ಕಾಂಗ್ರೆಸ್​ನೊಂದಿಗೆ ಮೈತ್ರಿ ಘೋಷಿಸಿದ ಗೋವಾ ಫಾರ್ವರ್ಡ್​ ಪಾರ್ಟಿ; ಎನ್​ಡಿಎಯಿಂದ 2019ರಲ್ಲಿ ಹೊರಬಿದ್ದ ಪಕ್ಷವಿದು

| Updated By: Lakshmi Hegde

Updated on: Dec 18, 2021 | 4:10 PM

Goa Assembly Election 2022: ಗೋವಾ ಫಾರ್ವರ್ಡ್ ಪಾರ್ಟಿ ಈ ಹಿಂದೆ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್​ಡಿಒ ಒಕ್ಕೂಟದ ಒಂದು ಪಕ್ಷವೇ ಆಗಿತ್ತು. 2017ರಲ್ಲಿ ಎನ್​ಡಿಎಯಿಂದಲೇ ಸ್ಪರ್ಧಿಸಿತ್ತು. ಆದರೆ 2019ರಲ್ಲಿ ಕೆಲ ವಿವಾದದ ಕಾರಣದಿಂದ ಎನ್​ಡಿಎ ಒಕ್ಕೂಟದಿಂದ ಹೊರಬಿದ್ದಿದೆ.

ಕಾಂಗ್ರೆಸ್​ನೊಂದಿಗೆ ಮೈತ್ರಿ ಘೋಷಿಸಿದ ಗೋವಾ ಫಾರ್ವರ್ಡ್​ ಪಾರ್ಟಿ; ಎನ್​ಡಿಎಯಿಂದ 2019ರಲ್ಲಿ ಹೊರಬಿದ್ದ ಪಕ್ಷವಿದು
ಗೋವಾದಲ್ಲಿ ಮೈತ್ರಿ ಮಾಡಿಕೊಂಡ ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಕಾಂಗ್ರೆಸ್​
Follow us on

ಗೋವಾದಲ್ಲಿ ವಿಧಾನಸಭೆ ಚುನಾವಣೆ(Goa Assembly Election 2022)ಗೆ ಕೆಲವೇ ತಿಂಗಳು ಬಾಕಿ ಇದೆ. ಇದೇ ಹೊತ್ತಲ್ಲಿ ಗೋವಾ ಫಾರ್ವರ್ಡ್ ಪಾರ್ಟಿ (GFP) ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಇಂದು ಜಂಟಿಯಾಗಿ ಸುದ್ದಿಗೋಷ್ಠಿ ಕರೆದ ಕಾಂಗ್ರೆಸ್​ ಮತ್ತು ಜಿಪಿಎಫ್​ ನಾಯಕರು ಮೈತ್ರಿಯ ಘೋಷಣೆ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಗೋವಾದ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ, ತೃಣಮೂಲ ಕಾಂಗ್ರೆಸ್​​ನೊಂದಿಗೆ ಮೈತ್ರಿಮಾಡಿಕೊಂಡು ಚುನಾವಣೆಗೆ ಸ್ಫರ್ಧಿಸುವುದಾಗಿ ತಿಳಿಸಿತ್ತು. 

