ಅತ್ಯಾಚಾರ ಆರೋಪ ಪ್ರಕರಣದಲ್ಲಿ ಮೈಸೂರು ವಿವಿ ಹೆಸರು ಕೆಡುತ್ತಿದೆ; ಪ್ರಾಧ್ಯಾಪಕರಿಬ್ಬರಿಗೂ ನೊಟೀಸ್ ನೀಡಲು ಚಿಂತನೆ

ಮುಂದಿನ ತಿಂಗಳು ನ್ಯಾಕ್ ಕಮಿಟಿ ವಿವಿಗೆ ಭೇಟಿ ಕೊಡುತ್ತಿದೆ. ಈ ಇಬ್ಬರ ಪ್ರಕರಣ ವಿವಿಗೆ ಮುಜುಗರ ತಂದಿದೆ. ಈ ಸಂಬಂಧ ಇಬ್ಬರಿಗು ಕಾರಣ ಕೇಳಿ ನೋಟಿಸ್ ಕೊಡಲಾಗುವುದು ಎಂದು ಮೈಸೂರು ವಿವಿ ಕುಲಸಚಿವ ಶಿವಪ್ಪ ಹೇಳಿಕೆ ನೀಡಿದ್ದಾರೆ.

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಮೈಸೂರು ವಿವಿ ಹೆಸರು ಕೆಡುತ್ತಿದೆ; ಪ್ರಾಧ್ಯಾಪಕರಿಬ್ಬರಿಗೂ ನೊಟೀಸ್ ನೀಡಲು ಚಿಂತನೆ
ಅತ್ಯಾಚಾರ ಆರೋಪ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 07, 2021 | 12:07 AM

ಮೈಸೂರು: ಮೈಸೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕನ ಮೇಲೆ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಬ್ಬರಿಗೂ ನೊಟೀಸ್ ನೀಡಲು ವಿವಿ ಚಿಂತನೆ ನಡೆಸಿದೆ. ಇಬ್ಬರ ವೈಯುಕ್ತಿಕ ವಿಚಾರದಲ್ಲಿ ಮೈಸೂರು ವಿಶ್ವವಿದ್ಯಾಲಯ ಹೆಸರು ಕೆಡುತ್ತಿದೆ ಎಂದು ವಿಶ್ವವಿದ್ಯಾಲಯ ಕುಲಸಚಿವ ಶಿವಪ್ಪ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳಲ್ಲಿ ವಿವಿ ಹೆಸರು ನೋಡಿ ಬೇಸರವಾಗುತ್ತಿದೆ. ಮುಂದಿನ ತಿಂಗಳು ನ್ಯಾಕ್ ಕಮಿಟಿ ವಿವಿಗೆ ಭೇಟಿ ಕೊಡುತ್ತಿದೆ. ಈ ಇಬ್ಬರ ಪ್ರಕರಣ ವಿವಿಗೆ ಮುಜುಗರ ತಂದಿದೆ. ಈ ಸಂಬಂಧ ಇಬ್ಬರಿಗು ಕಾರಣ ಕೇಳಿ ನೋಟಿಸ್ ಕೊಡಲಾಗುವುದು ಎಂದು ಮೈಸೂರು ವಿವಿ ಕುಲಸಚಿವ ಶಿವಪ್ಪ ಹೇಳಿಕೆ ನೀಡಿದ್ದಾರೆ.

