ಎಂಟು ಮಂದಿ ಶಸ್ತ್ರಧಾರಿಗಳಿಂದ ತಂದೆಯನ್ನು ರಕ್ಷಿಸಿದ ಸಾಹಸಿ ಬಾಲಕಿ

|

Updated on: Aug 07, 2024 | 2:30 PM

ಎಂಟು ಮಂದಿ ಶಸ್ತ್ರಧಾರಿಗಳಿಂದ ತಂದೆಯನ್ನು ಕಾಪಾಡಿ ಬಾಲಕಿಯೊಬ್ಬಳು ಇದೀಗ ಫೇಮಸ್ ಆಗಿದ್ದಾಳೆ. ಕೈಯಲ್ಲಿ ಬಂದೂಕು, ಕತ್ತಿ, ಕೊಡಲಿಗಳನ್ನು ಹಿಡಿದಿದ್ದ ಗುಂಪಿನಿಂದ ತಂದೆಯನ್ನು ರಕ್ಷಿಸಿಕೊಳ್ಳುವಲ್ಲಿ ಆಕೆ ಯಶಸ್ವಿಯಾಗಿದ್ದಾಳೆ.

ಎಂಟು ಮಂದಿ ಶಸ್ತ್ರಧಾರಿಗಳಿಂದ ತಂದೆಯನ್ನು ರಕ್ಷಿಸಿದ ಸಾಹಸಿ ಬಾಲಕಿ
Follow us on

ಸುತ್ತುವರೆದಿದ್ದ ಶಸ್ತ್ರಧಾರಿಗಳಿಂದ ಬಾಲಕಿಯೊಬ್ಬಳು ತಂದೆಯನ್ನು ಕಾಪಾಡಿ ಸಾಹಸ ಮೆರೆದಿದ್ದಾಳೆ. ಛತ್ತೀಸ್​ಗಢದ ಬಸ್ತಾರ್ ಜಿಲ್ಲೆಯ ನಾರಾಯಣಪುರದ ಹಳ್ಳಿಯೊಂದರಲ್ಲಿ ಎಂಟು ಶಸ್ತ್ರಧಾರಿಗಳ ಗುಂಪು ವ್ಯಕ್ತಿಯೊಬ್ಬರನ್ನು ಸುತ್ತುವರೆದಿತ್ತು. ಗುಂಪೊಂದು ಸೋಮಧರ್ ಎಂಬುವವರ ಹುಡುಕಾಟ ನಡೆಸಿತ್ತು, ಮನೆಗೆ ನುಗ್ಗಿ ಕೊಡಲಿಯಿಂದ ಹಲ್ಲೆ ನಡೆಸಿದ್ದರು. ತಂದೆಗೆ ಊಟ ಬಡಿಸಲು ಹೊರಟಿದ್ದ ಬಾಲಕಿ ತಂದೆಯ ಎದುರು ನಿಂತಿದ್ದ ಗುಂಪು ನೋಡಿ ಬೆಚ್ಚಿಬಿದ್ದಿದ್ದಾಳೆ.

ನಾನು ಕಿಟಕಿಯಿಂದ ನೋಡಿದಾಗ ಮುಸುಕುಧಾರಿಗಳು ಕೊಡಲಿ ಹಿಡಿದುಕೊಂಡು ಹೋಗುತ್ತಿರುವುದು ಕಂಡಿದ್ದಳು ಅವರಲ್ಲಿ ಒಬ್ಬರ ಬಳಿ ಬಂದೂಕಿತ್ತು. ಕೊಡಲಿ ಹಿಡಿದ ದಾಳಿಕೋರನ ಕಡೆಗೆ ನುಗ್ಗಿ ಆಯುಧವನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ಆದರೆ ವ್ಯಕ್ತಿಯ ಮೇಲಿನ ದಾಳಿ ವಿಳಂಬವಾಯಿತು.

ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಬಂದು ಗ್ಯಾಂಗ್​ನ ಹಿಡಿಯಲು ಪ್ರಯತ್ನಿಸಿದಾಗ ಅವರು ಓಡಿ ಹೋಗಿದ್ದಾರೆ. ಬಾಲಕಿಯ ತಂದೆಯ ಎದೆಗೆ ಗಾಯವಾಗಿದೆ, ಅವರ ಸ್ಥಿತಿ ಸ್ಥಿರವಾಗಿದೆ.

ಮತ್ತಷ್ಟು ಓದಿ: ಮಾನವ ಹಕ್ಕುಗಳ ಹೆಸರಿನಲ್ಲಿ ಪೊಲೀಸರಿಗೇ ಬ್ಲಾಕ್ ಮೇಲ್ ಮಾಡ್ತಿದ್ದ ಖತರ್ನಾಕ್ ಆಸಾಮಿ ಅಂದರ್​​

ನಾನು ಅವರ ಕಡೆ ಓಡಲಾರಂಭಿಸಿದೆ, ಒಬ್ಬ ವ್ಯಕ್ತಿ ತನ್ನ ಕೊಡಲಿಯನ್ನು ಎತ್ತಿ ತಂದೆಯ ಎದೆಯ ಮೇಲೆ ಇಳಿಸುತ್ತಿರುವುದನ್ನು ನೋಡಿದ್ದೆ. ನಾನು ಕೇವಲ ಒಂದು ಸೆಕೆಂಡ್ ತಡಮಾಡಿದ್ದರೂ ತಂದೆ ಬದುಕುತ್ತಿರಲಿಲ್ಲ. ನಾನು ಗಲಿಬಿಲಿಯಲ್ಲಿ ಅವರ ಮೇಲೆ ಹಾರಿ ಕೊಡಲಿಯನ್ನು ದೂರ ಎಸೆದೆ ಎಂದು ಬಾಲಕಿ ಹೇಳಿದ್ದಾಳೆ.

ಕೊಲೆ ಯತ್ನದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಾರಾಯಣಪುರ ಪ್ರಭಾತ್ ಸಿಂಗ್ ಹೇಳಿದ್ದಾರೆ. ಕುಟುಂಬದವರು ಮಾವೋವಾದಿಗಳ ಕೈವಾಡವನ್ನು ಶಂಕಿಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