Young Earth Champions 2022: ಯಂಗ್ ಅರ್ಥ್ ಚಾಂಪಿಯನ್ಸ್ ಪ್ರಶಸ್ತಿ ಗೆದ್ದು, ಗ್ಲೋಬಲ್ ಚಾಂಪ್ಸ್ ಆಗಿ ಹೊರಹೊಮ್ಮಿದ ಭಾರತದ ಮಕ್ಕಳು
ಈ ಒಂದು ಸ್ಪರ್ಧೆಯಲ್ಲಿ ವಿಶ್ವದ ಕೆಲವು ಅತ್ಯುತ್ತಮ ವ್ಯವಹಾರಿಕ ಶಾಲೆಗಳು ಮತ್ತು ನೀತಿ ಶಾಲೆಗಳನ್ನು ಒಳಗೊಂಡಂತೆ ಜಾಗತಿಕವಾಗಿ ಕೆಲವು ಅತ್ಯುತ್ತಮ ತಂಡಗಳೊಂದಿಗೆ ಸ್ಪರ್ಧಿಸುವುದನ್ನು ನೋಡಲು ತುಂಬಾ ಸಂತೋಷವಾಗಿದೆ.

ಡೆಕ್ಸ್ಟೆರಿಟಿಯ ಐದು ನಾವೀನ್ಯಕಾರರ ತಂಡವು 2022 ರ ಯಂಗ್ ಅರ್ಥ್ ಚಾಂಪಿಯನ್ಸ್ (Young Earth Champions) ಪ್ರಶಸ್ತಿಯನ್ನು ಗೆದ್ದಿದ್ದು, ಭಾರತದ ಮಕ್ಕಳು ಗ್ಲೋಬಲ್ ಚಾಂಪ್ಸ್ ಆಗಿ ಹೊರಹೊಮ್ಮಿದ್ದಾರೆ ಎಂದು ಘೋಷಿಸಲು ನಾವು ತುಂಬಾ ಹೆಮ್ಮೆಪಡುತ್ತೇವೆ. ಅರ್ಜುನ್ – ದೆಹಲಿ, ಯಶಸ್ವಿನ್ – ತೆಲಂಗಾಣ, ಸ್ವೀಗಾ – ತಮಿಳುನಾಡು, ವೇದಾಂತ್ – ಮೂಲತಃ ಕರ್ನಾಟಕ ಬೀದರ್ ಈಗ ತೆಲಂಗಾಣದಲ್ಲಿರುವುದು ಮತ್ತು ಸಾಕೇತ್ – ತೆಲಂಗಾಣ ಈ ಐದು ಜನ ಒಲಗೊಂಡ ತಂಡ ಜಾಗತಿಕ ಪ್ರಶಸ್ತಿಯನ್ನು ಸ್ವೀಕರಿಸಲು ಈಗ ಪ್ಯಾರಿಸ್‌ನಲ್ಲಿರುವ ಯುನೆಸ್ಕೋ ಪ್ರಧಾನ ಕಚೇರಿಗೆ ತೆರಳಲಿದ್ದಾರೆ ಎಂದು ದಿ ಡೆಕ್ಸ್ಟೆರಿಟಿ ಗ್ಲೋಬಲ್ ಗ್ರೂಪ್ ತಿಳಿಸಿದೆ.
