Narendra Modi: ವಾರಾಣಸಿಯ ಬೀದಿಯಲ್ಲಿ ಕಾರು ನಿಲ್ಲಿಸಿ, ಜನರಿಂದ ಉಡುಗೊರೆ ಸ್ವೀಕರಿಸಿದ ಪ್ರಧಾನಿ ಮೋದಿ

Narendra Modi in Varanasi: ನರೇಂದ್ರ ಮೋದಿಯವರ ಅಭಿಮಾನಿಯೊಬ್ಬರು ವಾರಾಣಸಿಯ ಬೀದಿಯಲ್ಲಿ ಮೋದಿಯ ಕಾರು ಸಾಗುತ್ತಿದ್ದಾಗ ಪ್ರಧಾನಿ ಮೋದಿಗೆ ಕಡುಗೆಂಪು ಬಣ್ಣದ ಪಗ್ಡಿ ಮತ್ತು ಕೇಸರಿ ಸ್ಕಾರ್ಫ್ ನೀಡಲು ಪ್ರಯತ್ನಿಸಿದರು. ಅದಕ್ಕೆ ಭದ್ರತಾ ಸಿಬ್ಬಂದಿ ಬಿಡಲಿಲ್ಲ. ನಂತರ ಮೋದಿಯವರೇ ಖುದ್ದಾಗಿ ಆ ಉಡುಗೊರೆಗಳನ್ನು ಸ್ವೀಕರಿಸಿದರು.

Narendra Modi: ವಾರಾಣಸಿಯ ಬೀದಿಯಲ್ಲಿ ಕಾರು ನಿಲ್ಲಿಸಿ, ಜನರಿಂದ ಉಡುಗೊರೆ ಸ್ವೀಕರಿಸಿದ ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Dec 13, 2021 | 3:40 PM

ವಾರಾಣಸಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ವಾರಾಣಸಿಗೆ ಆಗಮಿಸಿ, ಕಾಶಿ ವಿಶ್ವನಾಥ ಕಾರಿಡಾರ್ (Kashi Vishwanath Corridor project) ಉದ್ಘಾಟನೆ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ತೆರಳಲು ವಾರಾಣಸಿಯ (Varanasi) ಬೀದಿಯಲ್ಲಿ ಬಿಗಿ ಭದ್ರತೆಯೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಕಾರು ನಿಲ್ಲಿಸಿ, ಅಲ್ಲಿನ ಜನರಿಂದ ಪಗ್ಡಿ ಮತ್ತು ಸ್ಕಾರ್ಫ್ ಸ್ವೀಕರಿಸಿದ್ದಾರೆ. ಸಣ್ಣದಾದ ರಸ್ತೆಯಲ್ಲಿ ನರೇಂದ್ರ ಮೋದಿಯವರ (Narendra Modi) ಕಾರು ಸಾಗುತ್ತಿತ್ತು. ಆಗ ಅಕ್ಕಪಕ್ಕದ ಮನೆ, ಅಂಗಡಿಗಳಲ್ಲಿ ಕಿಕ್ಕಿರಿದು ಸೇರಿದ್ದ ಜನರು ಮೋದಿಜೀ ಮೋದಿಜೀ ಎಂದು ಜೈಕಾರ ಹಾಕುತ್ತಿದ್ದರು. ಅಷ್ಟರಲ್ಲಿ ಕೆಲವರು ರಸ್ತೆಗೆ ಓಡಿಬಂದು ಪ್ರಧಾನಿ ಮೋದಿ ಕುಳಿತಿದ್ದ ಕಾರಿನ ಕಿಟಕಿಯ ಬಳಿ ಬಂದು ಸ್ಕಾರ್ಫ್​ ಹಾಗೂ ವಾರಾಣಸಿಯ ಸಾಂಪ್ರದಾಯಿಕ ಪಗ್ಡಿಯನ್ನು ನೀಡಲು ಪ್ರಯತ್ನಿಸಿದರು. ಆದರೆ, ಅವರನ್ನು ಪ್ರಧಾನಿ ಮೋದಿಯವರ ಭದ್ರತಾ ಸಿಬ್ಬಂದಿ ತಡೆದರು. ಬಳಿಕ ಮೋದಿಯವರೇ ಕಾರಿನ ಬಾಗಿಲನ್ನು ತೆರೆಯಲು ಸೂಚಿಸಿ, ಅಲ್ಲಿನ ಜನರು ನೀಡಿದ ಉಡುಗೊರೆಯನ್ನು ತೆಗೆದುಕೊಂಡರು.

