ಹೈದರಾಬಾದ್: ಮಹಾನಗರದ ಹೊರವಲಯದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಗೊ ಕಾರ್ಟ್ ಪ್ಲೇ (Go kart play) ಜೋನ್ನಲ್ಲಿ ಯುವತಿಯೊಬ್ಬಳು ದಾರುಣವಾಗಿ ಸಾವು ಕಂಡಿದ್ದಾಳೆ. ಗೊ ಕಾರ್ಟ್ ಕಾರಿನಲ್ಲಿ ಜಾಲಿ ಶಿಕಾರಿ ಮಾಡುವಾಗ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ. ದುರ್ಘಟನೆ ಸಂಭವಿಸಿದ್ದು ಹೇಗೆ ಯುವಕನೋರ್ವ ಕಾರ್ ಡ್ರೈವಿಂಗ್ ಮಾಡುವಾಗ ಆತನ ಪಕ್ಕದಲ್ಲಿ ಕುಳಿತಿದ್ದ ಆ ಯುವತಿ ಗಂಭೀರವಾಗಿ ಗಾಯಗೊಂಡಿದ್ದಳು. ಬಿ. ಟೆಕ್ ಫೈನಲ್ ಇಯರ್ ವಿದ್ಯಾರ್ಥಿ ಶ್ರೀವರ್ಷಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದ ಯುವತಿ. ಗೊ kart play ಜೋನ್ […]
Follow us on
ಹೈದರಾಬಾದ್: ಮಹಾನಗರದ ಹೊರವಲಯದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಗೊ ಕಾರ್ಟ್ ಪ್ಲೇ (Go kart play) ಜೋನ್ನಲ್ಲಿ ಯುವತಿಯೊಬ್ಬಳು ದಾರುಣವಾಗಿ ಸಾವು ಕಂಡಿದ್ದಾಳೆ. ಗೊ ಕಾರ್ಟ್ ಕಾರಿನಲ್ಲಿ ಜಾಲಿ ಶಿಕಾರಿ ಮಾಡುವಾಗ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ.
ದುರ್ಘಟನೆ ಸಂಭವಿಸಿದ್ದು ಹೇಗೆ ಯುವಕನೋರ್ವ ಕಾರ್ ಡ್ರೈವಿಂಗ್ ಮಾಡುವಾಗ ಆತನ ಪಕ್ಕದಲ್ಲಿ ಕುಳಿತಿದ್ದ ಆ ಯುವತಿ ಗಂಭೀರವಾಗಿ ಗಾಯಗೊಂಡಿದ್ದಳು. ಬಿ. ಟೆಕ್ ಫೈನಲ್ ಇಯರ್ ವಿದ್ಯಾರ್ಥಿ ಶ್ರೀವರ್ಷಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದ ಯುವತಿ. ಗೊ kart play ಜೋನ್ ನಿರ್ವಾಹಕರ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. ಯುವತಿಯ ಪೋಷಕರು ಮೀರ್ ಪೇಟ್ ಪೊಲೀಸರಿಗೆ ದೂರು ನೀಡಿದ್ದಾರೆ.