ಚೀನಾದಲ್ಲಿ ನೆಲೆಯೂರಿದ್ದ ಜರ್ಮನ್ ಪಾದರಕ್ಷೆ ಕಂಪನಿ ಆಗ್ರಾಗೆ ಶಿಫ್ಟ್

Ayesha Banu

|

Updated on:May 21, 2020 | 4:17 PM

ಲಕ್ನೋ: ಕೊರೊನಾ ನಂತರ ರಾಜ್ಯ ಸರ್ಕಾರ ಮತ್ತು ಪ್ರಧಾನಿ ಮೋದಿ ಕೈಗೊಂಡಿದ್ದ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವ ಪ್ರಯತ್ನಕ್ಕೆ ಹೊಸ ತಿರುವು ಸಿಕ್ಕಿದೆ. ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜರ್ಮನ್‌ ಮೂಲದ ಪ್ರಸಿದ್ಧ ಪಾದರಕ್ಷೆ ಕಂಪನಿ ಚೀನಾವನ್ನು ತೊರೆಯಲಿದೆ. ತನ್ನ ಸಂಪೂರ್ಣ ಉತ್ಪಾದನೆಯನ್ನು ಉತ್ತರ ಪ್ರದೇಶದ ಹೊರವಲಯದ ಆಗ್ರಾಗೆ ವರ್ಗಾಯಿಸಲು ಮುಂದಾಗಿದೆ. ಜರ್ಮನ್​ನ ಪ್ರಸಿದ್ಧ ಫೂಟ್‌ವೇರ್‌ ಕಂಪನಿ ವನ್ ವೆಲ್ಕ್ಸ್ ಭಾರತದಲ್ಲಿ ಕಾರ್ಯನಿರ್ವಹಿಸಲಿದೆ. ಕಾಸಾ ಎವರ್ಜ್ ಗಂಬ್ ಒಡೆತನದ ವನ್ ವೆಲ್ಕ್ಸ್ ಚೀನಾದಲ್ಲಿ ತನ್ನ ಸಂಪೂರ್ಣ ಶೂ ಉತ್ಪಾದನಾ ವ್ಯವಹಾರವನ್ನು ವಾರ್ಷಿಕವಾಗಿ ಮೂರು […]

ಚೀನಾದಲ್ಲಿ ನೆಲೆಯೂರಿದ್ದ ಜರ್ಮನ್ ಪಾದರಕ್ಷೆ ಕಂಪನಿ ಆಗ್ರಾಗೆ ಶಿಫ್ಟ್

ಲಕ್ನೋ: ಕೊರೊನಾ ನಂತರ ರಾಜ್ಯ ಸರ್ಕಾರ ಮತ್ತು ಪ್ರಧಾನಿ ಮೋದಿ ಕೈಗೊಂಡಿದ್ದ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವ ಪ್ರಯತ್ನಕ್ಕೆ ಹೊಸ ತಿರುವು ಸಿಕ್ಕಿದೆ. ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜರ್ಮನ್‌ ಮೂಲದ ಪ್ರಸಿದ್ಧ ಪಾದರಕ್ಷೆ ಕಂಪನಿ ಚೀನಾವನ್ನು ತೊರೆಯಲಿದೆ.

ತನ್ನ ಸಂಪೂರ್ಣ ಉತ್ಪಾದನೆಯನ್ನು ಉತ್ತರ ಪ್ರದೇಶದ ಹೊರವಲಯದ ಆಗ್ರಾಗೆ ವರ್ಗಾಯಿಸಲು ಮುಂದಾಗಿದೆ. ಜರ್ಮನ್​ನ ಪ್ರಸಿದ್ಧ ಫೂಟ್‌ವೇರ್‌ ಕಂಪನಿ ವನ್ ವೆಲ್ಕ್ಸ್ ಭಾರತದಲ್ಲಿ ಕಾರ್ಯನಿರ್ವಹಿಸಲಿದೆ. ಕಾಸಾ ಎವರ್ಜ್ ಗಂಬ್ ಒಡೆತನದ ವನ್ ವೆಲ್ಕ್ಸ್ ಚೀನಾದಲ್ಲಿ ತನ್ನ ಸಂಪೂರ್ಣ ಶೂ ಉತ್ಪಾದನಾ ವ್ಯವಹಾರವನ್ನು ವಾರ್ಷಿಕವಾಗಿ ಮೂರು ಮಿಲಿಯನ್ ಜೋಡಿ ಸಾಮರ್ಥ್ಯದೊಂದಿಗೆ, 110 ಕೋಟಿ ರೂ.ಗಳ ಆರಂಭಿಕ ಹೂಡಿಕೆಯೊಂದಿಗೆ ಭಾರತಕ್ಕೆ ಸ್ಥಳಾಂತರಿಸುವುದಾಗಿ ಘೋಷಿಸಿದೆ.

ವನ್ ವೆಲ್ಕ್ಸ್ ಆಗ್ರಾದಲ್ಲಿ ಲಾಟ್ರಿಕ್‌ ಇಂಡಸ್ಟ್ರೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯೊಂದಿಗೆ ಜಂಟಿಯಾಗಿ ಇದೇ ರೀತಿಯ ಸಾಮರ್ಥ್ಯದ ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವರ್ಷಕ್ಕೆ ಕೋಟಿಗೂ ಮೀರಿ ಪಾದರಕ್ಷೆಗಳನ್ನು ಈ ಸಂಸ್ಥೆ ತಯಾರಿಸುತ್ತಿದ್ದು, ಸಂಸ್ಥೆಯ ಈ ನಿರ್ಧಾರದಿಂದ ಉತ್ತರ ಪ್ರದೇಶ ಸೇರಿ ಭಾರತದಲ್ಲಿ ಒಟ್ಟು 10,000ಕ್ಕೂ ಹೆಚ್ಚು ಮಂದಿಗೆ ಉದ್ಯೋಗವಕಾಶ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada