ದೆಹಲಿ: ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ ಇಂದು ಬುಧವಾರ 45,710 ರೂಪಾಯಿ ಇದೆ. ಹಾಗೆಯೇ ಚೆನ್ನೈನಲ್ಲಿ 43,750 ರೂಪಾಯಿ ಇದೆ. ವಾಣಿಜ್ಯ ಜನರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನವನ್ನು ಗಮನಿಸಿದಾಗ 44,760 ರೂಪಾಯಿ ಇದೆ. ಹಾಗೆಯೇ ಚೆನ್ನೈನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನ 47,700 ರೂಪಾಯಿ ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದನ್ನು ಗಮನಿಸುವುದಾದರೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,400 ರೂಪಾಯಿ ಇದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,350 ರೂಪಾಯಿ ಇದೆ. ದೈನಂದಿನ ದರ ಬದಲಾವಣೆಯನ್ನು ಗಮನಿಸಿದಾಗ ಚಿನ್ನದ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ.
ನಿನ್ನೆ ಮಂಗಳವಾರ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,550 ರೂಪಾಯಿ ಇತ್ತು. ಇಂದು ಬುಧವಾರ 150 ರೂಪಾಯಿ ಇಳಿಕೆ ಕಂಡಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನ ನಿನ್ನೆ 47,510 ರೂಪಾಯಿ ಇದ್ದು, ಇಂದು 160 ರೂಪಾಯಿ ಇಳಿಕೆ ಕಂಡಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ಮಾಹಿತಿ
1ಗ್ರಾಂ ಚಿನ್ನದ ದರ ನಿನ್ನೆ 4,355 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 4,340 ರೂಪಾಯಿಗೆ ಇಳಿದಿದೆ. 8 ಗ್ರಾಂ ಚಿನ್ನ ನಿನ್ನೆ 34,840 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 34,720 ರೂಪಾಯಿಗೆ ಇಳಿದಿದೆ. 10 ಗ್ರಾಂ ಚಿನ್ನದ ದರ ನಿನ್ನೆ 43,550 ರೂಪಾಯಿ ಇತ್ತು. ಇಂದು ಬುಧವಾರ ದೈನಂದಿನ ದರ ಬದಲಾವಣೆಯನ್ನು ಪರಿಶೀಲಿಸಿದಾಗ 43,400 ರೂಪಾಯಿಗೆ ಇಳಿದಿದೆ. ಅಂತೆಯೇ 100 ಗ್ರಾಂ ಚಿನ್ನ ನಿನ್ನೆ 4,35,500 ರೂಪಾಯಿಗೆ ಮಾರಾಟವಾಗಿತ್ತು. ಇಂದಿನ ದರದಲ್ಲಿ 1,500 ರೂಪಾಯಿ ಇಳಿಕೆ ಕಂಡಿದ್ದು, 4,34,000 ರೂಪಾಯಿಗೆ ಇಳಿದಿದೆ.
ಬೆಂಗಳೂರಿನ ಬೆಳ್ಳಿ ದರ ಮಾಹಿತಿ
1 ಗ್ರಾಂ ಬೆಳ್ಳಿ ದರ ನಿನ್ನೆ 67.20 ರೂಪಾಯಿಗೆ ಮಾರಾಟವಾಗಿದೆ. ಇಂದು ಬುಧವಾದರ ದರದಲ್ಲಿ ಬೆಲೆ ಕೊಂಚ ಇಳಿಕೆ ಕಂಡಿದೆ. 8 ಗ್ರಾಂ ಬೆಳ್ಳಿ ದರ ನಿನ್ನೆ 537.60 ರೂಪಾಯಿಗೆ ಮಾರಾಟವಾಗಿದೆ. ಇಂದು ದರ ಇಳಿಕೆಯ ನಂತರದಲ್ಲಿ 530.40 ರೂಪಾಯಿ ಇದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 672 ರೂಪಾಯಿ ಇದ್ದು, ಇಂದು ದರ 663 ರೂಪಾಯಿಗೆ ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,720 ರೂಪಾಯಿಗೆ ಮಾರಾಟವಾಗಿದೆ. ಇಂದು ದರ 90 ರೂಪಾಯಿಯಷ್ಟು ಇಳಿಕೆ ಕಂಡು 6,630 ರೂಪಾಯಿಗೆ ಇಳಿಕೆಯಾಗಿದೆ. 1ಕೆಜಿ ಬೆಳ್ಳಿ ದರ ನಿನ್ನೆ 67,200 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 900 ರೂಪಾಯಿ ಇಳಿಕೆಯ ನಂತರ 66,300 ರೂಪಾಯಿಗೆ ಇಳಿದಿದೆ.
ಮುಂದಿನ ದಿನಗಳಲ್ಲಿ ಚಿನ್ನದ ದರ ಏರಲೂಬಹುದು ಹಾಗಾಗಿ ಚಿನ್ನ ಕೊಳ್ಳಲು ಇದು ಉತ್ತಮ ಸಮಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಚಿನ್ನ ದರ ಸಾಮಾನ್ಯವಾಗಿ ಹಾವು-ಏಣಿ ಆಟವಾಡುವುದು ಸರ್ವೇ ಸಾಮಾನ್ಯ. ಕಳೆದ ವಾರದಲ್ಲಿ ಸತತವಾಗಿ ಚಿನ್ನದ ದರ ಏರಿಕೆಯತ್ತ ಸಾಗುತ್ತಿರುವುದನ್ನು ಕಂಡ ಗ್ರಾಹಕರು ಚಿನ್ನ ಕೊಳ್ಳಲು ಹಿಂಜರಿಯುತ್ತಿದ್ದರು. ಆದರೀಗ ಚಿನ್ನದ ದರ ಕೊಂಚ ಇಳಿಕೆ ಕಂಡಿದೆ. ನೀವು ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಬಹುದು ಎಂಬ ಅನಿಸಿಕೆ ಇದ್ದರೆ ಚಿನ್ನ ಕೊಳ್ಳಿರಿ.
ಇದನ್ನೂ ಓದಿ: Gold Rate Today: ಯುಗಾದಿ ಹಬ್ಬದ ಶುಭ ದಿನದಂದು ಚಿನ್ನ ಕೊಳ್ಳುವುದಾದರೆ ದರ ಹೀಗಿದೆ!
Gold Rate Today: ಯುಗಾದಿ ಹಬ್ಬಕ್ಕೆ ಚಿನ್ನದ ಉಡುಗೊರೆ; ಖರೀದಿಸುವ ಆಸೆ ಇದ್ದರೆ ದರ ವಿವರ ಇಲ್ಲಿದೆ!
Published On - 9:24 am, Wed, 14 April 21