ಕಾಂಗ್ರೆಸ್ ಹಿಮಂತ ಬಿಸ್ವಾ ಶರ್ಮಾರಂತಹ ಉತ್ತಮ ನಾಯಕನನ್ನು ಕಳೆದುಕೊಂಡಿದ್ದು ಹೇಗೆ? ಆಜಾದ್ ಜೀವನ ಚರಿತ್ರೆಯಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳಿವು

ಒಂದು ಕಾಲದಲ್ಲಿ ಇಡೀ ಈಶಾನ್ಯ ರಾಜ್ಯಗಳನ್ನು ಆಳಿದ್ದ ಕಾಂಗ್ರೆಸ್ (Congress)ಇಂದು ಬಹುತೇಕ ಪ್ರದೇಶಗಳಲ್ಲಿ ಹೇಳ ಹೆಸರಿಲ್ಲದಂತಾಗಿದೆ.

ಕಾಂಗ್ರೆಸ್ ಹಿಮಂತ ಬಿಸ್ವಾ ಶರ್ಮಾರಂತಹ ಉತ್ತಮ ನಾಯಕನನ್ನು ಕಳೆದುಕೊಂಡಿದ್ದು ಹೇಗೆ? ಆಜಾದ್ ಜೀವನ ಚರಿತ್ರೆಯಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳಿವು
ಗುಲಾಂ ನಬಿ ಆಜಾದ್
Image Credit source: Zee News

Updated on: Mar 24, 2023 | 11:35 AM

ಒಂದು ಕಾಲದಲ್ಲಿ ಇಡೀ ಈಶಾನ್ಯ ರಾಜ್ಯಗಳನ್ನು ಆಳಿದ್ದ ಕಾಂಗ್ರೆಸ್ (Congress)ಇಂದು ಬಹುತೇಕ ಪ್ರದೇಶಗಳಲ್ಲಿ ಹೇಳ ಹೆಸರಿಲ್ಲದಂತಾಗಿದೆ. ಈ ಪತನದ ಆರಂಭವು ಅಸ್ಸಾಂನ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್​ ತೊರೆದಾಗಿನಿಂದ ಶುರುವಾಗಿತ್ತು. ಗುಲಾಂ ನಬಿ ಆಜಾದ್ (Ghulam Nabi Aza)ತಮ್ಮ ಆತ್ಮಚರಿತ್ರೆಯಲ್ಲಿ ಹಿಮಂತ ಬಿಸ್ವಾ ಶರ್ಮಾ ಕಾಂಗ್ರೆಸ್ ತೊರೆಯಲು ಇದ್ದ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಆಗಸ್ಟ್ 2022 ರಲ್ಲಿ ತಮ್ಮದೇ ಪಕ್ಷವನ್ನು ಪ್ರಾರಂಭಿಸಲು ಕಾಂಗ್ರೆಸ್ ತೊರೆದ ಆಜಾದ್, ಸೋನಿಯಾ ಗಾಂಧಿಯನ್ನೂ ಎದುರು ಹಾಕಿಕೊಂಡರು.

ಹಿಮಂತ ಬಿಸ್ವಾ ಶರ್ಮಾ ಅವರಿಗೆ ಬಹುಪಾಲು ಶಾಸಕರ ಬೆಂಬಲವಿದ್ದು, ಬಂಡಾಯವೆದ್ದು ಪಕ್ಷವನ್ನು ತೊರೆಯಲಿದ್ದಾರೆ ಎಂದು ಹೇಳಿದಾಗ ರಾಹುಲ್ ಗಾಂಧಿ ಹೋದರೆ ‘ಹೋಗಲಿ ಬಿಡಿ’ ಎಂದು ಹೇಳಿದ್ದರು ಎಂದು ಜೀವನಚರಿತ್ರೆಯಲ್ಲಿ ಉಲ್ಲೇಖಿಸಿದ್ದಾರೆ.

ಮತ್ತಷ್ಟು ಓದಿ: Rahul Gandhi: ರಾಹುಲ್ ಗಾಂಧಿಯನ್ನು ಲೋಕಸಭೆಯಿಂದ ಅನರ್ಹಗೊಳಿಸುವಂತೆ ಸುಪ್ರೀಂ ಕೋರ್ಟ್ ವಕೀಲ ಮನವಿ

ಅಸ್ಸಾಂನಲ್ಲಿ ಕಾಂಗ್ರೆಸ್​ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯಗಳಿಂದ ಅವರು ಸೆಪ್ಟೆಂಬರ್ 2015ರಲ್ಲಿ ಪಕ್ಷವನ್ನು ತೊರೆದಾಗ ಹತ್ತು ಶಾಸಕರು ಅವರಿಗೆ ಬೆಂಬಲ ನೀಡಿದ್ದರು. ರಾಜ್ಯದಲ್ಲಿ ಎರಡನೇ ಸತತ ಗೆಲುವನ್ನು ಸಾಧಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದರು. ಕಾಂಗ್ರೆಸ್ ತೊರೆದು ಕೇವಲ 5 ವರ್ಷಗಳ ನಂತರ 2021ರಲ್ಲಿ ಮುಖ್ಯಮಂತ್ರಿಯಾದರು.

ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟದ ಸಂಚಾಲಕರಾಗಿರುವ ಹಿಮಂತ ಶರ್ಮಾ ಅವರು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಶ್ರದ್ಧೆಯಿಂದ ಕೆಲಸ ಮಾಡಿದರು ಮತ್ತು ಈ ಪ್ರದೇಶದಲ್ಲಿ ಬಿಜೆಪಿ ತನ್ನ ನೆಲೆಯನ್ನು ಬಲಪಡಿಸಲು ಸಹಾಯ ಮಾಡಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us