X-Ray Setu: ಪಟ್ಟಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಪತ್ತೆ ಹಚ್ಚಲು ಬಂದಿದೆ ಎಕ್ಸ್​​ರೇ ಸೇತು: ಏನಿದರ ವಾಟ್ಸಾಪ್​​ ಸೇತುಬಂಧ?

|

Updated on: Jun 03, 2021 | 1:28 PM

X-Ray Setu COVID-19: ಸ್ಥಳೀಯ ವೈದ್ಯರು ಅಥವಾ ರೇಡಿಯಾಲಜಿಸ್ಟ್​ ಸೋಂಕಿತರ ಎದೆಯ ಎಕ್ಸ್​​ರೇ ತೆಗೆದು, ಅದನ್ನು ವಾಟ್ಸಾಪ್​​ ಬಾಟ್​ (Whatsapp bot) ಮೂಲಕ X-Ray setu ಗೆ ಅಪ್​​ಲೋಡ್​ ಮಾಡಬೇಕು. ತದನಂತರ ಅದನ್ನು ಬ್ಯಾಕ್​ ಎಂಡ್​​​​ನಲ್ಲಿ ತಪಾಸಣೆ ಮಾಡಿ, 10-15 ನಿಮಿಷದಲ್ಲಿ ರಿಪೋರ್ಟ್​ ಸಲ್ಲಿಸುತ್ತದೆ. 

X-Ray Setu: ಪಟ್ಟಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಪತ್ತೆ ಹಚ್ಚಲು ಬಂದಿದೆ ಎಕ್ಸ್​​ರೇ ಸೇತು: ಏನಿದರ ವಾಟ್ಸಾಪ್​​ ಸೇತುಬಂಧ?
X-Ray Setu: ಪಟ್ಟಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಪತ್ತೆ ಹಚ್ಚಲು ಬಂದಿದೆ ಎಕ್ಸ್​​ರೇ ಸೇತು: ಏನಿದರ ವಾಟ್ಸಾಪ್​​ ಸೇತುಬಂಧ?
Follow us on

ಆರೋಗ್ಯ ಸೇತು ನಂತರ ಇದೀಗ ಎಕ್ಸ್​​ರೇ ಸೇತು ವಾಟ್ಸಾಪ್​​ ಮೂಲಕ ಆರಂಭಗೊಂಡಿದೆ. ಕೊರೊನಾ ಸೋಂಕು ಪತ್ತೆಗೆ ಇದು ಸಹಕಾರಿಯಾಗಲಿದೆ. ಕೃತಕ ಬುದ್ಧಿಮತ್ತೆ (Artificial intelligence) ಮೂಲಕ  ಎಕ್ಸ್​​ರೇ ಸೇತು (X-Ray Setu) ಕಾರ್ಯನಿರ್ವಹಿಸಲಿದೆ.  COVID-19 ಪತ್ತೆ ಹಚ್ಚಲು ಆರ್​ಟಿ-ಪಿಸಿಆರ್​ ಟೆಸ್ಟ್​ (RT-PCR test) ಮತ್ತು ಸಿಟಿ ಸ್ಕ್ಯಾನ್​ (CT-scans) ಲಭ್ಯವಿಲ್ಲದ ಚಿಕ್ಕ ಚಿಕ್ಕ ಪಟ್ಟಣ, ನಗರಗಳಲ್ಲಿ ಸಾವಿರಾರು ವೈದ್ಯರಿಗೆ ಇದು ಸಹಾಯಕವಾಗಲಿದೆ.

ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್ ಮತ್ತು ರೋಬೋಟಿಕ್ಸ್​ ಸಂಸ್ಥೆಯಾದ ಆರ್ಟ್​ ಪಾರ್ಕ್​​ನ (Artpark) ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಸ್ವಯಂ ಸೇವಾ ಸಂಸ್ಥೆಯಾದ ಆರ್ಟ್​ ಪಾರ್ಕ್​​ನ ಸಿಇಒ ಉಮಾಕಾಂತ್​ ಸೋನಿ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದಂತೆ ಸ್ಟಾರ್ಟ್​ ಕಂಪನಿಯಾದ ನಿರ್ಮಾಯಿ (Niramai) ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science -IISc)  ಜೊತೆಗೂಡಿ ಎಕ್ಸ್​​ರೇ ಸೇತು ಆ್ಯಪ್​ ಅನ್ನು ಅಭಿವೃದ್ಧಿ ಪಡಿಸಲಾಗಿದೆ.

ಪ್ರಸ್ತುತ ಕೊರೊನಾ ಸಂಕಷ್ಟ ಕಾಲದಲ್ಲಿ ಸೋಂಕಿತರಿಂದ ಯಾವುದೇ ಶುಲ್ಕ ಪಡೆಯದೆ ಸರಳವಾದ ಎಕ್ಸ್​​ರೇ ತೆಗೆದು,  ಕೃತಕ ಬುದ್ಧಿಮತ್ತೆ ಮೂಲಕ ಕೊರೊನಾ ಸೋಂಕಿನ ಪ್ರಮಾಣವನ್ನು ಪತ್ತೆಹಚ್ಚಬಹುದು.

ಸ್ಥಳೀಯ ವೈದ್ಯರು ಅಥವಾ ರೇಡಿಯಾಲಜಿಸ್ಟ್​ ಸೋಂಕಿತರ ಎದೆಯ ಎಕ್ಸ್​​ರೇ ತೆಗೆದು, ಅದನ್ನು ವಾಟ್ಸಾಪ್​​ ಬಾಟ್​ (Whatsapp bot) ಮೂಲಕ X-Ray setu ಗೆ ಅಪ್​​ಲೋಡ್​ ಮಾಡಬೇಕು. ತದನಂತರ ಅದನ್ನು ಬ್ಯಾಕ್​ ಎಂಡ್​​​​ನಲ್ಲಿ ತಪಾಸಣೆ ಮಾಡಿ, 10-15 ನಿಮಿಷದಲ್ಲಿ ರಿಪೋರ್ಟ್​ ಸಲ್ಲಿಸುತ್ತದೆ.

(Government launches X-Ray Setu on WhatsApp to detect COVID-19 case using AI and robotics)

ಕೇಂದ್ರದ CoWin ಆ್ಯಪ್ ಬೇಡ; ನಮ್ಮದೇ ಇರಲಿ ಎಂದು ಹೊಸ ಆ್ಯಪ್ ರಚನೆಗೆ ಮುಂದಾದ ಕರ್ನಾಟಕ ಸರ್ಕಾರ