ಕಾರಿನಲ್ಲಿದ್ದ ವೈದ್ಯ ದಂಪತಿಯನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿ ಗುಂಡಿಕ್ಕಿ ಕೊಂದ ಯುವಕರು; ಕ್ಯಾಮೆರಾದಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ವರದಿಗಳ ಪ್ರಕಾರ ಸುಮಾರು ಐದು ಬಾರಿ ಗುಂಡು ಹಾರಿಸಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರೂ ಅಲ್ಲಿಯೇ ಮೃತಪಟ್ಟಿದ್ದಾರೆ. ಇಬ್ಬರೂ ಸಾವಿಗೀಡಾಗಿದ್ದು ಖಚಿತವಾಗುತ್ತಿದ್ದಂತೆಯೇ ಸ್ಥಳದಿಂದ ಕಾಲ್ಕೀಳಲು ಸಿದ್ಧರಾದ ಯುವಕರು ಅಕ್ಕಪಕ್ಕದ ಒಂದೆರೆಡು ವಾಹನಗಳಿಗೆ ಬಂದೂಕು ತೋರಿಸಿ ಸ್ಥಳದಲ್ಲಿ ನಿಲ್ಲದಂತೆ ಬೆದರಿಸಿದ್ದಾರೆ.
ಜೈಪುರ್: ರಾಜಸ್ಥಾನದ ಭಾರತ್ಪುರ್ ಬಳಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ನಿನ್ನೆ (ಮೇ 28) ಮಧ್ಯಾಹ್ನ ಕಾರಿನಲ್ಲಿ ಚಲಿಸುತ್ತಿದ್ದ ವೈದ್ಯ ದಂಪತಿಯನ್ನು ನಡುರಸ್ತೆಯಲ್ಲೇ ಅಡ್ಡಗಟ್ಟಿ ಗುಂಡಿಕ್ಕಿ ಕೊಲ್ಲಲಾಗಿದೆ. ಸುಮಾರು 40 ವರ್ಷ ಮೇಲ್ಪಟ್ಟ ಪ್ರಾಯದ ಡಾ. ಸುದೀಪ್ ಗುಪ್ತಾ ಹಾಗೂ ಅವರ ಪತ್ನಿ ಡಾ. ಸೀಮಾ ಗುಪ್ತಾ ಇಬ್ಬರೂ ಕಾರಿನಲ್ಲಿ ಚಲಿಸುತ್ತಿರುವಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಐದು ಬಾರಿ ಗುಂಡಿಕ್ಕಿದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಭಾರತ್ಪುರ್ ನೀಮ್ದಾ ಗೇಟ್ ಬಳಿ ನಡೆದ ಈ ಆಘಾತಕಾರಿ ಕೃತ್ಯ ಟ್ರಾಫಿಕ್ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಿನಲ್ಲಿ ಚಲಿಸುತ್ತಿದ್ದ ವೈದ್ಯ ದಂಪತಿಯನ್ನು ಬೈಕಿನಲ್ಲಿ ಬಂದ ಯುವಕರಿಬ್ಬರು ನಡುರಸ್ತೆಯಲ್ಲೇ ಅಡ್ಡಗಟ್ಟಿದ್ದು, ಏನೋ ವಿಚಾರಿಸುವ ರೀತಿಯಲ್ಲಿ ಹತ್ತಿರ ತೆರಳಿದ್ದಾರೆ. ಅಕ್ಕಪಕ್ಕದಲ್ಲಿ ವಾಹನ ಸಂಚಾರ ವಿರಳವಾಗಿದ್ದು ಕೆಲವರು ಅನುಮಾನಾಸ್ಪದವಾಗಿ ನೋಡಿಕೊಂಡು ತೆರಳಿದರಾದರೂ ನಿಲ್ಲಿಸುವ ಧೈರ್ಯ ಮಾಡಿಲ್ಲ. ನಂತರ ಹತ್ತಿರಕ್ಕೆ ತೆರಳಿ ಕಾರೊಳಗೆ ಬಗ್ಗಿದ ಒಬ್ಬ ವ್ಯಕ್ತಿ ಏಕಾಏಕಿ ಪಿಸ್ತೂಲು ತೆಗೆದು ಗುಂಡು ಹಾರಿಸಿದ್ದಾನೆ.
ವರದಿಗಳ ಪ್ರಕಾರ ಸುಮಾರು ಐದು ಬಾರಿ ಗುಂಡು ಹಾರಿಸಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರೂ ಅಲ್ಲಿಯೇ ಮೃತಪಟ್ಟಿದ್ದಾರೆ. ಇಬ್ಬರೂ ಸಾವಿಗೀಡಾಗಿದ್ದು ಖಚಿತವಾಗುತ್ತಿದ್ದಂತೆಯೇ ಸ್ಥಳದಿಂದ ಕಾಲ್ಕೀಳಲು ಸಿದ್ಧರಾದ ಯುವಕರು ಅಕ್ಕಪಕ್ಕದ ಒಂದೆರೆಡು ವಾಹನಗಳಿಗೆ ಬಂದೂಕು ತೋರಿಸಿ ಸ್ಥಳದಲ್ಲಿ ನಿಲ್ಲದಂತೆ ಬೆದರಿಸಿದ್ದಾರೆ. ನಂತರ ಗಡಿಬಿಡಿಯಿಂದ ಬೈಕ್ ಸ್ಟಾರ್ಟ್ ಮಾಡಲೆತ್ನಿಸಿದರೂ ಅದು ಮುಂದೆ ಹೋಗದಿದ್ದಾಗ ಒಂದೆರೆಡು ಸೆಕೆಂಡುಗಳ ಕಾಲ ವಿಚಲಿತರಾದಂತೆ ಕಂಡುಬಂದ ಯುವಕರು ಮತ್ತೆ ಪ್ರಯತ್ನಿಸಿ ಬೈಕ್ ಚಾಲೂ ಮಾಡಿಕೊಂಡು ಸಾಗಿಬಂದ ಕಡೆಗೆ ವಾಪಾಸು ಹೋಗಿದ್ದಾರೆ.
