12-14 ವರ್ಷ ವಯಸ್ಸಿನ ಮಕ್ಕಳಿಗೆ ಕೊವಿಡ್ ಲಸಿಕೆ: ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ

| Updated By: ರಶ್ಮಿ ಕಲ್ಲಕಟ್ಟ

Updated on: Mar 15, 2022 | 5:08 PM

ವ್ಯಾಕ್ಸಿನೇಷನ್‌ನ ಐದನೇ  ಹಂತದ ಭಾಗವಾಗಿ 16 ಮಾರ್ಚ್ 2022 ರಿಂದ ಮಕ್ಕಳಿಗೆ ಲಸಿಕೆ ನೀಡಿಕೆ ಅಭಿಯಾನ ಪ್ರಾರಂಭವಾಗುತ್ತದೆ.

12-14 ವರ್ಷ ವಯಸ್ಸಿನ ಮಕ್ಕಳಿಗೆ ಕೊವಿಡ್ ಲಸಿಕೆ: ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಮಾರ್ಚ್ 14, 2022 ರಂದು ಬಿಡುಗಡೆಯಾದ ಹೇಳಿಕೆಯಲ್ಲಿ ಭಾರತ ಸರ್ಕಾರವು 12-14 ವರ್ಷ ವಯಸ್ಸಿನ ಮಕ್ಕಳಿಗೆ ಕೊವಿಡ್ ಲಸಿಕೆಗೆ (COVID-19 vaccination)ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮೊದಲೇ ಅಸ್ತಿತ್ವದಲ್ಲಿರುವ ವ್ಯಾಕ್ಸಿನೇಷನ್ ಮಾರ್ಗಸೂಚಿಗಳಿನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದ್ದು ಮತ್ತು ಲಸಿಕೆ ತಂಡಗಳು ಅನಾಫಿಲ್ಯಾಕ್ಸಿಸ್ ಕಿಟ್‌ಗಳೊಂದಿಗೆ ಸುಸಜ್ಜಿತವಾಗಿರುತ್ತವೆ. ಕಾರ್ಬೆವ್ಯಾಕ್ಸ್ (CorbeVax)ಲಸಿಕೆಯನ್ನು 12-14 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತದೆ. ಫಲಾನುಭವಿ ವಯೋಮಿತಿಯನ್ನು ಎರಡು ವಿಭಾಗಗಳಾಗಿ 12 ರಿಂದ 13 ವರ್ಷಗಳು ಮತ್ತು 13 ರಿಂದ 14 ವರ್ಷಗಳು ಎಂದು ವಿಂಗಡಿಸಲಾಗಿದೆ. CoWIN ಪೋರ್ಟಲ್‌ನಲ್ಲಿ ಅವರ ನೋಂದಣಿ ಸ್ಥಿತಿಯನ್ನು ಲೆಕ್ಕಿಸದೆ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಲಸಿಕೆಯನ್ನು ನೀಡಲಾಗುತ್ತದೆ. 15 ಮಾರ್ಚ್ 2010 ರ ಮೊದಲು ಜನಿಸಿದ ಮಕ್ಕಳು ಲಸಿಕೆಗೆ ಅರ್ಹರಾಗಿರುವುದಿಲ್ಲ.

12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಸರ್ಕಾರದ ಕೊವಿಡ್ ಲಸಿಕೆ ಮಾರ್ಗಸೂಚಿಗಳು ಇಲ್ಲಿವೆ:
12-14 ವರ್ಷ ವಯಸ್ಸಿನ ಎಲ್ಲಾ ಫಲಾನುಭವಿಗಳು ಲಸಿಕೆಯನ್ನು ಪಡೆಯಬೇಕು.
ಲಸಿಕೆಗಾಗಿ ಸ್ಲಾಟ್‌ಗಳನ್ನು CoWIN ಪೋರ್ಟಲ್ ಮೂಲಕ ಬುಕ್ ಮಾಡಬಹುದು.
ಆನ್-ಸೈಟ್ ನೋಂದಣಿ ಸೌಲಭ್ಯಗಳು ಸಹ ಲಭ್ಯವಿದೆ.

ಇಲ್ಲಿಯವರೆಗೆ, 180 ಕೋಟಿಗೂ ಹೆಚ್ಚು ಲಸಿಕೆಗಳನ್ನು ನಿರ್ವಹಿಸಲಾಗಿದೆ ಮತ್ತು 80 ರಷ್ಟು ಅರ್ಹ ಫಲಾನುಭವಿಗಳು ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿದ್ದಾರೆ. ಇದಲ್ಲದೆ, 15 ವರ್ಷಕ್ಕಿಂತ ಮೇಲ್ಪಟ್ಟ ಅರ್ಹ ಜನಸಂಖ್ಯೆಯ 95.5 ಪ್ರತಿಶತದಷ್ಟು ಜನರು ಕನಿಷ್ಠ ಒಂದು ಡೋಸ್‌ನೊಂದಿಗೆ ಲಸಿಕೆ ಹಾಕಿದ್ದಾರೆ.

ಇದನ್ನೂ ಓದಿ: Covid Vaccination ದೇಶದಲ್ಲಿ 12-14 ವಯಸ್ಸಿನ ಎಲ್ಲಾ ಮಕ್ಕಳಿಗೆ ಕೊವಿಡ್ ಲಸಿಕೆ ನೀಡಿಕೆ ಬುಧವಾರ ಆರಂಭ

Published On - 4:35 pm, Tue, 15 March 22