ಕೊರೊನಾ ಲಸಿಕೆ ತಯಾರಿಕೆ ಕಂಪನಿಗಳಿಗೆ ಕಾನೂನು ರಕ್ಷಣೆ ನೀಡಿ: ಸೀರಮ್​ ಸಂಸ್ಥೆ ಸಿಇಓ ಮನವಿ

ಕೊರೊನಾ ಲಸಿಕೆ ತಯಾರಿಸುತ್ತಿರುವ ಸಂಸ್ಥೆಗಳಿಗೆ ನೈತಿಕ ಬೆಂಬಲ ಮತ್ತು ಮಾನಸಿಕ ಸ್ಥೈರ್ಯ ಅತ್ಯಗತ್ಯ. ಹೀಗಾಗಿ ಕೊವಿಡ್​ ಸೋಂಕಿತರಿಗೆ ಲಸಿಕೆಗಳಿಂದ ಯಾವುದೇ ಅಡ್ಡಪರಿಣಾಮಗಳಾದರೂ ಅದಕ್ಕೆ ಕಾನೂನು ರಕ್ಷಣೆ ನೀಡಬೇಕು

ಕೊರೊನಾ ಲಸಿಕೆ ತಯಾರಿಕೆ ಕಂಪನಿಗಳಿಗೆ ಕಾನೂನು ರಕ್ಷಣೆ ನೀಡಿ: ಸೀರಮ್​ ಸಂಸ್ಥೆ ಸಿಇಓ ಮನವಿ
SII CEO ಅದರ್​ ಪೂನಾವಾಲ (ಸಂಗ್ರಹ ಚಿತ್ರ)
Follow us
| Updated By: ಸಾಧು ಶ್ರೀನಾಥ್​

Updated on: Dec 21, 2020 | 11:40 AM

ದೆಹಲಿ: ಕೊರೊನಾ ಲಸಿಕೆ ಕುರಿತು ಎಲ್ಲಾ ದೇಶಗಳು ಒಂದಿಲ್ಲೊಂದು ಚಿಂತೆಯಲ್ಲಿವೆ. ಕೆಲವು ದೇಶಗಳಿಗೆ ಕೊರೊನಾ ಲಸಿಕೆ ಬಳಸಲು ಅನುಮತಿಯೇ ಸಿಕ್ಕಿಲ್ಲ ಎಂಬ ಚಿಂತೆಯಾದರೆ, ಅನುಮತಿ ಪಡೆದ ದೇಶಗಳಿಗೆ ಲಸಿಕೆಯ ಅಡ್ಡಪರಿಣಾಮಗಳನ್ನು ನಿಯಂತ್ರಿಸುವುದು ಹೇಗೆ ಎಂಬ ಚಿಂತೆ. ಈ ನಡುವೆ ಪುಣೆಯಲ್ಲಿರುವ ಭಾರತೀಯ ಔಷಧ ತಯಾರಿಕಾ ಸಂಸ್ಥೆ ಸೀರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಸಿಇಓ ಅದರ್​ ಪೂನಾವಾಲ ಔಷಧ ತಯಾರಕರಿಗೆ ಕಾನೂನು ಕಟ್ಟಳೆಗಳಿಂದ ವಿನಾಯಿತಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಕೊರೊನಾ ಲಸಿಕೆ ತಯಾರಿಸುತ್ತಿರುವ ಸಂಸ್ಥೆಗಳಿಗೆ ನೈತಿಕ ಬೆಂಬಲ ಮತ್ತು ಮಾನಸಿಕ ಸ್ಥೈರ್ಯ ಅತ್ಯಗತ್ಯ. ಹೀಗಾಗಿ ಕೊವಿಡ್​ ಸೋಂಕಿತರಿಗೆ ಲಸಿಕೆಗಳಿಂದ ಯಾವುದೇ ಅಡ್ಡಪರಿಣಾಮಗಳಾದರೂ ಅದಕ್ಕೆ ಕಾನೂನು ರಕ್ಷಣೆ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಕೊರೊನಾ ಲಸಿಕೆ ಪ್ರಯೋಗ ಸಂದರ್ಭದಲ್ಲಿ ಪ್ರಯೋಗಕ್ಕೆ ಒಳಪಟ್ಟವರೊಬ್ಬರು ಅಡ್ಡಪರಿಣಾಮದ ಆರೋಪ ಹೊರಿಸಿ ಸೀರಮ್​ ಸಂಸ್ಥೆಯಿಂದ 5 ಕೋಟಿ ಪರಿಹಾರ ಕೇಳಿದ್ದರು. ಇದೇ ಪ್ರಕರಣವನ್ನು ಉದಾಹರಣೆಯಾಗಿ ನೀಡಿದ ಪೂನಾವಾಲ ಈಗ ಕಾನೂನು ಕಟ್ಟಳೆಗಳಿಂದ ರಕ್ಷಣೆ ನೀಡಲು ಮನವಿ ಮಾಡಿದ್ದಾರೆ.

ಈ ಕುರಿತು ಸೀರಮ್​ ಸಂಸ್ಥೆ ಶೀಘ್ರದಲ್ಲೇ ಕೇಂದ್ರ ಸರ್ಕಾರದ ಮುಂದೆ ಲಿಖಿತ ರೂಪದ ಬೇಡಿಕೆ ಸಲ್ಲಿಸಲಿದೆ. ವಿಶ್ವದ ಹಲವು ರಾಷ್ಟ್ರಗಳು ಕೊರೊನಾ ಲಸಿಕೆ ತಯಾರಿಕರಿಗೆ ಕಾನೂನು ರಕ್ಷಣೆ ನೀಡಿವೆ. ಇದನ್ನೇ ಮಾದರಿಯಾಗಿರಿಸಿಕೊಂಡು ಭಾರತದಲ್ಲಿಯೂ ನಿಯಮ ಸಡಿಲಿಸಲು ಕೇಂದ್ರ ಸರ್ಕಾರ ಯೋಚಿಸಬೇಕು ಎಂದು ತಿಳಿಸಿದ್ದಾರೆ.

ಕೊರೊನಾ ಲಸಿಕೆ ತಯಾರಿಯಲ್ಲಿ ತೊಡಗಿರುವ ಅದಾರ್ ಪೂನಾವಾಲಾ.. ಏಷಿಯನ್ ಆಫ್ ದಿ ಇಯರ್

ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