ಮೈಸೂರು ವಿವಿ ಪ್ರಾಧ್ಯಾಪಕನಿಂದ ಸಂಶೋಧನಾ ವಿದ್ಯಾರ್ಥಿ ಮೇಲೆ ಅತ್ಯಾಚಾರ ಆರೋಪ; ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಗಂಡನನ್ನು ಪೊಲೀಸರಿಗೆ ನೀಡಿದ ಪತ್ನಿ
ಬೇರೆ ಯಾವ ಯುವತಿಯರ ಮೇಲು ಇಂತಹ ದಾಳಿ ನಡೆಯಬಾರದು. ಹೀಗಾಗಿ ನಾನೇ ಮುಂದೆ ನಿಂತು ದೂರು ದಾಖಲಿಸಿದ್ದೇನೆ. ವಿವಿಯ ಕುಲಪತಿ, ಕುಲಸಚಿವರ ಗಮನಕ್ಕೂ ತಂದಿದ್ದೇನೆ’ ಎಂದು ಆರೋಪಿ ಪತ್ನಿ, ಮೈಸೂರು ವಿವಿ ಪ್ರಾಧ್ಯಾಪಕಿ ಡಾ.ಲೋಲಾಕ್ಷಿ ಹೇಳಿಕೆ ನೀಡಿದ್ದಾರೆ.
ಮೈಸೂರು: ಪ್ರಖ್ಯಾತ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ಮೇಲೆ ಸಂಶೋಧನಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಗೈದ ಆರೋಪ ಕೇಳಿಬಂದಿದೆ. ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೋ. ರಾಮಚಂದ್ರ ವಿರುದ್ಧ ಆರೋಪ ಕೇಳಿಬಂದಿದೆ. ಸಂತ್ರಸ್ತೆ ಸಂಶೋಧನಾ ವಿದ್ಯಾರ್ಥಿನಿ ಜಯಲಕ್ಷ್ಮಿ ಪುರಂ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಸಂತ್ರಸ್ತೆ ರಾಮಚಂದ್ರ ಬಳಿ ಪಿಎಚ್ ಡಿ ಮಾರ್ಗದರ್ಶನ ಪಡೆಯುತ್ತಿದ್ದರು. ವಿದ್ಯಾರ್ಥಿನಿಯನ್ನು ಮನೆಗೆ ಮನೆಗೆ ಪ್ರೊ. ರಾಮಚಂದ್ರ ಕರೆಸಿಕೊಂಡಿದ್ದ. ಈ ವೇಳೆ ಸಂತ್ರಸ್ತೆ ಕೂಗಾಟ, ಚೀರಾಟ ನಡೆಸಿದ್ದಳು. ಇದೇ ಸಂಧರ್ಭಕ್ಕೆ ಮನೆಗೆ ಪ್ರಾಧ್ಯಾಪಕ ರಾಮಚಂದ್ರ ಪತ್ನಿ ಲೋಲಾಕ್ಷಿ ಆಗಮಿಸಿದ್ದರು. ಲೋಲಾಕ್ಷಿ ಅವರು ಸಹ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ. ನಂತರ ಅವರು ಸಂತ್ರಸ್ತೆ ಯುವತಿಯನ್ನು ಹಾಗೂ ತನ್ನ ಪತಿಯನ್ನು ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನಾನು ಇಂದು ಕಾಲೇಜಿಗೆ ಹೋಗಿದ್ದೆ. ಸ್ಟಡಿ ಮೆಟಿರಿಯಲ್ ತೆಗೆದುಕೊಳ್ಳುವ ಸಲುವಾಗಿ ಮನೆಗೆ ಬಂದೆ. ಆಗ ಮನೆಯಲ್ಲಿ ಕೂಗಾಟ ಕೇಳಿಸುತ್ತಿತ್ತು. ಬಾಗಿಲು ತೆಗೆಸಿದಾಗ ಸಂತ್ರಸ್ತೆ ನನ್ನ ಕಾಲು ಹಿಡಿದುಕೊಂಡಳು. ನನ್ನ ಮೇಲೆ ಅತ್ಯಾಚಾರವಾಗಿದೆ ಅಂತ ಹೇಳಿಕೊಂಡಳು. ಕೂಡಲೇ ಇಬ್ಬರನ್ನು ಪೋಲಿಸ್ ಠಾಣೆಗೆ ಕರೆದುಕೊಂಡು ಬಂದಿದ್ದೇನೆ. ನನ್ನ ಗಂಡ ಡಿಪಾರ್ಟ್ಮೆಂಟ್ ನಲ್ಲೇ ವಿದ್ಯಾರ್ಥಿನಿಯರ ಜೊತೆ ಸಂಬಂಧ ಇಟ್ಟುಕೊಂಡಿದ್ದ. ಇದೆಲ್ಲದರ ಬಗ್ಗೆ ಮೊದಲಿನಿಂದಲೂ ನನಗೆ ಅನುಮಾನವಿತ್ತು. ನನ್ನ ಪತಿ ಹಲವು ವಿದ್ಯಾರ್ಥಿನಿಯರನ್ನು ಬಳಸಿಕೊಂಡಿದ್ದಾನೆ. ಇವತ್ತು ಅದು ಸಾಬೀತಾಗಿದೆ. ಬೇರೆ ಯಾವ ಯುವತಿಯರ ಮೇಲು ಇಂತಹ ದಾಳಿ ನಡೆಯಬಾರದು. ಹೀಗಾಗಿ ನಾನೇ ಮುಂದೆ ನಿಂತು ದೂರು ದಾಖಲಿಸಿದ್ದೇನೆ. ವಿವಿಯ ಕುಲಪತಿ, ಕುಲಸಚಿವರ ಗಮನಕ್ಕೂ ತಂದಿದ್ದೇನೆ’ ಎಂದು ಆರೋಪಿ ಪತ್ನಿ, ಮೈಸೂರು ವಿವಿ ಪ್ರಾಧ್ಯಾಪಕಿ ಡಾ.ಲೋಲಾಕ್ಷಿ ಹೇಳಿಕೆ ನೀಡಿದ್ದಾರೆ.
(Rape accused of research student by Mysore University professor wife gave her husband to the police)
Published On - 8:18 pm, Thu, 5 August 21