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋವಾ ಫಾರ್ವರ್ಡ್ ಪಾರ್ಟಿ ಅಧ್ಯಕ್ಷ ವಿಜಯ್​ ಸರ್​​ದೇಸಾಯಿ, ಗೋವಾದಲ್ಲಿರುವ ನಿರಂಕುಶ ಆಡಳಿತದಿಂದ ಮತ್ತೊಮ್ಮೆ ಇಲ್ಲಿನ ಜನರನ್ನು ವಿಮೋಚನೆಗೊಳಿಸುವುದಾಗಿ ಗೋವಾದ 60ನೇ ವಿಮೋಚನಾದಿನದ ಮುನ್ನಾದಿನವಾದ ಇಂದು ಘೋಷಣೆ ಮಾಡುತ್ತಿದ್ದೇವೆ. (ಡಿಸೆಂಬರ್ 19 ಗೋವಾ ವಿಮೋಚನಾ ದಿನ, ಫೋರ್ಚುಗೀಸರ ಕಪಿಮುಷ್ಠಿಯಿಂದ ಗೋವಾವನ್ನು ಸ್ವತಂತ್ರಗೊಳಿಸಿದ ದಿನದ ಸಂಭ್ರಮಕ್ಕಾಗಿ ಪ್ರತಿವರ್ಷವೂ ಗೋವಾ ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ.) ಎಂದಿದ್ದಾರೆ. ಅದಾದ ನಂತರ ಜಿಎಫ್​ಪಿ ಪಕ್ಷ ಟ್ವೀಟ್​ ಮಾಡಿದ್ದು, ಗೋವಾಕ್ಕಾಗಿ ಒಗ್ಗಟ್ಟು ಎಂದು ಹೇಳಿದೆ. ಹಾಗೇ, ಕಾಂಗ್ರೆಸ್​ ಮತ್ತು ಜಿಪಿಎಫ್​ ನಾಯಕರು ಒಟ್ಟಾಗಿ ಕೈಹಿಡಿದು ನಿಂತ ಫೋಟೋವುಳ್ಳ ಪೋಸ್ಟರ್​ನ್ನು ಪೋಸ್ಟ್ ಮಾಡಿದೆ.

ಗೋವಾ ಫಾರ್ವರ್ಡ್ ಪಾರ್ಟಿ ಈ ಹಿಂದೆ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್​ಡಿಒ ಒಕ್ಕೂಟದ ಒಂದು ಪಕ್ಷವೇ ಆಗಿತ್ತು. 2017ರಲ್ಲಿ ಎನ್​ಡಿಎಯಿಂದಲೇ ಸ್ಪರ್ಧಿಸಿತ್ತು. ಆದರೆ 2019ರಲ್ಲಿ ಕೆಲ ವಿವಾದದ ಕಾರಣದಿಂದ ಎನ್​ಡಿಎ ಒಕ್ಕೂಟದಿಂದ ಹೊರಬಿದ್ದಿದೆ. ವಿಜಯ್​ ಸರ್​ದೇಸಾಯಿಯವರನ್ನು ಕಳೆದ ವಾರ ಗೋವಾ ಕಾಂಗ್ರೆಸ್​ ಉಸ್ತುವಾರಿ ದಿನೇಶ್ ಗುಂಡೂರಾವ್​ ಕರೆದು ಮಾತುಕತೆ ನಡೆಸಿದ್ದರು.  ಅದಾದ ಬಳಿಕ ನವೆಂಬರ್​ 30ರಂದು ವಿಜಯ್​ ಸರ್​ದೇಸಾಯಿ ರಾಹುಲ್​ ಗಾಂಧಿಯವರನ್ನು ಭೇಟಿಯಾಗಿದ್ದರು. ಅದೆಲ್ಲದರ ಬೆನ್ನಲ್ಲೇ ಈಗ ಎರಡೂ ಪಕ್ಷಗಳು ಮೈತ್ರಿ ಘೋಷಿಸಿದೆ. ಗೋವಾದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ಕೊಡಬಾರದು ಎಂದು ತೃಣಮೂಲ ಕಾಂಗ್ರೆಸ್​, ಆಪ್​ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರಯತ್ನ ಮಾಡುತ್ತಿವೆ.

ಇದನ್ನೂ ಓದಿ: ಕನ್ನಡಿಗರು ಮರಾಠಿಗರ ಗುದ್ದಾಟ, ಗಡಿ ವಿವಾದ; ಡಿಸೆಂಬರ್ 13 ರಿಂದ ಏನೇನಾಯ್ತು? ಇಲ್ಲಿದೆ ಸಂಪೂರ್ಣ ವಿವರ