ಪ್ರಖ್ಯಾತ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರ ಮೇಲೆ ಸಂಶೋಧನಾ ವಿದ್ಯಾರ್ಥಿನಿ‌ ಮೇಲೆ‌ ಅತ್ಯಾಚಾರಗೈದ ಆರೋಪ ಕೇಳಿಬಂದಿದೆ. ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೋ. ರಾಮಚಂದ್ರ ವಿರುದ್ಧ ಆರೋಪ ಕೇಳಿಬಂದಿದೆ. ಸಂತ್ರಸ್ತೆ ಸಂಶೋಧನಾ ವಿದ್ಯಾರ್ಥಿನಿ ಜಯಲಕ್ಷ್ಮಿ ಪುರಂ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಸಂತ್ರಸ್ತೆ ರಾಮಚಂದ್ರ ಬಳಿ ಪಿಎಚ್ ಡಿ ಮಾರ್ಗದರ್ಶನ ಪಡೆಯುತ್ತಿದ್ದರು. ವಿದ್ಯಾರ್ಥಿನಿಯನ್ನು ಮನೆಗೆ ಮನೆಗೆ ಪ್ರೊ. ರಾಮಚಂದ್ರ ಕರೆಸಿಕೊಂಡಿದ್ದ. ಈ ವೇಳೆ‌ ಸಂತ್ರಸ್ತೆ ಕೂಗಾಟ, ಚೀರಾಟ ನಡೆಸಿದ್ದಳು. ಇದೇ ಸಂಧರ್ಭಕ್ಕೆ ಮನೆಗೆ ಪ್ರಾಧ್ಯಾಪಕ ರಾಮಚಂದ್ರ ಪತ್ನಿ ಲೋಲಾಕ್ಷಿ ಆಗಮಿಸಿದ್ದರು. ಲೋಲಾಕ್ಷಿ ಅವರು ಸಹ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ. ನಂತರ ಅವರು ಸಂತ್ರಸ್ತೆ ಯುವತಿಯನ್ನು ಹಾಗೂ ತನ್ನ ಪತಿಯನ್ನು ಠಾಣೆಗೆ ಕರೆತಂದು ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ನಾನು ಇಂದು ಕಾಲೇಜಿಗೆ ಹೋಗಿದ್ದೆ. ಸ್ಟಡಿ ಮೆಟಿರಿಯಲ್ ತೆಗೆದುಕೊಳ್ಳುವ ಸಲುವಾಗಿ ಮನೆಗೆ ಬಂದೆ. ಆಗ ಮನೆಯಲ್ಲಿ ಕೂಗಾಟ ಕೇಳಿಸುತ್ತಿತ್ತು. ಬಾಗಿಲು ತೆಗೆಸಿದಾಗ ಸಂತ್ರಸ್ತೆ ನನ್ನ ಕಾಲು ಹಿಡಿದುಕೊಂಡಳು. ನನ್ನ ಮೇಲೆ ಅತ್ಯಾಚಾರವಾಗಿದೆ ಅಂತ ಹೇಳಿಕೊಂಡಳು. ಕೂಡಲೇ ಇಬ್ಬರನ್ನು ಪೋಲಿಸ್ ಠಾಣೆಗೆ ಕರೆದುಕೊಂಡು ಬಂದಿದ್ದೇನೆ. ನನ್ನ ಗಂಡ ಡಿಪಾರ್ಟ್ಮೆಂಟ್ ನಲ್ಲೇ ವಿದ್ಯಾರ್ಥಿನಿಯರ ಜೊತೆ ಸಂಬಂಧ ಇಟ್ಟುಕೊಂಡಿದ್ದ. ಇದೆಲ್ಲದರ ಬಗ್ಗೆ ಮೊದಲಿನಿಂದಲೂ ನನಗೆ ಅನುಮಾನವಿತ್ತು. ನನ್ನ ಪತಿ ಹಲವು ವಿದ್ಯಾರ್ಥಿನಿಯರನ್ನು ಬಳಸಿಕೊಂಡಿದ್ದಾನೆ. ಇವತ್ತು ಅದು ಸಾಬೀತಾಗಿದೆ. ಬೇರೆ ಯಾವ ಯುವತಿಯರ ಮೇಲು ಇಂತಹ ದಾಳಿ ನಡೆಯಬಾರದು. ಹೀಗಾಗಿ ನಾನೇ ಮುಂದೆ ನಿಂತು ದೂರು ದಾಖಲಿಸಿದ್ದೇನೆ. ವಿವಿಯ ಕುಲಪತಿ, ಕುಲಸಚಿವರ ಗಮನಕ್ಕೂ ತಂದಿದ್ದೇನೆ’ ಎಂದು ಆರೋಪಿ ಪತ್ನಿ, ಮೈಸೂರು ವಿವಿ ಪ್ರಾಧ್ಯಾಪಕಿ ಡಾ.ಲೋಲಾಕ್ಷಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮಾರ್ಗದರ್ಶಕ ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ; ಪೊಲೀಸರ ವಿಚಾರಣೆ ವೇಳೆ ಉಲ್ಟಾ ಹೊಡೆದ ವಿದ್ಯಾರ್ಥಿನಿ

ಅತ್ಯಾಚಾರ ಸಂತ್ರಸ್ತೆಯ ಪೋಷಕರ ಫೋಟೊ ಶೇರ್ ಮಾಡಿದ ರಾಹುಲ್ ವಿರುದ್ಧ ಕ್ರಮಕ್ಕೆ ಎನ್​​​ಸಿಪಿಸಿಆರ್ ಒತ್ತಾಯ

(Mysuru VV Professor Sexual Assaiult on Student Case Notice will be given against Proffessors)

Published On - 4:05 pm, Fri, 6 August 21

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