ಭರೂಚ್ (ಗುಜರಾತ್): ಗುಜರಾತ್‌ನ (Gujarat) ಭರೂಚ್‌ನಲ್ಲಿ ಭಾನುವಾರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ (Arvind Kejriwal) ಗುಜರಾತ್‌ನ ಶಾಲೆಗಳ ಸ್ಥಿತಿ ನಿಜವಾಗಿಯೂ ಕೆಟ್ಟದಾಗಿದೆ ಎಂದು ಹೇಳಿದ್ದಾರೆ. “ಗುಜರಾತ್‌ನಲ್ಲಿ 6,000 ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇನ್ನೂ ಹಲವು ಶಿಥಿಲಾವಸ್ಥೆಯಲ್ಲಿವೆ. ಲಕ್ಷ ಲಕ್ಷ ಮಕ್ಕಳ ಭವಿಷ್ಯ ಅಸ್ತವ್ಯಸ್ತಗೊಂಡಿದೆ. ನಾವು ದೆಹಲಿಯಲ್ಲಿ ಶಾಲೆಗಳನ್ನು ಬದಲಾಯಿಸಿದ ರೀತಿಯಲ್ಲಿ ನಾವು ಈ ಭವಿಷ್ಯವನ್ನು ಬದಲಾಯಿಸಬಹುದು ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ. ಅದೇ ವೇಳೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಅವರಿಗೆ ಕೇಜ್ರಿವಾಲ್ ಸವಾಲೆಸೆದಿದ್ದಾರೆ. “ಗುಜರಾತ್‌ನಲ್ಲಿ ಪರೀಕ್ಷೆ ವೇಳೆ ಪೇಪರ್ ಸೋರಿಕೆಯಲ್ಲಿ ಬಿಜೆಪಿ ವಿಶ್ವದಾಖಲೆ ಮಾಡುತ್ತಿದೆ. ಪೇಪರ್ ಸೋರಿಕೆಯಾಗದಂತೆ ಒಂದೇ ಪರೀಕ್ಷೆ ನಡೆಸುವಂತೆ ನಾನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಸವಾಲು ಹಾಕುತ್ತೇನೆ” ಎಂದಿದ್ದಾರೆ ಕೇಜ್ರಿವಾಲ್. “ನಮಗೆ ಒಂದು ಅವಕಾಶ ನೀಡಿ, ನಾನು ಈ ಅವಕಾಶದಲ್ಲಿ ಶಾಲೆಗಳನ್ನು ಸುಧಾರಿಸದಿದ್ದರೆ ನೀವು ನನ್ನನ್ನು ಹೊರದಬ್ಬಬಹುದು ಎಂದು ಕೇಜ್ರಿವಾಲ್ ಗುಜರಾತಿನ ಜನರಲ್ಲಿ ಹೇಳಿದ್ದಾರೆ.
ದೆಹಲಿಯಲ್ಲಿ 4 ಲಕ್ಷ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಂದ ದೆಹಲಿ ಸರ್ಕಾರ ನಡೆಸುವ ಶಾಲೆಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಿದ ಕೇಜ್ರಿವಾಲ್, ದೆಹಲಿಯಲ್ಲಿ ಶ್ರೀಮಂತರು ಮತ್ತು ಬಡವರ ಮಕ್ಕಳು ಒಟ್ಟಿಗೆ ಕಲಿಯುತ್ತಿದ್ದಾರೆ ಎಂದಿದ್ದಾರೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೇರಿದ ನಂತರ 27 ವರ್ಷಗಳಿಂದ ಬಿಜೆಪಿ ಆಳ್ವಿಕೆ ನಡೆಸುತ್ತಿರುವ ರಾಜ್ಯದಲ್ಲಿ ಬುಡಕಟ್ಟು ಪ್ರದೇಶಗಳನ್ನು ಕೇಜ್ರಿವಾಲ್ ಗುರಿಯಾಗಿಸಿಕೊಂಡಿದ್ದಾರೆ. 2017ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 27 ಬುಡಕಟ್ಟು ಪ್ರಾಬಲ್ಯವಿರುವ ಸ್ಥಾನಗಳ ಪೈಕಿ 15 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿತ್ತು.
