ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆಗಳು ಆನ್ಲೈನ್ನಲ್ಲಿ ಹರಾಜು, ನೀವೂ ಪಡೀಬೇಕೆ? ಇಲ್ಲಿದೆ ವಿವರ
ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ ಸ್ಮರಣಿಕೆಗಳನ್ನು ಆನ್‌ಲೈನ್ ಹರಾಜು ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಅ.31ರವರೆಗೆ ಇದೆ ಎಂದು ಹೇಳಲಾಗಿದೆ. ಇನ್ನು ಈ ಉಡುಗೊರೆಗಳನ್ನು ನೀವು ಹೇಗೆ ಪಡೆಯುವುದು? ಇದರ ಹಂತಗಳಾವುವು? ಇಲ್ಲಿ ತಿಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ ಸ್ಮರಣಿಕೆಗಳನ್ನು (A gift received by Prime Minister Modi) ಆನ್‌ಲೈನ್ ಹರಾಜು ಮಾಡಲಾಗುತ್ತಿದೆ. ಈ ಪ್ರಕ್ರಿಯೆ ಅ.31ರವರೆಗೆ ಇದೆ ಎಂದು ಹೇಳಲಾಗಿದೆ. ಇದರಲ್ಲಿ ಸೊಗಸಾದ ಶಿಲ್ಪಗಳು, ವರ್ಣಚಿತ್ರಗಳು, ರೇಖಾಚಿತ್ರಗಳು, ಕರಕುಶಲ ವಸ್ತುಗಳು, ಸಾಂಪ್ರದಾಯಿಕ ಉಡುಗೆಗಳು, ಪೇಟ ಇನ್ನಿತರ ವಸ್ತುಗಳನ್ನು ಒಳಗೊಂಡಿದೆ. ಇವುಗಳ ಬೆಲೆ 700 ರೂ.ನಿಂದ ಆರಂಭವಾಗಲಿದ್ದು 64,80,000 ರೂ. ವರೆಗಿನ ವಸ್ತುಗಳು ಇದೆ. ಇನ್ನು ಈ ವಸ್ತುಗಳನ್ನು ನೀವು ಪಡೆಯಬೇಕೆಂದರೆ ಆನ್‌ಲೈನ್ ಮೂಲಕ PM Mementos ಪೋರ್ಟಲ್ಗೆ ಭೇಟಿ ನೀಡಬೇಕು. ಇಲ್ಲಿ ನೀವು ಪ್ರಧಾನಿ ಮೋದಿ ಅವರಿಗೆ ಸಿಕ್ಕ ಸ್ಮರಣಿಕೆಗಳನ್ನು ಪಡೆಯಬಹುದು.
ನೀವೂ ಪಡೀಬೇಕೆ? ಈ ಹಂತಗಳನ್ನು ಅನುಸರಿಸಿ:
ಹಂತ-1
– ಹೊಸ ಖರೀದಿದಾರರು PM Mementos ಪೋರ್ಟಲ್ ಮುಖಪುಟದ ಮೇಲಿನ ಬಲ ಮೂಲೆಯಲ್ಲಿರುವ “ಖರೀದಿದಾರರ ಸೈನ್ ಅಪ್” ಬಟನ್ ಅನ್ನು ಕ್ಲಿಕ್ ಮಾಡಬೇಕು .
– ಖರೀದಿದಾರರ ಸೈನ್‌ಅಪ್ ಪುಟದಲ್ಲಿ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಮತ್ತು ಪಾಸ್‌ವರ್ಡ್‌ನಂತಹ ವಿವರಗಳನ್ನು ಒದಗಿಸಿ.
– ಚೆಕ್‌ಬಾಕ್ಸ್ ನ್ನು ಕ್ಲಿಕ್ ಮಾಡುವ ಮೂಲಕ ಹರಾಜು ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ.
– ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಮೂಲಕ ಸ್ವೀಕರಿಸಿದ OTPನ್ನು ಇಲ್ಲಿ ತಿಳಿಸಿ.
– ಪ್ರೊಫೈಲ್ ವಿವರಗಳ ಪುಟದಲ್ಲಿ ಹೆಸರು, ಲಿಂಗ, ಹುಟ್ಟಿದ ದಿನಾಂಕ ಮತ್ತು ವಿಳಾಸದ ವಿವರಗಳನ್ನು ನಮೂದಿಸಿ.
-ಎಲ್ಲ ವಿವರಗಳನ್ನು ಒಮ್ಮೆ ಪರಿಶೀಲಿಸಿ ಮತ್ತು “ಸಲ್ಲಿಸು” ನೀಡಿರುವ ಆಯ್ಕೆಗೆ ಕ್ಲಿಕ್ ಮಾಡಿ.
– ನಂತರ ಪೋರ್ಟಲ್ “ನಿಮ್ಮ ಸೈನ್ ಅಪ್ ಯಶಸ್ವಿಯಾಗಿ ಮಾಡಲಾಗಿದೆ” ಎಂಬ ಸಂದೇಶವನ್ನು ತೋರಿಸುತ್ತದೆ.
