ಬ್ಯಾಂಕಿಂಗ್ ವಲಯಕ್ಕೆ ಆರ್ಥಿಕ ಹಿಂಜರಿತ ಆಪತ್ತು, 77 ಸಾವಿರ ಉದ್ಯೋಗಿಗಳಿಗೆ ಕುತ್ತು!

ದೆಹಲಿ: ಜಾಗತಿಕ ಬ್ಯಾಂಕಿಂಗ್ ವಲಯಕ್ಕೆ ಆರ್ಥಿಕ ಹಿನ್ನಡೆ ಪೆಟ್ಟು ನೀಡಿದೆ. ಡಿಜಿಟಲ್ ತಂತ್ರಜ್ಞಾನದಿಂದ 4 ವರ್ಷಗಳಲ್ಲಿ ಅತ್ಯಧಿಕ ಉದ್ಯೋಗ ನಷ್ಟವಾಗಿದೆ. ಮುಂದಿನ ದಿನಗಳು ಇನ್ನಷ್ಟು ಉದ್ಯೋಗಕ್ಕೆ ಕತ್ತರಿ ಬೀಳಲಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ಬ್ಯಾಂಕಿಂಗ್ ವಲಯದ ಉದ್ಯೋಗಕ್ಕೆ ಪೆಟ್ಟುನೀಡಿದೆ. ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಭಾರಿ ಆಘಾತ ನೀಡಿದೆ. ಕಳೆದ 4ವರ್ಷಗಳಲ್ಲಿ ಜಾಗತಿಕವಾಗಿ ಬ್ಯಾಂಕ್​ ಉದ್ಯೋಗಿಗಳು ಯಥೇಚ್ಛ ಪ್ರಮಾಣದಲ್ಲಿ ಕೆಲಸ ಕಳೆದುಕೊಂಡಿದ್ದಾರೆ ಅನ್ನೋದು ವರದಿಯಿಂದ ಬಹಿರಂಗವಾಗಿದೆ. ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಲು ಚಿಂತನೆ: ಉದ್ಯೋಗಿಗಳನ್ನು ನೇಮಿಸುವ ಕಂಪನಿ ಮತ್ತು ಕಾರ್ಮಿಕ […]

ಬ್ಯಾಂಕಿಂಗ್ ವಲಯಕ್ಕೆ ಆರ್ಥಿಕ ಹಿಂಜರಿತ ಆಪತ್ತು, 77 ಸಾವಿರ ಉದ್ಯೋಗಿಗಳಿಗೆ ಕುತ್ತು!
ಸಾಂದರ್ಭಿಕ ಚಿತ್ರ
Follow us
ಸಾಧು ಶ್ರೀನಾಥ್​
|

Updated on:Dec 28, 2019 | 11:18 AM

ದೆಹಲಿ: ಜಾಗತಿಕ ಬ್ಯಾಂಕಿಂಗ್ ವಲಯಕ್ಕೆ ಆರ್ಥಿಕ ಹಿನ್ನಡೆ ಪೆಟ್ಟು ನೀಡಿದೆ. ಡಿಜಿಟಲ್ ತಂತ್ರಜ್ಞಾನದಿಂದ 4 ವರ್ಷಗಳಲ್ಲಿ ಅತ್ಯಧಿಕ ಉದ್ಯೋಗ ನಷ್ಟವಾಗಿದೆ. ಮುಂದಿನ ದಿನಗಳು ಇನ್ನಷ್ಟು ಉದ್ಯೋಗಕ್ಕೆ ಕತ್ತರಿ ಬೀಳಲಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟು ಬ್ಯಾಂಕಿಂಗ್ ವಲಯದ ಉದ್ಯೋಗಕ್ಕೆ ಪೆಟ್ಟುನೀಡಿದೆ. ಡಿಜಿಟಲ್ ತಂತ್ರಜ್ಞಾನ ಅಳವಡಿಕೆ ಭಾರಿ ಆಘಾತ ನೀಡಿದೆ. ಕಳೆದ 4ವರ್ಷಗಳಲ್ಲಿ ಜಾಗತಿಕವಾಗಿ ಬ್ಯಾಂಕ್​ ಉದ್ಯೋಗಿಗಳು ಯಥೇಚ್ಛ ಪ್ರಮಾಣದಲ್ಲಿ ಕೆಲಸ ಕಳೆದುಕೊಂಡಿದ್ದಾರೆ ಅನ್ನೋದು ವರದಿಯಿಂದ ಬಹಿರಂಗವಾಗಿದೆ.

