ಮಗು ಹಾಸಿಗೆಯಲ್ಲಿ ಮೂತ್ರ ಮಾಡಿತೆಂದು ಖಾಸಗಿ ಭಾಗವನ್ನು ಗಾಯಗೊಳಿಸಿರುವ ಘಟನೆ ಕೇರಳದ ಸರ್ಕಾರಿ ಶಿಶು ಪಾಲನಾ ಕೇಂದ್ರದಲ್ಲಿ ನಡೆದಿದೆ. ತಿರುವನಂತಪುರಂನಲ್ಲಿರುವ ಶಿಶು ಪಾಲನಾ ಕೇಂದ್ರದಲ್ಲಿ ಎರಡೂವರೆ ವರ್ಷದ ಮಗು ರಾತ್ರಿ ಮಲಗಿದ್ದಾಗ ಮೂತ್ರ ಮಾಡಿಕೊಂಡಿತ್ತು. ಅದಕ್ಕೆ ಸಿಟ್ಟಿಗೆದ್ದ ಮೂವರು ಸಿಬ್ಬಂದಿ ಮಗುವನ್ನು ಥಳಿಸಿದ್ದಲ್ಲದೆ ಅದರ ಖಾಸಗಿ ಭಾಗಗಳಿಗೆ ಗಾಯ ಮಾಡಿದ್ದಾರೆ.
ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯಿಂದ ನಡೆಸಲ್ಪಡುವ ಕೇಂದ್ರದಿಂದ ಮೂವರು ಆಯಾಗಳನ್ನು ಬಂಧಿಸಲಾಗಿದೆ.
ಕೆಲ ದಿನಗಳ ಬಳಿಕ ಮಗು ಅಸ್ವಸ್ಥವಾಗಿತ್ತು, ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗುವಿನ ಖಾಸಗಿ ಭಾಗಗಳಲ್ಲಿ ಗಾಯದ ಗುರುತಿರುವುದು ಪತ್ತೆಯಾಗಿದೆ. ಅದು ಸುಮಾರು ಏಳೆಂಟು ದಿನದ ಹಿಂದಿನದು ಎಂದು ತಿಳಿದುಬಂದಿದೆ.
ಆಸ್ಪತ್ರೆ ವೈದ್ಯರು ಈ ಸಮಸ್ಯೆಯನ್ನು ಇಲ್ಲಿಗೆ ಬಿಡಲಿಲ್ಲ, ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ. ಬಳಿಕ ತನಿಖೆ ನಡೆಸಿದಾಗ ಮಗು ಮೂತ್ರ ಮಾಡಿತೆಂದು ಆಯಾಗಳು ಮಗುವಿಗೆ ಥಳಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಮೂವರು ಆಯಾಗಳನ್ನು ಕೆಲಸದಿಂದ ವಜಾ ಮಾಡಿದ್ದಷ್ಟೇ ಅಲ್ಲದೆ ಪೋಕ್ಸೊ ಕಾಯ್ದೆಯಲ್ಲಿ ಬಂಧಿಸಲಾಗಿದೆ.
ಮಗುವಿನ ಪೋಷಕರು ನಿಧನರಾದಾಗಿನಿಂದ ಬಾಲಕಿ ಹಾಗೂ ಆಕೆಯ ತಂಗಿ ಅಲ್ಲಿಯೇ ಉಳಿದುಕೊಂಡಿದ್ದರು.
ಮತ್ತಷ್ಟು ಓದಿ: ಉಡುಪಿಯಲ್ಲಿ ಅಮಾನವೀಯ ಘಟನೆ: 3 ವರ್ಷದ ಮಗುವಿನ ಮೇಲೆ ತೀವ್ರವಾಗಿ ಹಲ್ಲೆ
ಚಿಕ್ಕಬಳ್ಳಾಪುರ ಸರ್ಕಾರಿ ಬಾಲಕಿಯರ ಮಂದಿರದಲ್ಲಿ ರಾಕ್ಷಸೀಯ ಕೃತ್ಯಗಳು ಬಯಲು
ನೊಂದ, ಸಂತ್ರಸ್ತ ಮತ್ತು ಲೈಂಗಿಕ ದೌರ್ಜನ್ಯಕ್ಕೊಳಗಾದ ಬಾಲಕಿಯರಿಗೆ ಆತ್ಮಸ್ಥೈರ್ಯ ತುಂಬಿ ಅವರ ಬಾಳಿಗೆ ಬೆಳಕಾಗಬೇಕಾದ ಸರ್ಕಾರಿ ಬಾಲಕಿಯರ ಮಂದಿರವೊಂದು (Government Girls Bala Mandira) ಭೂ ಲೋಕದ ನರಕವಾಗಿದ್ದು, ಅಲ್ಲಿರುವ ಮಕ್ಕಳಿಗೆ ಅಲ್ಲಿಯ ಅಧೀಕ್ಷಕಿ ರಾಕ್ಷಸಿಯಂತೆ ನಡೆದುಕೊಳ್ಳುತ್ತಿರುವ ಪ್ರಕರಣ ಬಯಲಾಗಿದೆ.
ನಗರದ ಬಿಬಿ ರಸ್ತೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದಲ್ಲಿ ಸರ್ಕಾರಿ ಬಾಲಕಿಯರ ಮಂದಿರವೊಂದಿದೆ. ಇದೆ ಬಾಲಕಿಯರ ಮಂದಿರ ಈಗ ಬಾಲಕಿಯರಿಗೆ ನರಕವಾಗಿದೆ. ಬಾಲಮಂದಿರಕ್ಕೆ ಬರುವ ನೊಂದ ಬಾಲಕಿಯರಿಗೆ ಧೈರ್ಯ ಹೇಳುವುದರ ಬದಲು ಬಾಲಕಿಯರಿಗೆ ಸಕಾಲಕ್ಕೆ ಅನ್ನ, ಆಹಾರ ನೀಡದೆ ದೈಹಿಕ, ಮಾನಸಿಕ ಕಿರುಕುಳ, ದೈಹಿಕ ಹಲ್ಲೆ, ವೆಶ್ಯವಾಟಿಕೆಗೆ ಸಹಕರಿಸದ ಕಾರಣ ಕಟ್ಟಿ ಹಾಕುವುದು, ಕೂಡಿ ಹಾಕುವುದು, ಬರೆ ಹಾಕಿರುವ ಪ್ರಕರಣಗಳು ಬಯಲಾಗಿವೆ.
ಮಾಹಿತಿ ತಿಳಿದ ಚಿಕ್ಕಬಳ್ಳಾಪುರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಬಾಲಕಿಯರ ಮಂದಿರಕ್ಕೆ ಭೇಟಿ ನೀಡಿ ದೂರು ಆಲಿಸಿ ತನಿಖೆಗೆ ಸೂಚಿಸಿದರು. ಆಗ ಚಿಕ್ಕಬಳ್ಳಾಪುರದ ಸರ್ಕಾರಿ ಬಾಲಕಿಯರ ಮಂದಿರ ಕರ್ಮಗಳು ಬಯಲಾಗಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