Doctor couple shot dead in Bharatpur district of Rajasthan by unidentified assailants. #crime #Doctor @PoliceRajasthan #Rajasthan @RajCMO @VasundharaBJP @aloketikku pic.twitter.com/NAHDYcnBd4
— ⭐️Sachin Saini⭐️ (@sachinsaini14) May 28, 2021
ಮರಳಿ ಹೋಗುವಾಗಲೂ ಕಾರಿನೆಡೆಗೆ ಗುಂಡು ಹಾರಿಸಿದ ವ್ಯಕ್ತಿ ರಾಜಾರೋಷವಾಗಿ ಕೈಯಲ್ಲಿದ್ದ ಬಂದೂಕನ್ನು ಪ್ರದರ್ಶಿಸಿದ್ದಾನೆ. ಗುಂಡು ಹಾರಿಸಿದಾತ ಮುಖಕ್ಕೆ ಬಟ್ಟೆ ಸುತ್ತಿಕೊಂಡಿದ್ದು, ಇನ್ನೋರ್ವ ಹೆಲ್ಮೆಟ್ ಕೂಡಾ ಧರಿಸದೇ ಹಾಗೆಯೇ ಇರುವುದು ಕಂಡುಬಂದಿದೆ. ಸದ್ಯ ಕೊಲೆಗೆ ಕಾರಣವಾಗಲೀ, ಕೊಲೆ ಮಾಡಿದವರ ಗುರುತಾಗಲೀ ತಿಳಿದುಬಂದಿಲ್ಲವಾದ್ದರಿಂದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಕೊಲೆಯ ಆರೋಪದ ಮೇಲೆ ಜೈಲು ಸೇರಿ, ಜಾಮೀನಿನ ಮೇಲೆ ಇದ್ದ ವೈದ್ಯ ದಂಪತಿ ಕೊಲೆಗೀಡಾದ ವೈದ್ಯ ದಂಪತಿ 2019ರಲ್ಲಿ ಜೈಲುಪಾಲಾಗಿದ್ದರು ಎಂದು ತಿಳಿದುಬಂದಿದೆ. ಡಾ.ಸೀಮಾ ಗುಪ್ತಾ 2 ವರ್ಷಗಳ ಹಿಂದೆ ಓರ್ವ ಮಹಿಳೆ ಹಾಗೂ ಆಕೆಯ ಮಗನನ್ನು ಜೀವಂತವಾಗಿ ಸುಟ್ಟು ಹಾಕಿ ಕೊಲೆ ಮಾಡಿದ್ದರು. ತನ್ನ ಪತಿ ಡಾ.ಸುದೀಪ್ ಗುಪ್ತಾ ಅವರ ಜತೆ ದೀಪಾ ಎಂಬುವವರಿಗೆ ಅನೈತಿಕ ಸಂಬಂಧವಿದೆ ಎಂದು ಅನುಮಾನಿಸಿ ಬೆಂಕಿ ಹಚ್ಚಿ ಸಾಯಿಸಿದ್ದರು. ಆರಂಭದಲ್ಲಿ ಸೀಮಾ ಅವರನ್ನು ಬಂಧಿಸಲಾಗಿತ್ತಾದರೂ ನಂತರ ಕೊಲೆಯಲ್ಲಿ ಸುದೀಪ್ ಗುಪ್ತಾ ಅವರ ಪಾತ್ರವೂ ಇದೆ ಎಂದು ಇಬ್ಬರನ್ನೂ ಜೈಲಿಗೆ ಕಳುಹಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಇಬ್ಬರನ್ನೂ ಇದೀಗ ಹಾಡಹಗಲೇ ನಡುರಸ್ತೆಯಲ್ಲಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ.
राजस्थान के भरतपुर में आज दिन दहाड़े डाक्टर दंपति को गोली मार कर हत्या। pic.twitter.com/tYRxxENHtf
— Raajeev Chopra (@Raajeev_romi) May 28, 2021
ಇದನ್ನೂ ಓದಿ: ಪ್ರೇಯಸಿಯ ಬರ್ಬರ ಹತ್ಯೆ; ಒಲಂಪಿಕ್ ಪದಕ ವಿಜೇತ ಆರೋಪಿಗೆ ವಿಧಿಸಿದ್ದ ಘೋರ ಮರಣದಂಡನೆ ಹೇಗಿತ್ತು ಗೊತ್ತಾ?
‘ನಾನು ಕಿಸ್ ಮಾಡುತ್ತೇನೆ’; ಮಾಸ್ಕ್ ಧರಿಸದ ಮಹಿಳೆಯಿಂದ ನಡುರಸ್ತೆಯಲ್ಲಿ ಪೊಲೀಸರ ಎದುರು ಅನುಚಿತ ವರ್ತನೆ