BJP वाले मुझे खूब गाली देते हैं कि “केजरीवाल सब FREE कर रहा है।”
ईमानदार हूं इसलिए जनता के लिए फ्री कर रहा हूं। तुम लोग बेईमान हो, इसलिए फ्री नहीं कर रहे।
-CM @ArvindKejriwal #AAPGujaratAadivasiSammelan pic.twitter.com/SNu2sNHRy1
— AAP (@AamAadmiParty) May 1, 2022
ಕಳೆದ ತಿಂಗಳು ಎಎಪಿ ತನ್ನ ಆಂತರಿಕ ಸಮೀಕ್ಷೆಯು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗುಜರಾತ್‌ನಲ್ಲಿ ಸುಮಾರು 58 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಗ್ರಾಮೀಣ ಪ್ರದೇಶಗಳು ಮತ್ತು ನಗರ ಪ್ರದೇಶಗಳಲ್ಲಿ ಕೆಳ ಮತ್ತು ಮಧ್ಯಮ ವರ್ಗದ ಭಾಗಗಳಿಂದ ಮತಗಳು ಬರುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ.
ಇಂದು ನಡೆದ ರ್ಯಾಲಿಯಲ್ಲಿ ಕೇಜ್ರಿವಾಲ್ ಅವರು ಗುಜರಾತ್‌ನಲ್ಲಿ 1 ಕೋಟಿಗೂ ಹೆಚ್ಚು ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಅಂದ ಹಾಗೆ ದೇಶದ ಇಬ್ಬರು ಶ್ರೀಮಂತರು ಮತ್ತು ಬಡ ಬುಡಕಟ್ಟು ಜನಾಂಗದವರು ಗುಜರಾತಿನವರೇ ಆಗಿದ್ದಾರೆ ಎಂದು ಹೇಳಿದ್ದಾರೆ .
ಒಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್ ಶ್ರೀಮಂತರ ಜೊತೆ ನಿಂತು ಅವರನ್ನು ಶ್ರೀಮಂತರನ್ನಾಗಿಸುತ್ತಿವೆ. ಆದರೆ ನಾವು ಬಡವರ ಜೊತೆ ನಿಲ್ಲುತ್ತೇವೆ ಎಂಬುದನ್ನು ನಿಮಗೆ ಹೇಳಲು ನಾನು ಇಲ್ಲಿದ್ದೇನೆ. ಪಂಜಾಬ್‌ನಲ್ಲಿ ತಮ್ಮ ಪಕ್ಷವು ದೊಡ್ಡ ಮಟ್ಟದ ಗೆಲುವು ಸಾಧಿಸಿದ ನಂತರ ಕೇಜ್ರಿವಾಲ್ ಮೊದಲ ಸಾರ್ವಜನಿಕ ರ್ಯಾಲಿಯನ್ನು ಬುಡಕಟ್ಟು ಪ್ರದೇಶದಿಂದ ನಡೆಸಿದ್ದಾರೆ. “ಬುಡಕಟ್ಟು ಜನಾಂಗದವರು ದೀರ್ಘಕಾಲದವರೆಗೆ ಶೋಷಣೆಗೆ ಒಳಗಾಗಿದ್ದಾರೆ. ಅವರು ಮೊದಲು ಬ್ರಿಟಿಷರಿಂದ ಶೋಷಣೆಗೆ ಒಳಗಾದರು ಮತ್ತು ಈಗಲೂ ಅವರು ಶೋಷಣೆಗೆ ಒಳಗಾಗುತ್ತಿದ್ದಾರೆ… ನಾವು ಸಾಮಾನ್ಯ ಜನರ ಪಕ್ಷವೇ ಹೊರತು ಶ್ರೀಮಂತರದಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