AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆಯ ಏರ್​ಪೋರ್ಟ್​ನಲ್ಲಿ ಮೈಸೂರಿನ ಮಹಿಳೆಯರ ಭಕ್ತಿಸುಧೆ ‘ಗೌರಾಂಗ ಅರ್ಧಾಂಗ ಗಂಗಾ ತರಂಗೇ’

ಅಯೋಧ್ಯೆ ಏರ್​ಪೋರ್ಟ್​ನಲ್ಲಿ ಮೈಸೂರಿನ ಮಹಿಳೆಯರು ಭಕ್ತಿಗೀತೆ ಪ್ರಸ್ತುತಪಡಿಸಿದ್ದರು. ಎಲ್ಲರೂ ಆ ಸುಶ್ರಾವ್ಯ ಗಾಯನಕ್ಕೆ ತಲೆಯಾಡಿಸುತ್ತಿದ್ದರು. ಗೌರಾಂಗ ಅರ್ಧಾಂಗ ಗಂಗಾ ತರಂಗೇ, ಯೋಗಿ ಮಹಾಯೋಗ ಕಾ ರೂಪ ರಾಜೇ ಹೀಗಿತ್ತು ಹಾಡಿನ ಸಾಲು.

ಅಯೋಧ್ಯೆಯ ಏರ್​ಪೋರ್ಟ್​ನಲ್ಲಿ ಮೈಸೂರಿನ ಮಹಿಳೆಯರ ಭಕ್ತಿಸುಧೆ ‘ಗೌರಾಂಗ ಅರ್ಧಾಂಗ ಗಂಗಾ ತರಂಗೇ’
ಹಾಡು
ನಯನಾ ರಾಜೀವ್
|

Updated on:Feb 05, 2024 | 10:30 AM

Share

‘‘ಗೌರಾಂಗ ಅರ್ಧಾಂಗ ಗಂಗಾ ತರಂಗೇ, ಯೋಗಿ ಮಹಾಯೋಗ ಕಾ ರೂಪ ರಾಜೇ’’ ಹೀಗೆ ಮೈಸೂರಿನ ಮಹಿಳೆಯರು ಅಯೋಧ್ಯೆಯಲ್ಲಿ ಗಂಗೆ ಹಾಗೂ ಶಿವನ ನೆನೆಸಿಕೊಂಡ ಪರಿ. ಐವತ್ತಕ್ಕೂ ಹೆಚ್ಚು ಮಹಿಳೆಯರು ವಾರಾಣಸಿಗೆ ತೆರಳುವ ಮುನ್ನ ಅಯೋಧ್ಯೆ ಏರಪೋರ್ಟ್​ನಲ್ಲಿ ಭಕ್ತಿಸುಧೆ ಹರಿಸಿದ್ದಾರೆ.

ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಿದೆ, ದೇಶದ ವಿವಿಧ ಭಾಗಗಳಿಂದ ಭಕ್ತರು ರಾಮಲಲ್ಲಾನನ್ನು ನೋಡಲು ಆಗಮಿಸುತ್ತಿದ್ದಾರೆ. ಹಾಗೆಯೇ ಮೈಸೂರಿನ ಮಹಿಳೆಯರು ಕೂಡ ವಾರಾಣಸಿಯಲ್ಲಿ ಕಣ್ತುಂಬಿಕೊಳ್ಳಲು ಹೊರಟಿದ್ದರು. ಏರ್​ಪೋರ್ಟ್​ನಲ್ಲಿ ಐವತ್ತಕ್ಕೂ ಹೆಚ್ಚು ಮಹಿಳೆಯರು ಭಕ್ತಿಯಿಂದ ಈ ಹಾಡು ಹಾಡುತ್ತಿದ್ದರೆ ಅಲ್ಲಿದ್ದ ಸಾವಿರಾರು ಮಂದಿ ಅವರನ್ನೇ ಕಣ್ಣುಮಿಟುಕಿಸದೆ ಒಂದೇ ದೃಷ್ಟಿಯಲ್ಲಿ ನೋಡುತ್ತಿದ್ದರು. ಅಷ್ಟು ಸುಶ್ರಾವ್ಯವಾಗಿತ್ತು ಗೀತೆ.

