AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid-19 Prevention: ಜಗತ್ತಿನಾದ್ಯಂತ ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕು; ಡೂಡಲ್​ ಮೂಲಕ ಮಾಸ್ಕ್​​ನ​ ಮಹತ್ವ ಸಾರಿದ ಗೂಗಲ್​

Google Doodles: ಜನರಿಗೆ ಮತ್ತೊಮ್ಮೆ ಕೊರೊನಾ ಭೀಕರತೆಯನ್ನು ನೆನಪಿಸಿ, ನಿಯಮಗಳನ್ನು ನೆನಪಿಸುವ ಸಲುವಾಗಿ ಗೂಗಲ್ ಇಂದು GOOGLE ಎಂಬ ಶಬ್ದದಲ್ಲಿ ಬರುವ ಎಲ್ಲ ಅಕ್ಷರಗಳಿಗೂ ಮಾಸ್ಕ್​ ತೊಡಿಸಿ ಡೂಡಲ್​ ರಚನೆ ಮಾಡಿದೆ.

Covid-19 Prevention: ಜಗತ್ತಿನಾದ್ಯಂತ ಮತ್ತೆ ಹೆಚ್ಚುತ್ತಿದೆ ಕೊರೊನಾ ಸೋಂಕು; ಡೂಡಲ್​ ಮೂಲಕ ಮಾಸ್ಕ್​​ನ​ ಮಹತ್ವ ಸಾರಿದ ಗೂಗಲ್​
ಗೂಗಲ್ ಡೂಡಲ್
Lakshmi Hegde
|

Updated on:Apr 06, 2021 | 1:09 PM

Share

ಕೆಲವು ವಿಶೇಷ ಸಂದರ್ಭಗಳನ್ನು ಗೂಗಲ್ ತನ್ನ ಡೂಡಲ್​ ಮೂಲಕ ಪ್ರಸ್ತುತ ಪಡಿಸುತ್ತದೆ. ಹಾಗೇ, ಇಂದು ಸರ್ಚ್​ ಇಂಜಿನ್​ ದೈತ್ಯ ತನ್ನ ಡೂಡಲ್ ಮೂಲಕ ಕೊವಿಡ್-19 ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿದೆ. ಸಾಂಕ್ರಾಮಿಕ ಕಾಯಿಲೆ ತಪ್ಪಿಸಲು ಮಾಸ್ಕ್​ನ್ನು ಕಡ್ಡಾಯವಾಗಿ ಧರಿಸಿ ಎಂದು ಜನರನ್ನು ಒತ್ತಾಯಿಸಿದೆ. ಮಾಸ್ಕ್​ ಧರಿಸಿ, ಜೀವ ಉಳಿಸಿ ಎಂಬ ಸಂದೇಶವನ್ನು ಇಂದಿನ ಗೂಗಲ್ ಡೂಡಲ್ ಸಾರಿದೆ.

ಭಾರತ ಸೇರಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೊರೊನಾ ಎರಡನೇ ಅಲೆ ವಿಪರೀತವಾಗಿ ಬಾಧಿಸುತ್ತಿದೆ. ಪ್ರತಿದಿನ ನೂರರಿಂದ ಸಾವಿರ ಪ್ರಕರಣಗಳು ಮತ್ತೆ ದಾಖಲಾಗುತ್ತಿವೆ. ಆದರೆ ಜನಸಾಮಾನ್ಯರ ನಿರ್ಲಕ್ಷ್ಯವೂ ಜಾಸ್ತಿಯಾಗುತ್ತಿದೆ. ಮಾಸ್ಕ್​​ನ್ನು ಮೂಗಿನ ಮದಲು ಗಲ್ಲದ ಮೇಲೆ, ಕುತ್ತಿಗೆಯ ಮೇಲಿಟ್ಟು ಓಡಾಡುವವರೇ ಹೆಚ್ಚಾಗಿದ್ದಾರೆ. ಇನ್ನು ಸಾಮಾಜಿಕ, ದೈಹಿಕ ಅಂತರ ಕಾಪಾಡಿಕೊಳ್ಳುವ ನಿಯಮವನ್ನೂ ಪಾಲಿಸುತ್ತಿಲ್ಲ. ಜನರಿಗೆ ಮತ್ತೊಮ್ಮೆ ಕೊರೊನಾ ಭೀಕರತೆಯನ್ನು ನೆನಪಿಸಿ, ನಿಯಮಗಳನ್ನು ನೆನಪಿಸುವ ಸಲುವಾಗಿ ಗೂಗಲ್ ಇಂದು GOOGLE ಎಂಬ ಶಬ್ದದಲ್ಲಿ ಬರುವ ಎಲ್ಲ ಅಕ್ಷರಗಳಿಗೂ ಮಾಸ್ಕ್​ ತೊಡಿಸಿ ಡೂಡಲ್​ ರಚನೆ ಮಾಡಿದೆ. ಅಲ್ಲದೆ, ಈ ಎಲ್ಲ ಅಕ್ಷರಗಳ ನಡುವಿನ ಅಂತರ ಹೆಚ್ಚಿಸುವ ಮೂಲಕ, ಸಾಮಾಜಿಕ ಅಂತರದ ಮಹತ್ವದ ಸಾರಿದೆ.

