Goa Fire Tragedy: ಬೆಂಕಿಯಿಂದ ಪತ್ನಿಯ ರಕ್ಷಿಸಿ, ಮೂವರು ನಾದಿನಿಯರನ್ನು ಕಾಪಾಡಲು ಹೋಗಿ ಬೆಂಕಿಯಲ್ಲಿ ಬೆಂದು ಹೋದ ವ್ಯಕ್ತಿ
ಗೋವಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನಲ್ಲಿ ನಡೆದ ಅಗ್ನಿ ಅವಘಡದಲ್ಲಿ 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಂದು ಡಿಸೆಂಬರ್ 6. ವಿನೋದ್ ಕುಮಾರ್ ತನ್ನ ಕುಟುಂಬದೊಂದಿಗೆ ರಜೆಯನ್ನು ಎಂಜಾಯ್ ಮಾಡಲು ಗೋವಾಗೆ ತೆರಳಿದ್ದರು. ಉತ್ತರ ಪ್ರದೇಶ ಗಾಜಿಯಾಬಾದ್ ಇವರ ಮೂಲ, ರಜೆಯು ದುರಂತದಲ್ಲಿ ಕೊನೆಗೊಂಡಿತ್ತು. ವಿನೋದ್ ಕುಮಾರ್ ತಮ್ಮ ಪತ್ನಿಯನ್ನು ಬೆಂಕಿಯಿಂದ ರಕ್ಷಿಸಿ ಬಳಿಕ ಮೂವರು ನಾದಿನಿಯರನ್ನು ರಕ್ಷಿಸಲು ಹೋಗಿ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಕುಟುಂಬವು ಡಿಸೆಂಬರ್ 4 ರಂದು ಗೋವಾಕ್ಕೆ ಆಗಮಿಸಿ ಬಾಗಾದಲ್ಲಿರುವ ಹೋಟೆಲ್‌ನಲ್ಲಿ ತಂಗಿತ್ತು.

ಪಣಜಿ, ಡಿಸೆಂಬರ್ 09: ಗೋವಾ(Goa)ದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನಲ್ಲಿ ನಡೆದ ಅಗ್ನಿ ಅವಘಡದಲ್ಲಿ 25 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಂದು ಡಿಸೆಂಬರ್ 6. ವಿನೋದ್ ಕುಮಾರ್ ತನ್ನ ಕುಟುಂಬದೊಂದಿಗೆ ರಜೆಯನ್ನು ಎಂಜಾಯ್ ಮಾಡಲು ಗೋವಾಗೆ ತೆರಳಿದ್ದರು. ಉತ್ತರ ಪ್ರದೇಶ ಗಾಜಿಯಾಬಾದ್ ಇವರ ಮೂಲ. ರಜೆಯು ದುರಂತದಲ್ಲಿ ಕೊನೆಗೊಂಡಿತ್ತು. ವಿನೋದ್ ಕುಮಾರ್ ತಮ್ಮ ಪತ್ನಿಯನ್ನು ಬೆಂಕಿಯಿಂದ ರಕ್ಷಿಸಿ ಬಳಿಕ ಮೂವರು ನಾದಿನಿಯರನ್ನು ರಕ್ಷಿಸಲು ಹೋಗಿ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಕುಟುಂಬವು ಡಿಸೆಂಬರ್ 4 ರಂದು ಗೋವಾಕ್ಕೆ ಆಗಮಿಸಿ ಬಾಗಾದಲ್ಲಿರುವ ಹೋಟೆಲ್‌ನಲ್ಲಿ ತಂಗಿತ್ತು.
ಶನಿವಾರ ರಾತ್ರಿ ಅವರು ನೈಟ್‌ಕ್ಲಬ್‌ಗೆ ಭೇಟಿ ನೀಡಿದ್ದರು. ಬೆಂಕಿ ಹೊತ್ತಿಕೊಂಡಾಗ ಕೇವಲ 15 ನಿಮಿಷಗಳ ಕಾಲ ಒಳಗೆ ಇದ್ದರು. ಬೆಂಕಿ ಹರಡುತ್ತಿದ್ದಂತೆ, ವಿನೋದ್ ಕುಮಾರ್ ತನ್ನ ಪತ್ನಿ ಭಾವನಾ ಜೋಶಿಯನ್ನು ಮುಖ್ಯ ದ್ವಾರದ ಮೂಲಕ ಹೊರಗೆ ತಳ್ಳಿ, ನಾದಿನಿಯರನ್ನು ಕಾಪಾಡಲು ಮತ್ತೆ ಒಳಗೆ ಹೋಗಿದ್ದರು. ಭಾವನಾ ಅವರ ಮೂವರು ಸಹೋದರಿಯರಾದ ಅನಿತಾ, ಸರೋಜ್ ಮತ್ತು ಕಮಲಾ ಅವರನ್ನು ರಕ್ಷಿಸಿದರು.