ಗೀತೆಯ ಸಾಲುಗಳು ಹೀಗಿವೆ ಗೌರಾಂಗ ಅರ್ಧಾಂಗ ಗಂಗಾ ತರಂಗೇ ಯೋಗಿ ಮಹಾಯೋಗಿ ಕಾ ರೂಪ ರಾಜೇ ಬಾಘ ಚಲಾ ಮುಂಡ ಮಾಲಾ ಶಶಿ ಫಾಲಾ ಕರತಾಲಾ ಕಾಲೇಕ ಢಿಮಿ ಢಿಮಿಕ ಢಿಮಿ ಢಮರು ಬಾಜೇ ತಾಡೇಕ ಢಿಮಿ ಢಿಮಿಕ ಢಿಮಿ ಢಮರು ಬಾಜೇ ಅಂಬಾರಂಬಾ ಗಾಂಧಾರ ದಿಗಂಬರ ಜಟಾ ಜೂಟಾ ಫಲಿಧಾರಾ ಭುಜಂಗೇಶ ಅಂಗಾ ವಿಭೂತಿ ಛಾಜೇ ವಾಣೀ ವಿಲಾಸತೂಯ ದಾತಾ ವಿಧಾತಾ ಜಾತಾ ಸಕಲ ದುಃಖ ಸದಾಶಿವ ವಿರಾಜೇ

ಒಂದಷ್ಟು ಮಹಿಳೆಯರು ಎದ್ದು ನಿಂತು ಹಾಡುತ್ತಿದ್ದರೆ ಇನ್ನೂ ಕೆಲವರು ಕುಳಿತಲ್ಲಿಂದಲೇ ಧ್ವನಿಗೂಡಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಜನವರಿ 22 ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ.

ಮತ್ತಷ್ಟು ಓದಿ: ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಕೊಪ್ಪಳ ಯುವಕ; ಕುಟುಂಬ, ಜಿಲ್ಲೆಯ ಜನರಲ್ಲಿ ಮನೆ ಮಾಡಿದ ಸಂತಸ

ಪ್ರಾಣ ಪ್ರತಿಷ್ಠಾ ಕಾರ್ಯ ನಡೆದು ಹನ್ನೊಂದು ದಿನ ಕಳೆದಿವೆ. 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ರಾಮಜನ್ಮಭೂಮಿಗೆ ಭೇಟಿ ನೀಡಿದ್ದು, ಕಾಣಿಕೆ 11 ಕೋಟಿ ರೂ, ದಾಟಿತ್ತು.

ಭಕ್ತಿ ಗಾಯನ

ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಕಾರ, ಕಳೆದ 10 ದಿನಗಳಲ್ಲಿ ಸುಮಾರು 8 ಕೋಟಿ ರೂ. ದೇಣಿಗೆ ಪೆಟ್ಟಿಗೆಗಳಲ್ಲಿ ಠೇವಣಿಯಾಗಿದೆ ಮತ್ತು ಆನ್‌ಲೈನ್‌ನಲ್ಲಿ ಸುಮಾರು 3.50 ಕೋಟಿ ರೂ.ವನ್ನು ಸ್ವೀಕರಿಸಲಾಗಿದೆ ಎಂದು ಹೇಳಿದೆ. ದೇವಾಲಯದ ಟ್ರಸ್ಟ್ ನೌಕರರನ್ನು ಈ ದೇಣಿಗೆ ಕೌಂಟರ್‌ಗಳಲ್ಲಿ ನೇಮಿಸಲಾಗಿದ್ದು, ಸಂಜೆ ಕೌಂಟರ್ ಮುಚ್ಚಿದ ನಂತರ ಟ್ರಸ್ಟ್ ಕಚೇರಿಯಲ್ಲಿ ಸ್ವೀಕರಿಸಿದ ದೇಣಿಗೆ ಮೊತ್ತದ ವಿವರವನ್ನು ಇವರು ಸಲ್ಲಿಸುತ್ತಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:29 am, Mon, 5 February 24