ನೀವು ಗೂಗಲ್​ನ ಡೂಡಲ್ ಮೇಲೆ ಕ್ಲಿಕ್ ಮಾಡಿದರೆ, ಮಾಸ್ಕ್ ಧರಿಸಿ, ಜೀವ ಉಳಿಸಿ ಎಂದು ದೊಡ್ಡದಾಗಿ ಬರೆದುಕೊಂಡಿರುವ ಪೇಜ್​ ಓಪನ್ ಆಗುತ್ತದೆ. ಅದರ ಕೆಳಗೆ, ಫೇಸ್​ ಕವರ್​ ಧರಿಸಿ, ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ, ಸುರಕ್ಷಿತ ಅಂತರ ಕಾಯ್ದುಕೊಳ್ಳಿ ಎಂಬ ಸಾಲುಗಳನ್ನು ಬರೆಯಲಾಗಿದೆ. ಇವೆಲ್ಲವೂ ಕೊವಿಡ್​-19 ನಿಯಂತ್ರಣಾ ಕ್ರಮಗಳು ಎಂದು ಗೂಗಲ್ ಹೇಳಿದೆ.

ಕೊವಿಡ್​-19 ತಡೆಯುವ ಸಲುವಾಗಿ, ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸೇವೆಗಳನ್ನು ಘೋಷಿಸಲು ಗೂಗಲ್​, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದು, ಡೂಡಲ್​ ಮೂಲಕ ಆಗಾಗ ಪ್ರಕಟಣೆಯನ್ನು ಪ್ರಸ್ತುತ ಪಡಿಸುತ್ತಿದೆ. ಭಾರತದಲ್ಲಿ ಒಂದೆಡೆ ಕೊರೊನಾ ಲಸಿಕೆ ವಿತರಣೆ ನಡೆಯುತ್ತಿದ್ದರೂ, ದಿನವೊಂದಕ್ಕೆ ಲಕ್ಷದಷ್ಟು ಹೊಸ ಕೇಸ್​ಗಳು ದಾಖಲಾಗುತ್ತಿವೆ. ಮಹಾರಾಷ್ಟ್ರ ಸೇರಿ ಕೆಲವು ರಾಜ್ಯಗಳಲ್ಲಿ ಕೊರೊನಾ ಮಿತಿಮೀರಿದೆ.

google doodle promotes Covid 19 prevention and urges to wear mask Coronavirus cases rise

ಇದನ್ನೂ ಓದಿ: ಬಿಗ್​ ಬಾಸ್​ನಲ್ಲಿ ಗುಟ್ಟಾಗಿ ನಡೆಯುತ್ತಿದ್ದ ನಾಮಿನೇಷನ್​ ಈಗ ಬಟಾಬಯಲು! ಯಾರಿಗೆಲ್ಲ ಕಾದಿದೆ ಅಪಾಯ?

‘ನಕ್ಸಲ್ ಅಂಕಲ್.. ಪ್ಲೀಸ್ ನನ್ನ ಅಪ್ಪನನ್ನು ಬಿಟ್ಟುಬಿಡಿ’- ನಾಪತ್ತೆಯಾದ ಯೋಧ ರಾಕೇಶ್ವರ್ ಸಿಂಗ್​ರ 5ವರ್ಷದ ಮಗಳಿಂದ ಮನವಿ.. ಕಣ್ಣೀರು

Published On - 1:09 pm, Tue, 6 April 21

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