದ ಮಜುಲಿಯನ್ನು ಸಹ ಒಳಗೊಂಡಿದೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಬಾಂಗ್ಲಾದೇಶ ಮತ್ತು ಅಸ್ಸಾಂ ಮೂಲಕ ವಿಹಾರ ಸಾಗಲಿದೆ. ಇದು ಬಾಂಗ್ಲಾದೇಶದಲ್ಲಿ 50 ಸ್ಥಳಗಳಲ್ಲಿ ನಿಲ್ಲುತ್ತದೆ.
Published On - 10:46 am, Fri, 13 January 23