ಉದ್ಯೋಗಿಗಳನ್ನ ಕೆಲಸದಿಂದ ತೆಗೆದುಹಾಕಲು ಚಿಂತನೆ: ಉದ್ಯೋಗಿಗಳನ್ನು ನೇಮಿಸುವ ಕಂಪನಿ ಮತ್ತು ಕಾರ್ಮಿಕ ಸಂಘಗಳ ಪ್ರಕಾರ, ಈ ವರ್ಷ 77,780 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು 50ಕ್ಕೂ ಹೆಚ್ಚು ಬ್ಯಾಂಕ್​ಗಳು ಚಿಂತನೆ ನಡೆಸಿವೆ. 2015ರಲ್ಲಿ 91,448 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಯುರೋಪ್ ಬ್ಯಾಂಕುಗಳು ಕೂಡ ನಕಾರಾತ್ಮಕ ಹೆಚ್ಚುವರಿ ಬಡ್ಡಿದರ ಹೊರೆ ಎದುರಿಸುತ್ತಿದೆ. ವಾಸ್ತವವಾಗಿ ಅನೇಕ ಬ್ಯಾಂಕ್​ಗಳು ಸಿಬ್ಬಂದಿಗೆ ಸೂಚನೆಯನ್ನೂ ನೀಡದೆಯೇ ಕೆಲಸದಿಂದ ಕಿತ್ತು ಹಾಕಿವೆ.

ಮಾರ್ಗನ್ ಸ್ಟಾನ್ಲಿ ಸಂಸ್ಥೆ ಸಿಬ್ಬಂದಿಗೂ ಗೇಟ್ ಪಾಸ್: ಮಾರ್ಗನ್ ಸ್ಟಾನ್ಲಿ ಸಂಸ್ಥೆಯೂ 1500 ಕ್ಕೂ ಅಧಿಕ ಸಿಬ್ಬಂದಿಗೆ ಗೇಟ್ ಪಾಸ್​ ನೀಡಿದೆ. ಈ ಸಂಸ್ಥೆಯಲ್ಲಿ ಶೇ.2ಗೂ ಅಧಿಕ ಉದ್ಯೋಗಿಗಳನ್ನು ತೆಗೆದುಹಾಕಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್​ ಜಾರ್ಮನ್​ ಹೇಳಿದ್ದಾರೆ. ಅಲ್ದೆ, ಜರ್ಮನಿಯ ಅತಿದೊಡ್ಡ ಸಂಸ್ಥೆಗಳು ಉದ್ಯೋಗ ಕಡಿತಕ್ಕೆ ಪಟ್ಟಿ ಸಿದ್ಧತೆ ಮಾಡಿಕೊಂಡಿದೆ. ಡಾಯ್ಚ್ ಬ್ಯಾಂಕ್, ಎಜಿ ತನ್ನ ಬ್ಯಾಂಕಿಂಗ್ ಹೂಡಿಕೆ ವ್ಯವಹಾರದ ದೊಡ್ಡ ಭಾಗದಿಂದ ಹಿಂದೆ ಸರಿಯುವುದರಿಂದ, 2022 ರ ವೇಳೆಗೆ 18,000 ಉದ್ಯೋಗಿಗಳನ್ನು ತೆಗೆದುಹಾಕಲು ಯೋಜನೆ ಹಾಕಿಕೊಂಡಿದೆ.

ಈ ವರ್ಷದ ಅಂಕಿ-ಅಂಶಗಳು ಯುರೋಪಿಯನ್ ಬ್ಯಾಂಕುಗಳ ಆರ್ಥಿಕ ದೌರ್ಬಲ್ಯದ ಸ್ಥಿತಿಗತಿಯೂ ಗಂಭೀರವಾಗಿದೆ. ರಫ್ತು ಆಧಾರಿತ ಆರ್ಥಿಕತೆಯು ಅಂತಾರಾಷ್ಟ್ರೀಯ ವಾಣಿಜ್ಯ ಸಂಘರ್ಷಗಳನ್ನು ಎದುರಿಸುತ್ತಿದ್ರೆ, ಕೆಟ್ಟ ಬಡ್ಡಿದರ, ಸಾಲದ ಆದಾಯವನ್ನು ಕಿತ್ತು ತಿನ್ನುತ್ತಿವೆ. ಯುರೋಪ್​ನಲ್ಲಿ ಹಲವು ಬ್ಯಾಂಕ್​ಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಥವಾ ತಮ್ಮ ಹೆಜ್ಜೆ ಗುರುತನ್ನು ಮರಳಿ ಪಡೆಯಲು ಹೆಣಗಾಡುತ್ತಿವೆ. ಅನೇಕ ಸಂಸ್ಥೆಗಳು ಸಿಬ್ಬಂದಿಯನ್ನ ವಜಾಗೊಳಿಸಿದ್ದಾರೆ ಮತ್ತು ಲಾಭ ಹೆಚ್ಚಿಸಲು ವ್ಯವಹಾರವನ್ನು ಮಾರಾಟ ಮಾಡ್ತಿವೆ. ಒಟ್ನಲ್ಲಿ, ಆರ್ಥಿಕ ಬಿಕ್ಕಟ್ಟು ಬ್ಯಾಂಕಿಂಗ್ ಉದ್ಯೋಗಕ್ಕೆ ಕುತ್ತು ತಂದಿದ್ದು, ಸಾವಿರಾರು ಉದ್ಯೋಗಿಗಳು ಮನೆ ಸೇರ್ತಿದ್ದಾರೆ.

Published On - 11:17 am, Sat, 28 December 19