ಮಾರ್ಗದರ್ಶಕ ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ; ಪೊಲೀಸರ ವಿಚಾರಣೆ ವೇಳೆ ಉಲ್ಟಾ ಹೊಡೆದ ವಿದ್ಯಾರ್ಥಿನಿ

ಪ್ರೊ. ರಾಮಚಂದ್ರ ನನ್ನ ಪಿಹೆಚ್‌. ಡಿ ಮಾರ್ಗದರ್ಶಕರು. ಸಂಶೋಧನೆಯ ಬಗ್ಗೆ ನಾವಿಬ್ಬರೂ ಮಾತನಾಡುತ್ತಿದ್ದೆವು. ಅವರ ಪತ್ನಿ ಲೋಲಾಕ್ಷಿ ನನ್ನನ್ನ ಹೆದರಿಸಿ ದೂರು ಬರೆಸಿದರು ಎಂದು ಇಂದು ಲೋಲಾಕ್ಷಿ ವಿರುದ್ಧವೇ ವಿದ್ಯಾರ್ಥಿನಿಯು ದೂರು ನೀಡಿದ್ದಾರೆ.

ಮಾರ್ಗದರ್ಶಕ ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ; ಪೊಲೀಸರ ವಿಚಾರಣೆ ವೇಳೆ ಉಲ್ಟಾ ಹೊಡೆದ ವಿದ್ಯಾರ್ಥಿನಿ
ಅತ್ಯಾಚಾರ ಆರೋಪ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 06, 2021 | 12:31 PM

ಮೈಸೂರು: ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಪೊಲೀಸರ ವಿಚಾರಣೆ ವೇಳೆ ವಿದ್ಯಾರ್ಥಿನಿಯು ಉಲ್ಟಾ ಹೇಳಿಕೆ ಕೊಟ್ಟಿದ್ದಾರೆ. ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ನಿನ್ನೆ ದೂರಿನ ಪ್ರತಿಗೆ ಸಹಿ, ಹೆಬ್ಬೆಟ್ಟು ಹಾಕಿದ್ದ ಸದರಿ ವಿದ್ಯಾರ್ಥಿನಿ ಇಂದು ತನ್ನ ಮೇಲೆ ಅತ್ಯಾಚಾರ ಆಗಿಲ್ಲವೆಂದು ಹೇಳಿಕೆ ಕೊಟ್ಟಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಉಲ್ಟಾ ಹೊಡೆದ ವಿದ್ಯಾರ್ಥಿನಿಯು ಅಂತಹ ಯಾವ ಘಟನೆಯೂ ನಡೆದಿಲ್ಲವೆಂದು ಹೇಳಿದ್ದಾರೆ. ಪ್ರೊ. ರಾಮಚಂದ್ರ ನನ್ನ ಪಿಹೆಚ್‌. ಡಿ ಮಾರ್ಗದರ್ಶಕರು. ಸಂಶೋಧನೆಯ ಬಗ್ಗೆ ನಾವಿಬ್ಬರೂ ಮಾತನಾಡುತ್ತಿದ್ದೆವು. ಅವರ ಪತ್ನಿ ಲೋಲಾಕ್ಷಿ ನನ್ನನ್ನ ಹೆದರಿಸಿ ದೂರು ಬರೆಸಿದರು ಎಂದು ಇಂದು ಲೋಲಾಕ್ಷಿ ವಿರುದ್ಧವೇ ವಿದ್ಯಾರ್ಥಿನಿಯು ದೂರು ನೀಡಿದ್ದಾರೆ. ಜಯಲಕ್ಷ್ಮೀಪುರಂ ಪೊಲೀಸರು ಇದೀಗ ಎನ್​ಸಿಆರ್‌ (NCR) ದಾಖಲಿಸಿಕೊಂಡಿದ್ದಾರೆ.

ಏನಿದು ಪ್ರಕರಣ:

ಪ್ರಖ್ಯಾತ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ವಿರುದ್ಧ ಸಂಶೋಧನಾ ವಿದ್ಯಾರ್ಥಿನಿ‌ ಮೇಲೆ‌ ಅತ್ಯಾಚಾರಗೈದ ಆರೋಪ ಗುರುವಾರ ಕೇಳಿಬಂದಿತ್ತು. ಸಂತ್ರಸ್ತೆ ಸಂಶೋಧನಾ ವಿದ್ಯಾರ್ಥಿನಿ ಜಯಲಕ್ಷ್ಮಿ ಪುರಂ ಠಾಣೆಗೆ ದೂರು ಸಹ ಸಲ್ಲಿಸಿದ್ದರು.  ಆ ಸಂಶೋಧನಾ ವಿದ್ಯಾರ್ಥಿನಿ‌ ಪ್ರಾಧ್ಯಾಪಕನ ಬಳಿ ಪಿಎಚ್ ಡಿ ಮಾರ್ಗದರ್ಶನ ಪಡೆಯುತ್ತಿದ್ದರು. ವಿದ್ಯಾರ್ಥಿನಿಯನ್ನು ಮನೆಗೆ ಆರೋಪಿ ಕರೆಸಿಕೊಂಡಿದ್ದರಂತೆ. ಆ ವೇಳೆ‌ ಸಂತ್ರಸ್ತೆ ಕೂಗಾಟ, ಚೀರಾಟ ನಡೆಸಿದ್ದಳು. ಇದೇ ಸಂದರ್ಭಕ್ಕೆ ಮನೆಗೆ ಪ್ರಾಧ್ಯಾಪಕನ ಪತ್ನಿ ಲೋಲಾಕ್ಷಿ ಆಗಮಿಸಿದ್ದರು. ಲೋಲಾಕ್ಷಿ ಅವರು ಸಹ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ. ನಂತರ ಅವರು ಸಂತ್ರಸ್ತೆ ಯುವತಿಯನ್ನು ಹಾಗೂ ತನ್ನ ಪತಿಯನ್ನು ಠಾಣೆಗೆ ಕರೆದೊಯ್ದು ಪೊಲೀಸರಿಗೆ ಒಪ್ಪಿಸಿದ್ದರು, ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದರು.

ಮೈಸೂರು ವಿವಿ ಪ್ರಾಧ್ಯಾಪಕನಿಂದ ಸಂಶೋಧನಾ ವಿದ್ಯಾರ್ಥಿ ಮೇಲೆ ಅತ್ಯಾಚಾರ ಆರೋಪ; ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗಂಡನನ್ನು ಪೊಲೀಸರಿಗೆ ನೀಡಿದ ಪತ್ನಿ

(rape by professor in mysore lady student denies the allegation)

Published On - 12:24 pm, Fri, 6 August 21