ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಬೆಂಗಾವಲಿಗಿದ್ದ 3 ವಾಹನಗಳಿಗೆ ಅಪಘಾತ..
Bhagat Singh Koshyari: ನನಗೆ ಸಂವಿಧಾನ ನೀಡಿರುವ ಅಧಿಕಾರವನ್ನು ಬಳಸಿ ನಾನಿಂದು ಹಿಂಗೋಲಿಗೆ ಆಗಮಿಸಿ, ಇಲ್ಲಿನ ನೀರಾವರಿ, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಪರಿಶೀಲಿಸಿದ್ದೇನೆ ಎಂದು ರಾಜ್ಯಪಾಲರು ಹೇಳಿಕೊಂಡಿದ್ದಾರೆ.
ಹಿಂಗೋಲಿ: ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ (Bhagat Singh Koshyari) ಅವರ ಬೆಂಗಾವಲು ವಾಹನಗಳಿಗೆ ಅಪಘಾತ ಆಗಿದೆ. ಭಗತ್ ಸಿಂಗ್ ಕೋಶ್ಯಾರಿ ಸದ್ಯ ಹಿಂಗೋಲಿ ಪ್ರವಾಸದಲ್ಲಿದ್ದಾರೆ. ಅವರ ರಕ್ಷಣೆಗೆ ಇದ್ದ ಬೆಂಗಾವಲು ವಾಹನಗಳಲ್ಲಿ ಮೂರು ವಾಹನಗಳು ಅಪಘಾತಕ್ಕೀಡಾಗಿವೆ. ನರಸಿ ನಾಮ್ದೇವ್ಗೆ ತೆರಳುತ್ತಿದ್ದ ಮಾರ್ಗದಲ್ಲಿ ಈ ಆ್ಯಕ್ಸಿಡೆಂಟ್ (Accident) ಆಗಿದ್ದು, ಮೂರು ಕಾರುಗಳಿಗೆ ಸಣ್ಣಪುಟ್ಟ ಹಾನಿಯುಂಟಾಗಿದೆ. ಯಾರಿಗೂ ಗಂಭೀರ ಪ್ರಮಾನದಲ್ಲಿ ಗಾಯ ಆಗಿಲ್ಲ. ಇಂದು ಬೆಳಗ್ಗೆ 10.30ಕ್ಕೆ ಸರಿಯಾಗಿ ಕೋಶ್ಯಾರಿ ಅವರು ಔಂಧ ನಾಗನಾಥ ಮಾರ್ಗವಾಗಿ ಹಿಂಗೋಲಿಯನ್ನು ತಲುಪಿದ್ದಾರೆ.
ನನಗೆ ಸಂವಿಧಾನ ನೀಡಿರುವ ಅಧಿಕಾರವನ್ನು ಬಳಸಿ ನಾನಿಂದು ಹಿಂಗೋಲಿಗೆ ಆಗಮಿಸಿ, ಇಲ್ಲಿನ ನೀರಾವರಿ, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಪರಿಶೀಲಿಸಿದ್ದೇನೆ ಎಂದು ರಾಜ್ಯಪಾಲರು ಹೇಳಿಕೊಂಡಿದ್ದಾರೆ. ಹಾಗೇ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆಯನ್ನೂ ನಡೆಸಿದ್ದಾರೆ. ಈ ಸಭೆಯ ಬಳಿಕ ನರಸಿ ನಾಮ್ದೇವ್ಗೆ ರಾಜ್ಯಪಾಲರು ಹೊರಡಲು ಸಿದ್ಧರಾದರು. ಆಗ ಅಲ್ಲಿಂದ ತಕ್ಷಣವೇ ಅವರ ಬೆಂಗಾವಲು ವಾಹನಗಳೂ ಹೊರಟವು. ನರಸಿ ನಾಮ್ದೇವ್ ತಲುಪುತ್ತಿದ್ದಂತೆ ಮೊದಲು ಅಗ್ನಿಶಾಮಕ ಇಲಾಖೆ ವಾಹನದ ಬ್ರೇಕ್ ಫೇಲ್ ಆಯಿತು. ಒಮ್ಮೆಲೇ ನಿಂತ ಈ ವಾಹನಕ್ಕೆ ಉಳಿದೆರಡು ವಾಹನಗಳು ಡಿಕ್ಕಿ ಹೊಡೆದು ಅಪಘಾತ ನಡೆದಿದೆ. ದೊಡ್ಡದೇನೂ ಅವಘಡ ಆಗಿಲ್ಲ.
ಇದನ್ನೂ ಓದಿ: Sherlyn Chopra: ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊನೆಗೂ ಪೊಲೀಸರ ಮುಂದೆ ಹಾಜರಾದ ನಟಿ ಶೆರ್ಲಿನ್ ಚೋಪ್ರಾ
ಮೈಸೂರು: ವರ್ಷದ ಕೊನೆಯ ಆಷಾಡ ಶುಕ್ರವಾರವೂ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧ
Published On - 5:28 pm, Fri, 6 August 21