Video Viral: ಧಾರಾಕಾರ ಮಳೆಗೆ ಹಳ್ಳಿಗೆ ಬಂದ ಮೊಸಳೆ; ಕಾಲಿನಲ್ಲಿ ಒದ್ದು ಓಡಿಸಿದ ವ್ಯಕ್ತಿ
ವೈರಲ್ ಆಗಿರುವ ವಿಡಿಯೋದಲ್ಲಿ ಮೊಸಳೆ ಹಳ್ಳಿಯ ಬೀದಿಬದಿಯಲ್ಲಿ ತೆವಳುತ್ತಿದ್ದು, ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮೊಸಳೆಯನ್ನು ಕಾಲಿನಲ್ಲಿ ಒದ್ದಿದ್ದಾನೆ. ಇದರಿಂದ ಭಯಗೊಂಡ ಮೊಸಳೆ ವೇಗವಾಗಿ ತವಳುತ್ತಾ ಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಉತ್ತರ ಪ್ರದೇಶ: ಧಾರಾಕಾರ ಮಳೆಯ ಪರಿಣಾಮ ಹಳ್ಳಿಯೊಳಗೆ ಮೊಸಳೆಯೊಂದು ಬಂದಿದ್ದು, ಒಂದೆಡೆ ಸ್ಥಳೀಯರು ನೋಡಿ ಬೆಚ್ಚಿ ಬಿದ್ದರೆ, ಮತ್ತೊಂದೆಡೆ ವ್ಯಕ್ತಿ ಕಾಲಿನಿಂದ ಒದ್ದು ಹಿಂಸಿಸಿದ್ದಾನೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಸರೀಸೃಪವು ಬುಧವಾರ ಬೆಳಗ್ಗೆ ನಂಗಲ್ ಸೋತಿ ಗ್ರಾಮದಲ್ಲಿ ಅಡ್ಡಾಡುತ್ತಿದ್ದು, ದಾರಿ ಕಾಣದೆ ಮೂರು ಗಂಟೆಗಳ ಕಾಲ ಹಳ್ಳಿಯ ಬೀದಿಗಳಲ್ಲಿ ತೆವಳುತ್ತಾ ಜನರನ್ನು ಬೆಚ್ಚಿಬೀಳಿಸಿದೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಮೊಸಳೆ ಹಳ್ಳಿಯ ಬೀದಿಬದಿಯಲ್ಲಿ ತೆವಳುತ್ತಿದ್ದು, ಮೊಸಳೆಯ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮೊಸಳೆಯನ್ನು ಕಾಲಿನಲ್ಲಿ ಒದ್ದಿದ್ದಾನೆ. ಇದರಿಂದ ಭಯಗೊಂಡ ಮೊಸಳೆ ವೇಗವಾಗಿ ತವಳುತ್ತಾ ಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
बिजनौर : जंगल से निकलकर गांव में घुसा मगरमच्छ
गांव की गलियों में घंटों तक टहलता रहा मगरमच्छ
वन विभाग की टीम ने मगरमच्छ का किया रेस्क्यू
बिजनौर के नांगल सोती गांव का मामला@bijnorpolice @UpforestUp #Bijnor #UPNews pic.twitter.com/rqmbAdUWAa
— News1India (@News1IndiaTweet) August 7, 2024
ಇದನ್ನೂ ಓದಿ: ರೀಲ್ಸ್ ಮಾಡಲು ಹೋದ ಯುವಕ, ಜಲಪಾತದಿಂದ 150 ಅಡಿ ಆಳಕ್ಕೆ ಬಿದ್ದು ಸಾವು
ಮೊಸಳೆಯನ್ನು ಕಂಡ ಗ್ರಾಮಸ್ಥರು ಘಟನೆಯ ಕುರಿತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಮಾಹಿತಿ ನೀಡಿದ ಸುಮಾರು ಎರಡು ಗಂಟೆಗಳ ನಂತರ ಅರಣ್ಯ ಇಲಾಖೆ ಗ್ರಾಮಕ್ಕೆ ಭೇಟಿ ನೀಡಿ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ಸದ್ಯ ಮೊಸಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