ಇಂದು ಸಂಜೆ ಆಕಾಶ ವೀಕ್ಷಣೆ ಮರೆಯಲೇಬೇಡಿ; ಗುರು-ಶನಿ ಸಂಧಿಸುವುದನ್ನು ಗೂಗಲ್​ ಸಂಭ್ರಮಿಸಿದ್ದು ಹೀಗೆ..

| Updated By: ಸಾಧು ಶ್ರೀನಾಥ್​

Updated on: Dec 21, 2020 | 1:13 PM

ಇದಕ್ಕೂ ಮುನ್ನ 1623ರಲ್ಲಿ ಈ ರೀತಿ ಆಗಿತ್ತು ಎನ್ನಲಾಗಿದ್ದರೂ, ಆ ಕುರಿತು ನಿಖರ ಮಾಹಿತಿಗಳಿಲ್ಲ. ಅಲ್ಲದೇ, ಆ ಸಂದರ್ಭದಲ್ಲಿ ಗುರು ಮತ್ತು ಶನಿ ಗ್ರಹಗಳು ಭೂಮಿಗಿಂತಲೂ ಸೂರ್ಯನಿಗೆ ಹೆಚ್ಚು ಸಮೀಪದಲ್ಲಿ ಹಾದುಹೋಗಿದ್ದ ಕಾರಣ ಟೆಲಿಸ್ಕೋಪ್​ನಿಂದ ವೀಕ್ಷಿಸುವುದೂ ಅಸಾಧ್ಯವಾಗಿತ್ತು ಎನ್ನುವುದು ಕೆಲವರ ವಾದ.

ಇಂದು ಸಂಜೆ ಆಕಾಶ ವೀಕ್ಷಣೆ ಮರೆಯಲೇಬೇಡಿ; ಗುರು-ಶನಿ ಸಂಧಿಸುವುದನ್ನು ಗೂಗಲ್​ ಸಂಭ್ರಮಿಸಿದ್ದು ಹೀಗೆ..
ಗುರು-ಶನಿ ಸಮಾಗಮಕ್ಕೆ ಗೂಗಲ್​ ಡೂಡಲ್
Follow us on

ವರ್ಷದ ಅತ್ಯಂತ ದೀರ್ಘರಾತ್ರಿಯನ್ನು ಕಾಣುವ ಡಿಸೆಂಬರ್​ 21, ಈ ಬಾರಿ ಇನ್ನೊಂದು ವಿಶೇಷ ಘಟನೆಗೆ ಸಾಕ್ಷಿಯಾಗುತ್ತಿದೆ. ದೈತ್ಯ ಗ್ರಹಗಳಾದ ಗುರು ಮತ್ತು ಶನಿ ಇಂದು ಅತ್ಯಂತ ಸಮೀಪಕ್ಕೆ ಬರಲಿವೆ. ಆಕಾಶದಲ್ಲಿ ನಡೆಯುವ ಈ ಅಪರೂಪದ ಸಮಾಗಮದ ಸ್ಮರಣೆಗಾಗಿ ಗೂಗಲ್​ ವಿಶಿಷ್ಟ ಡೂಡಲ್​ ಪ್ರದರ್ಶಿದೆ.

ಇದಕ್ಕೂ ಮುನ್ನ 1623ರಲ್ಲಿ ಈ ರೀತಿ ಆಗಿತ್ತು ಎನ್ನಲಾಗಿದ್ದರೂ, ಆ ಕುರಿತು ನಿಖರ ಮಾಹಿತಿಗಳಿಲ್ಲ. ಅಲ್ಲದೇ, ಆ ಸಂದರ್ಭದಲ್ಲಿ ಗುರು ಮತ್ತು ಶನಿ ಗ್ರಹಗಳು ಭೂಮಿಗಿಂತಲೂ ಸೂರ್ಯನಿಗೆ ಹೆಚ್ಚು ಸಮೀಪದಲ್ಲಿ ಹಾದುಹೋಗಿದ್ದ ಕಾರಣ ಟೆಲಿಸ್ಕೋಪ್​ನಿಂದ ವೀಕ್ಷಿಸುವುದೂ ಅಸಾಧ್ಯವಾಗಿತ್ತು ಎನ್ನುವುದು ಕೆಲವರ ವಾದ. ಈ ಬಾರಿ ಗುರು-ಶನಿ ಸಮಾಗಮವು ಭೂಮಿಗೆ ಅತ್ಯಂತ ಸನಿಹದಲ್ಲಿ ಆಗುತ್ತಿರುವುದರಿಂದ ಇದೊಂದು ಐತಿಹಾಸಿಕ ಘಟನೆಯಾಗಲಿದೆ.

ಗುರು ಮತ್ತು ಶನಿ ಗ್ರಹಗಳ ಸಮಾಗಮ ಇಂದು ಭೂಮಿಯ ಎಲ್ಲಾ ಭಾಗದಿಂದಲೂ ಗೋಚರಿಸಲಿದೆ. ಇವುಗಳು ಪರಸ್ಪರ ಸಮೀಪಕ್ಕೆ ಬರುತ್ತಿರುವ ಕಾರಣ ಭೂಮಿಯಿಂದ ವೀಕ್ಷಿಸಿದರೆ ಗ್ರಹಗಳು ಒಂದರ ಮೇಲೊಂದು ಇದ್ದಂತೆ ಕಾಣಲಿದೆ ಎಂದು ಖಗೋಳಶಾಸ್ತ್ರಜ್ಞರು ಹೇಳಿದ್ದಾರೆ.

ಗೂಗಲ್​ ಸರ್ಚ್​ ಇಂಜಿನ್​ ಸಹ ಅಪರೂಪದ ಘಟನೆಯ ನೆನಪಿಗಾಗಿ ವಿಶಿಷ್ಟ ಡೂಡಲ್​ ತಯಾರಿಸಿರುವುದು ಎಲ್ಲರ ಗಮನ ಸೆಳೆದಿದೆ.
https://g.co/doodle/rtpguvj

Google Search ಸ್ಥಳೀಯ ಭಾಷೆಯಲ್ಲಿ ಹುಡುಕಾಟಕ್ಕೆ ಹೊಸ ಅನ್ವೇಷಣೆ ಮಾಡಿದ ಗೂಗಲ್.. ಆದ್ರೆ ಕನ್ನಡಕ್ಕಿಲ್ಲ ಆದ್ಯತೆ!