View this post on Instagram
ನಮ್ಮ ಯೋಜನೆಯು ಹವಾಮಾನ ಬದಲಾವಣೆಯಿಂದ ಉಂಟಾದ ಸಮಸ್ಯೆಯನ್ನು ಪರಿಹರಿಸುವುದರ ಮೇಲೆ ಆಧಾರಿತವಾಗಿದೆ. ಅಸ್ಸಾಂನಲ್ಲಿ ಹವಾಮಾನ ಬದಲಾವಣೆಯ ಪ್ರವಾಹದಿಂದಾಗಿ ಮನೆಗಳು ನಾಶವಾದವು, ಆದ್ದರಿಂದ ನಾವು ನಾಶವಾಗದ ಮತ್ತು ಪ್ರವಾಹಕ್ಕೆ ಒಳಗಾಗದ ಮನೆಗಳನ್ನು ವಿನ್ಯಾಸಗೊಳಿಸಿದ್ದೇವೆ. ಈ ಒಂದು ಸ್ಪರ್ಧೆಯಲ್ಲಿ ವಿಶ್ವದ ಕೆಲವು ಅತ್ಯುತ್ತಮ ವ್ಯವಹಾರಿಕ ಶಾಲೆಗಳು ಮತ್ತು ನೀತಿ ಶಾಲೆಗಳನ್ನು ಒಳಗೊಂಡಂತೆ ಜಾಗತಿಕವಾಗಿ ಕೆಲವು ಅತ್ಯುತ್ತಮ ತಂಡಗಳೊಂದಿಗೆ ಸ್ಪರ್ಧಿಸುವುದನ್ನು ನೋಡಲು ತುಂಬಾ ಸಂತೋಷವಾಗಿದೆ ಎಂದು ತಂಡದಲ್ಲಿ ಒಬ್ಬರಾದ ವೇದಾಂತ್ ಆನಂದವಾಡೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಡಾ. ಪ್ರಭು ಮತ್ತು ಡಾ. ವಿಜಯಲಕ್ಷ್ಮಿ ಆನಂದವಾಡೆ ಅವರ ಮಗನಾದ ವೇದಾಂತ್ ಮೂಲತಃ ನೂಟ್ ಸಿರ್ಸಿ ಭಾಲ್ಕಿ ತಾಲೂಕಿನ ಬೀದರ್ ಜಿಲ್ಲೆಯವರು. ಅವರ ಹೆತ್ತವರು ವೃತ್ತಿಯಿಂದ ವೈದ್ಯಾರಾಗಿದ್ದಾರೆ. ಮಕ್ಕಳ ಶಿಕ್ಷಣಕ್ಕೆ ಅವರು ಸದ್ಯ ಹೈದರಾಬಾದ್‌ನಲ್ಲಿ ವಾಸವಾಗಿದ್ದಾರೆ. (ನಾವು ಲಿಂಗಾಯತಕ್ಕೆ ಸೇರಿದವರು).
ಇಂಪೀರಿಯಲ್ ಕಾಲೇಜ್ ಲಂಡನ್, IIT ಬಾಂಬೆ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, HEC ಪ್ಯಾರಿಸ್ ಮತ್ತು HKUST. ಅಲ್ಲಿರುವ ಕಿರಿಯ ತಂಡಗಳಲ್ಲಿ ನಮ್ಮದು ಒಂದಾಗಿದ್ದು, ತಮ್ಮ ಸಹ ಸ್ಪರ್ಧಿಗಳಿಂದ ತುಂಬಾ ಕಲಿತಿದ್ದೇವೆ. ಮತ್ತು ನಾವು ಅಂತಿಮವಾಗಿ ಸ್ಪರ್ಧೆಯನ್ನು ಗೆದ್ದಿದ್ದೇವೆ ಎಂದು ಹೆಮ್ಮೆ ಪಡುತ್ತೇನೆ. ಕರ್ನಾಟಕದಿಂದ ಮೊದಲ ಭಾರಿಗೆ ಭಾಲ್ಕಿಯಿಂದ (ಯುನೆಸ್ಕೋ) ಗೆ ಪ್ರಯಾಣ ಬೆಳೆಸಿದ ಕಲ್ಯಾಣ ಕರ್ನಾಟಕದ ಮೊದಲ ವ್ಯಕ್ತಿಯಾಗಿದ್ದೇನೆ. ಎಲ್ಲಕ್ಕಿಂತ ಹೆಚ್ಚಾಗಿ ಸದ್ಗುರು ಅವರ ಮಣ್ಣು ಉಳಿಸಿ ಆಂದೋಲನವು ಈ ದಿನಗಳಲ್ಲಿ ಟ್ರೆಂಡ್ ಆಗುತ್ತಿದೆ. ಇದು ನಿಜವಾದ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:18 pm, Sun, 1 May 22




