ಯುವಕನ ಕಿರುಕುಳಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
ತನಗೆ ಕಿರುಕುಳ ನೀಡಿದ ಪದವಿ ವಿದ್ಯಾರ್ಥಿ ವರಪ್ರಸಾದ ಎಂಬಾತನ ಮೇಲೆ ಕ್ರಮ ಕೈಗೊಳ್ಳುವಂತೆ ಸೆಲ್ಫಿ ವಿಡಿಯೋದಲ್ಲಿ ವಿನಂತಿಸಿದ್ದಾಳೆ.
ಹೈದರಬಾದ್: ಯುವಕನೊಬ್ಬ ಪ್ರೀತಿಪ್ರೇಮದ ಹೆಸರಿನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ ನಿಡಿದ್ದು, ವಿದ್ಯಾರ್ಥಿನಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಆಂಧ್ರದ ಗುಂಟೂರು ಜಿಲ್ಲೆಯ ಕೊರ‍್ರಪಾಡು ಗ್ರಾಮದಲ್ಲಿ ನಡೆದಿದೆ.
ಯುವಕನ ಕಿರುಕುಳ ಭರಿಸಲಾಗದೆ 10ನೇ ತರಗತಿ ವಿದ್ಯಾರ್ಥಿನಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಗೆ ಕಿರುಕುಳ ನೀಡಿದ ಪದವಿ ವಿದ್ಯಾರ್ಥಿ ವರಪ್ರಸಾದ ಎಂಬಾತನ ಮೇಲೆ ಕ್ರಮ ಕೈಗೊಳ್ಳುವಂತೆ ಸೆಲ್ಫಿ ವಿಡಿಯೋದಲ್ಲಿ ವಿನಂತಿಸಿದ್ದಾಳೆ.
ಮೃತ ವಿದ್ಯಾರ್ಥಿನಿಯ ಕುಟುಂಬದ ಸದಸ್ಯರು ನೀಡಿದ ದೂರು ಆಧರಿಸಿ, ಗುಂಟೂರು ಪೊಲೀಸರು ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.