ಮೈಸೂರು: ವರ್ಷದ ಕೊನೆಯ ಆಷಾಡ ಶುಕ್ರವಾರವೂ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧ
ಚಾಮುಂಡಿ ಬೆಟ್ಟದ ನಿವಾಸಿಗಳು ಹಾಗೂ ಶಿಷ್ಟಾಚಾರದ ಪ್ರಕಾರ ನಿಗದಿತ ಜನರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ಮೈಸೂರು: ಕೊರೊನಾ ಎರಡನೇ ಅಲೆ ತೀವ್ರತೆ ಇನ್ನೂ ಕೂಡ ಕಡಿಮೆ ಆಗಿಲ್ಲ. ಅನ್ಲಾಕ್ ಬಳಿಕವೂ ದೇಶದಲ್ಲಿ ಮತ್ತು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊವಿಡ್-19 ಪ್ರಕರಣಗಳು ಇಳಿಮುಖ ಆಗಿಲ್ಲ. ಕರ್ನಾಟಕ ಸಂಪೂರ್ಣ ಅನ್ಲಾಕ್ ಆಗುವ ಮೊದಲೇ ಮತ್ತೆ ವೀಕೆಂಡ್ ಕರ್ಫ್ಯೂ, ರಾತ್ರಿ ಕರ್ಫ್ಯೂ ಘೋಷಿಸುವಂತಾಗಿದೆ. ಈ ಪರಿಣಾಮ ರಾಜ್ಯದ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತರ ಪ್ರವೇಶಕ್ಕೂ ಸಮಸ್ಯೆ ಉಂಟಾಗಿದೆ. ಇಂದು (ಆಗಸ್ಟ್ 6) ಈ ವರ್ಷದ ಕೊನೆಯ ಆಷಾಡ ಶುಕ್ರವಾರ. ಆದರೆ, ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶಕ್ಕೆ ಇಂದು ಸಹ ನಿರ್ಬಂಧ ವಿಧಿಸಲಾಗಿದೆ.
ಚಾಮುಂಡಿ ಬೆಟ್ಟದ ಮೇಲ್ಬಾಗಕ್ಕೆ ತೆರಳಲು ಸಂಪರ್ಕ ಕಲ್ಪಿಸುವ ಎಲ್ಲಾ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಚಾಮುಂಡಿ ಬೆಟ್ಟದ ನಿವಾಸಿಗಳು ಹಾಗೂ ಶಿಷ್ಟಾಚಾರದ ಪ್ರಕಾರ ನಿಗದಿತ ಜನರಿಗೆ ಮಾತ್ರ ದೇವಾಲಯ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ಕೊನೆಯ ಆಷಾಡ ಶುಕ್ರವಾರದಂದು ಭಕ್ತರಿಲ್ಲದೇ ಚಾಮುಂಡಿ ಬೆಟ್ಟ ಭಣಗುಟ್ಟಿದೆ. ಚಾಮುಂಡಿ ಬೆಟ್ಟದದಲ್ಲಿ ಅಂಗಡಿಗಳು ಬಂದ್ ಆಗಿವೆ. ದೇಗುಲದ ಬಾಗಿಲು ಮುಚ್ಚಿದ್ದರಿಂದ ದೇಗುಲದ ಮುಂಭಾಗದಲ್ಲೆ ಸ್ಥಳೀಯ ನಿವಾಸಿಗಳು ಪೂಜೆ ಸಲ್ಲಿಸಿದ್ದಾರೆ. ಚಾಮುಂಡೇಶ್ವರಿ ದೇವಿಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಕೆ ಮಾಡಲಾಗಿದೆ. ದೇಗುಲಕ್ಕೆ, ದೇವಿಯ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ರುದ್ರಾಭಿಷೇಕ, ಕುಂಕುಮಾಭಿಷೇಕ ನೆರವೇರಿಸಲಾಗಿದೆ.
ಮಡಿಕೇರಿ: ಹಣ ಕೊಟ್ಟು ರಾಜ್ಯಕ್ಕೆ ಜನರು ಪ್ರವೇಶ ಮಾಡುತ್ತಿದ್ದಾರೆ: ಕೆ.ಜಿ.ಬೋಪಯ್ಯ ಗಂಭೀರ ಆರೋಪ ಕೇರಳ, ಕೊಡಗು ಜಿಲ್ಲೆ ಗಡಿಯಲ್ಲಿ ತಪಾಸಣೆ ನಡೆಯುತ್ತಿಲ್ಲ. ರಾತ್ರಿ ಪಾಳಿಯಲ್ಲಿ ತಪಾಸಣೆ ಮಾಡಲು ಸಿಬ್ಬಂದಿ ಇರಲ್ಲ. ಚೆಕ್‌ಪೋಸ್ಟ್‌ಗಳಲ್ಲಿ ತಹಶೀಲ್ದಾರ್‌ಗೆ ಹಣ ನೀಡಲಾಗುತ್ತಿದೆ. ಹಣ ಕೊಟ್ಟು ರಾಜ್ಯಕ್ಕೆ ಜನರು ಪ್ರವೇಶ ಮಾಡುತ್ತಿದ್ದಾರೆ ಎಂದು ವಿರಾಜಪೇಟೆ ತಹಶೀಲ್ದಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ನಡೆದ ಕೊರೊನಾ ನಿಯಂತ್ರಣ ಸಂಬಂಧ ಸಭೆಯಲ್ಲಿ ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ ಗಂಭೀರ ಆರೋಪ ಮಾಡಿದ್ದಾರೆ. ಜಿಲ್ಲಾಧಿಕಾರಿ ಸರಿಯಾಗಿ ಕೆಲಸ ಮಾಡುತ್ತಿಲ್ಲ, ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿಗಳಿಲ್ಲ. ನಮ್ಮದೇ ಸರ್ಕಾರ ಇದ್ರೂ ನಮಗೆ ಅಧಿಕಾರ ಇಲ್ಲ. ಚೆಕ್ ಪೋಸ್ಟ್ಗಳಲ್ಲಿ ಪೊಲೀಸ್, ಕಂದಾಯ, ಆರೋಗ್ಯ ಇಲಾಖೆ ವಿಫಲ ಎಂದು ಕೊಡಗು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಬೋಪಯ್ಯ ಹತಾಶೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೈಸೂರು ಮೃಗಾಲಯದಿಂದ ನೂತನ ಪ್ರಯೋಗ; ಆನೆಗಳಿಗಾಗಿ ಈಜುಕೊಳ ನಿರ್ಮಾಣ!
ಅತ್ಯಾಚಾರ ಆರೋಪ ಪ್ರಕರಣದಲ್ಲಿ ಮೈಸೂರು ವಿವಿ ಹೆಸರು ಕೇಡುತ್ತಿದೆ; ಪ್ರಾಧ್ಯಾಪಕರಿಬ್ಬರಿಗೂ ನೊಟೀಸ್ ನೀಡಲು ಚಿಂತನೆ
(Mysuru Chamundi Hill devotees entry denied due to Coronavirus Covid19)
Published On - 5:03 pm, Fri, 6 August 21