ಇನ್ಮುಂದೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಇಲ್ಲ ರೆಮ್​ಡಿಸಿವಿರ್​ ಇಂಜೆಕ್ಷನ್​ ಪೂರೈಕೆ..

|

Updated on: May 29, 2021 | 4:22 PM

ಸದ್ಯ ದೇಶದಲ್ಲಿ ರೆಮ್​ಡಿಸಿವಿರ್​ನ್ನು ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ರೆಮ್​ಡಿಸಿವಿರ್​ ಉತ್ಪನ್ನ ಮಾಡುವ ಘಟಕಗಳ ಸಂಖ್ಯೆ 20 ರಿಂದ 60ಕ್ಕೆ ಏರಿಕೆಯಾಗಿದೆ.

ಇನ್ಮುಂದೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಇಲ್ಲ ರೆಮ್​ಡಿಸಿವಿರ್​ ಇಂಜೆಕ್ಷನ್​ ಪೂರೈಕೆ..
ರೆಮ್​ಡಿಸಿವಿರ್​
Follow us on

ದೆಹಲಿ: ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಮಾಡಲಾಗುತ್ತಿದ್ದ ರೆಮ್​ಡಿಸಿವಿರ್​​ ಚುಚ್ಚುಮದ್ದು ಪೂರೈಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ರಾಜ್ಯ ಸಚಿವ ಮನ್ಸುಖ್​ ಮಾಂಡವಿಯಾ ತಿಳಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ದೇಶದಲ್ಲಿ ರೆಮ್​ಡಿಸಿವಿರ್​ ಇಂಜೆಕ್ಷನ್​ ಲಭ್ಯತೆ ಬಗ್ಗೆ ಮೇಲ್ವಿಚಾರಣೆ ಮಾಡುವಂತೆ ರಾಷ್ಟ್ರೀಯ ಔಷಧೀಯ ಬೆಲೆ ಏಜೆನ್ಸಿ ಮತ್ತು ಕೇಂದ್ರ ಔಷಧ ಪ್ರಮಾಣಿತ ನಿಯಂತ್ರಣ ಸಂಸ್ಥೆ (CDSCO)ಗೆ ಸೂಚಿಸಲಾಗಿದೆ ಎಂದೂ ಹೇಳಿದ್ದಾರೆ.

ಸದ್ಯ ದೇಶದಲ್ಲಿ ರೆಮ್​ಡಿಸಿವಿರ್​ನ್ನು ಬೇಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡಲಾಗುತ್ತಿದೆ. ಕಳೆದ ಒಂದು ತಿಂಗಳಲ್ಲಿ ರೆಮ್​ಡಿಸಿವಿರ್​ ಉತ್ಪನ್ನ ಮಾಡುವ ಘಟಕಗಳ ಸಂಖ್ಯೆ 20 ರಿಂದ 60ಕ್ಕೆ ಏರಿಕೆಯಾಗಿದೆ. 2021ರ ಏಪ್ರಿಲ್​ 11ರ ಹೊತ್ತಿಗೆ ದಿನಕ್ಕೆ 33 ಸಾವಿರ ವಯಲ್​​ಗಳಷ್ಟು ಮಾತ್ರ ರೆಮ್​ಡಿಸಿವಿರ್​ ಉತ್ಪತ್ತಿಯಾಗುತ್ತಿತ್ತು. ಅದೀಗ ದಿನಕ್ಕೆ 3,50,000 ವಯಲ್ಸ್​ಗಳನ್ನು ಉತ್ಪನ್ನವಾಗುತ್ತಿದೆ. ಹಾಗಾಗಿ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ರೆಮ್​ಡಿಸಿವಿರ್​ ವಿತರಿಸುವುದನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ಸಚಿವರು ಹೇಳಿಕೊಂಡಿದ್ದಾರೆ. ಇನ್ನು ತುರ್ತು ಸಂದರ್ಭ ನಿಭಾಯಿಸಲು 50 ಲಕ್ಷ ವಯಲ್​​ಗಳಷ್ಟು ರೆಮ್​ಡಿಸಿವಿರ್​ ಖರೀದಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದಾಗ್ಯೂ ತಿಳಿಸಿದ್ದಾರೆ.

ಕಳೆದ ತಿಂಗಳು ರೆಮ್​ಡಿಸಿವಿರ್​ ಇಂಜೆಕ್ಷನ್​ ಅಭಾವ ಉಂಟಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಅದರ ಆಮದು ಸುಂಕವನ್ನು ತೆರವುಗೊಳಿಸಿತ್ತು. ಹಾಗೇ ಇಂಜೆಕ್ಷನ್​​ಗೆ ಅಗತ್ಯವಿರುವ ಕಚ್ಚಾವಸ್ತುಗಳ ಮೇಲಿನ ಸುಂಕವನ್ನೂ ಕಡಿತಗೊಳಿಸಿತ್ತು. ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಕೇಂದ್ರ ಸರ್ಕಾರವೇ ಇಂಜೆಕ್ಷನ್​ನ್ನು ಪೂರೈಕೆ ಮಾಡುತ್ತಿತ್ತು. ಇದೀಗ ಕೊವಿಡ್​ 19 ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿರುವ ಕಾರಣದಿಂದ ಇಂಜೆಕ್ಷನ್​ ಪೂರೈಕೆ ನಿಲ್ಲಿಸಲು ನಿರ್ಧರಿಸಿದ್ದಾಗಿ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ: ಕೊವಿಡ್ ಕಡಿಮೆ ಆಗುತ್ತಿದೆ ಎಂದು ಕೈಕಟ್ಟಿ ಕೂರುವಂತಿಲ್ಲ; ಸಿಎಂ ಯಡಿಯೂರಪ್ಪ ಖಡಕ್ ಸೂಚನೆ