ಹೊರಗೆ ಹೋಗಲು ಯತ್ನಿಸುತ್ತಿರುವಾಗ ಕುಮಾರ್ ಬೆಂಕಿಯಲ್ಲಿ ಸಿಲುಕಿಕೊಂಡರು ಮತ್ತು ನಾಲ್ವರು ಕೂಡ ಬೆಂಕಿಯ ಜ್ವಾಲೆಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಭಾವನಾ ಕ್ಲಬ್ ಹೊರಗೆ ಕಾಯುತ್ತಿದ್ದರು ಮತ್ತು ಹೋಟೆಲ್ ಸಿಬ್ಬಂದಿಯಿಂದ ಸಹಾಯ ಪಡೆದು ಪತಿಯನ್ನು ಫೋನ್‌ನಲ್ಲಿ ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು.
ಮತ್ತಷ್ಟು ಓದಿ: Video: ಗೋವಾದ ನೈಟ್‌ಕ್ಲಬ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ಹೇಗೆ? ಇಲ್ಲಿದೆ ಕಾರಣ
ಕುಟುಂಬ ಸದಸ್ಯರು ಮಕ್ಕಳಿಂದ ಈ ಸುದ್ದಿ ಮುಚ್ಚಿಟ್ಟಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಜೋಶಿ ಕುಟುಂಬದ ಸದಸ್ಯರು ದೆಹಲಿಯಿಂದ ಗೋವಾಕ್ಕೆ ಧಾವಿಸಿದ್ದರು. ಭಾವನಾ ಮತ್ತು ಅವರ ಪತಿ ಉತ್ತರ ಪ್ರದೇಶದಲ್ಲಿ ವಾಸಿಸುತ್ತಿದ್ದರು, ಆದರೆ ಅವರ ಮೂವರು ಸಹೋದರಿಯರು ದೆಹಲಿಯ ನಿವಾಸಿಗಳಾಗಿದ್ದರು.
ಅವರ ಮಕ್ಕಳು ಮನೆಯಲ್ಲಿ ಕಾಯುತ್ತಿದ್ದಾರೆ. ಅವರ ಎಲ್ಲಾ ಸಂಬಂಧಿಕರು ಕೂಡ ಕಾಯುತ್ತಿದ್ದಾರೆ. ನಾಲ್ವರು ಸಾವನ್ನಪ್ಪಿದ್ದಾರೆ ಎಂದು ನಾವು ಅವರಿಗೆ ಹೇಳಿಲ್ಲ. ನಾವು ಅವರಿಗೆ ಇಬ್ಬರ ಬಗ್ಗೆ ಮಾತ್ರ ಹೇಳಿದ್ದೇವೆ ಮತ್ತು ಉಳಿದ ಇಬ್ಬರು ಕಾಣೆಯಾಗಿದ್ದಾರೆ ಎಂದು ಹೇಳಿದ್ದೇವೆ. ನಾವು ಅವರ ಶವಗಳನ್ನು ಪಡೆಯಲು ಬಯಸುತ್ತೇವೆ.
ಘಟನೆಯ ನಂತರ ಭಾವನಾ ಅವರಿಗೆ ಹೋಟೆಲ್ ಸಿಬ್ಬಂದಿ ಸಹಾಯ ಮಾಡಿದರು ಮತ್ತು ಶವಗಳನ್ನು ಹೊರತೆಗೆಯುವವರೆಗೂ ಸ್ಥಳದಲ್ಲೇ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಮತ್ತು ಶವಗಳನ್ನು ಮನೆಗೆ ಮರಳಿ ತರಲು ಕುಟುಂಬವು ಅಧಿಕಾರಿಗಳೊಂದಿಗೆ ಮಾತನಾಡುತ್ತಿದೆ. ಸಿಬ್ಬಂದಿಯೊಬ್ಬರು ಮಾತನಾಡಿ, ನನ್ನ ಅತ್ತಿಗೆ ದೇಹದಲ್ಲಿ ಚರ್ಮವೇ ಇರಲಿಲ್ಲ, ಕರುಳು ಕೂಡ ಕಾಣುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