ಕಾರು ಸಾಗುತ್ತಿದ್ದ ಬೀದಿಗೆ ಹೂವಿನ ಪಕಳೆಗಳನ್ನು ಹಾಕುತ್ತಾ ಜನರು ನರೇಂದ್ರ ಮೋದಿಯವರನ್ನು ಸ್ವಾಗತಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ನರೇಂದ್ರ ಮೋದಿಯವರ ಅಭಿಮಾನಿಯೊಬ್ಬರು ಪ್ರಧಾನಿ ಮೋದಿಗೆ ಕಡುಗೆಂಪು ಬಣ್ಣದ ಪಗ್ಡಿ ಮತ್ತು ಕೇಸರಿ ಸ್ಕಾರ್ಫ್ ನೀಡಲು ಪ್ರಯತ್ನಿಸಿದರು. ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಹಿಂದಕ್ಕೆ ತಳ್ಳಿದಾಗ, ಪ್ರಧಾನಿ ಮೋದಿಯವರೇ ಕಾರು ನಿಲ್ಲಿಸಿ ಆತ ಕೊಟ್ಟ ಉಡುಗೊರೆಗಳನ್ನು ಕೊಡುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದರು. ಆಗ ಆ ವ್ಯಕ್ತಿ ಪ್ರಧಾನಿ ಮೋದಿಯವರ ತಲೆಗೆ ಪಗ್ಡಿಯನ್ನು ಹಾಕಿ, ಅವರ ಹೆಗಲ ಮೇಲೆ ಸ್ಕಾರ್ಫ್​ ಹಾಕುವ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಖುಷಿಯಾಗಿದ್ದಾರೆ. ಜನಸಾಮಾನ್ಯರೊಂದಿಗೆ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಳ್ಳುವ ಪ್ರಧಾನಮಂತ್ರಿ ನರೇಂದ್ರ ಮೋದಿ ನಿಜಕ್ಕೂ ಆದರ್ಶ ವ್ಯಕ್ತಿತ್ವ ಉಳ್ಳವರು ಎಂದಿದ್ದಾರೆ.

ಕಾಶಿ ವಿಶ್ವನಾಥ ದೇವಾಲಯವನ್ನು ಗಂಗಾ ಘಾಟ್‌ಗಳೊಂದಿಗೆ ಸಂಪರ್ಕಿಸಲು ಮೆಗಾ ಕಾರಿಡಾರ್ ಅನ್ನು ಪ್ರಾರಂಭಿಸುವ ಮೊದಲು ಪ್ರಧಾನಿ ಮೋದಿ ಇಂದು ಬೆಳಿಗ್ಗೆ ಉತ್ತರ ಪ್ರದೇಶದ ತಮ್ಮ ಕ್ಷೇತ್ರವಾದ ವಾರಾಣಸಿಯ ಕಾಲ ಭೈರವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಕಾಶಿ ವಿಶ್ವನಾಥ ಧಾಮವನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿಗಳೊಂದಿಗೆ ಡಬಲ್ ಡೆಕ್ಕರ್ ದೋಣಿಯಲ್ಲಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಪ್ರಯಾಣಿಸಿದರು. ಈ ಯೋಜನೆಗೆ ಸುಮಾರು 339 ಕೋಟಿ ರೂ. ವೆಚ್ಚವಾಗಿದೆ.

ಇದನ್ನೂ ಓದಿ: Kashi Vishwanath corridor ಕಾಶಿ ವಿಶ್ವನಾಥ ಕಾರಿಡಾರ್ ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

Video: ವಾರಾಣಸಿಯ ಕಾಲ ಭೈರವ ಮಂದಿರದಲ್ಲಿ ಆರತಿ ಸಲ್ಲಿಸಿ, ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿದ ಪ್ರಧಾನಿ ಮೋದಿ

Published On - 3:35 pm, Mon, 13 December 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್