ಹಂತ 2:
ಹಂತ ಒಂದು ಮುಗಿದ ನಂತರ ಲಾಗಿನ್ ಐಡಿಯನ್ನು ಇಲ್ಲಿ ಹಾಕಿ (ಮಾನ್ಯವಾದ ಪಾಸ್‌ವರ್ಡ್‌ನೊಂದಿಗೆ ಇಮೇಲ್ ಐಡಿ ಅಥವಾ ಮೊಬೈಲ್ ಸಂಖ್ಯೆ) ಲಾಗಿನ್ ಮಾಡಿಕೊಳ್ಳಿ.
ಹಂತ 3:
-ಇನ್ನು ನೀವು ನೀಡಿದ ಮಾಹಿತಿಯಲ್ಲಿ ಆಧಾರ ದೃಢೀಕರಣ ಇದೆಯೇ ಎಂದು ಪರಿಶೀಲನೆ ಮಾಡುತ್ತದೆ.
– ಒಂದು ವೇಳೆ ಮಾಹಿತಿಯಲ್ಲಿ ಆಧಾರ ದೃಢೀಕರಣ ಇಲ್ಲವೆಂದರೆ, ಆಧಾರ ದೃಢೀಕರಣ ಪುಟಕ್ಕೆ ನ್ಯಾವಿಗೇಟ್ ಮಾಡುತ್ತದೆ.
ಹಂತ 4:
ಲಾಗಿನ್ ನಂತರ ನೀವು ಹರಾಜು ಮಾಡಲಾದ ವಸ್ತುಗಳ ಮೇನುವನ್ನು ತೋರಿಸುತ್ತದೆ. ಇಲ್ಲಿ ನಿಮಗೆ ಬೇಕಾದ ವಷ್ತುಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಹಂತ 5:
-ನೀವು ಆಯ್ಕೆ ಮಾಡಿದ ವಸ್ತುಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ. ಜತೆಗೆ ಅದರ ದರವನ್ನು ಕೂಡ ಅಲ್ಲಿ ತಿಳಿಸಲಾಗುತ್ತದೆ. ಇದರ ಜತೆಗೆ ನಿಮಗೆ ಕಾರ್ಟ್ ಕೂಡ ನೀಡಲಾಗುತ್ತದೆ. ಅದಕ್ಕೆ ನೀವು ಆಯ್ಕೆ ಮಾಡಿದ ವಸ್ತುಗಳನ್ನು ಸೇರಿಸಬೇಕು.
– ಇನ್ನು ಇಲ್ಲಿ ಕಾರ್ಟ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಏಕೆಂದರೆ ಕಾರ್ಟ್ ಆಯ್ಕೆ ಮಾಡಿದವರಿಗೆ ಮಾತ್ರ ಈ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ.
ಹಂತ 6:
-ಇನ್ನು ಕಾರ್ಟ್ಗೆ ವಸ್ತುಗಳನ್ನು ಸೇರಿಸಿದ ನಂತರ ಬಿಡ್ ಮಾಡಬಹುದು. ಅಲ್ಲಿಂದ ಹರಾಜು ಪ್ರಾರಂಭವಾಗುತ್ತದೆ.
-ಈ ಬಿಡ್ನ್ನು ಹರಾಜು ಮುಗಿಯುವರೆಗೆ ಮಾಡಬಹುದು.
ಹಂತ -7 :
ಹರಾಜು ಮುಗಿದ ನಂತರ ಮತ್ತು ಇಲಾಖೆ ಹರಾಜಿನ ಸೂಚಕಗಳನ್ನು ತಿಳಿಸುತ್ತದೆ. ಅಲ್ಲಿಂದ ಹರಾಜುದಾರರು ವಸ್ತುವಿನ ಬೆಲೆಗೆ ಅನುಗುಣವಾಗಿ ಅಂದರೆ ಹರಾಜಿನಲ್ಲಿ ತಿಳಿಸಿದ ಮೊತ್ತವನ್ನು ಪಾವತಿಸಬೇಕು. ಮೊತ್ತವನ್ನು ಪೋರ್ಟಲ್ನಲ್ಲಿ ಪಾವತಿಸಬೇಕು. ಜತೆಗೆ ದೇಶದೊಳಗಿನ ವಿಳಾಸಕ್ಕೆ ಮಾತ್ರ ಇಲಾಖೆಯೇ ತಲುಪಿಸುತ್ತದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಸ್ವೀಕರಿಸಿದ ಉಡುಗೊರೆ, ಸ್ಮರಣಿಕೆಗಳ ಹರಾಜು; ಕ್ರೀಡಾಪಟುಗಳು ಕೊಟ್ಟ ಗಿಫ್ಟ್ಗಳಿಗೆ ಭರ್ಜರಿ ಬೇಡಿಕೆ
ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ (NGMA) ಆಯೋಜಿಸಿರುವ ಈ ಇ-ಹರಾಜನ್ನು ಭಾರತೀಯರು ಪ್ರತ್ಯೇಕವಾಗಿ ಪ್ರವೇಶಿಸಬಹುದಾಗಿದೆ. ಇನ್ನು ಈ ಆನ್‌ಲೈನ್ ಹರಾಜಿನಿಂದ ಬರುವ ಆದಾಯವು ಗಂಗಾ ನದಿಯನ್ನು ಪುನರುಜ್ಜೀವನಗೊಳಿಸುವ “ನಮಾಮಿ ಗಂಗೆ ಕಾರ್ಯಕ್ರಮ”ಕ್ಕೆ ಉಪಯೋಗಿಸಲಾಗುವುದು ಎಂದು ಇಲಾಖೆ ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