ರಾಜ್ಯಪಾಲರ ಸ್ಥಾನ ರಬ್ಬರ್ ಸ್ಟಾಂಪ್ ಅಲ್ಲ, ಅನುಮೋದನೆ ವಿಷಯಕ್ಕೆ ಬಂದಾಗ ಮನಸ್ಸಿನ ನಿರ್ಧಾರ ಕೈಗೊಳ್ಳುತ್ತೇನೆ: ಕೇರಳ ರಾಜ್ಯಪಾಲ
ಮೂರು ವರ್ಷಗಳಿಂದ ಕೇರಳ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಖಾನ್, ಎಲ್ಲಾ ಬಿಜೆಪಿಯೇತರ ರಾಜ್ಯಗಳಿಗೆ ಆಯಾ ರಾಜ್ಯಪಾಲರೊಂದಿಗೆ ಸಮಸ್ಯೆಗಳಿವೆ ಎಂದು ನಂಬುವುದಿಲ್ಲ ಎಂದಿದ್ದಾರೆ. ಬಿಜೆಪಿ ಸರ್ಕಾರಗಳೊಂದಿಗೆ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಕೂಡಾ ನಾನು ನಂಬುವುದಿಲ್ಲ

ತಿರುವನಂತಪುರಂ: ವಿವಿಧ ವಿಷಯಗಳ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ನಡೆಯುತ್ತಿರುವ ಜಗಳದ ನಡುವೆ, ಕೇರಳ (Kerala)ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಅವರು ಶುಕ್ರವಾರ ರಾಜ್ಯಪಾಲರ ಸ್ಥಾನವು ರಬ್ಬರ್ ಸ್ಟಾಂಪ್ ಅಲ್ಲ. ನನ್ನ ಅನುಮೋದನೆಗೆ ಬಂದಾಗ ನಾನು ಮನಸ್ಸಿನ ಮಾತು ಕೇಳುತ್ತೇನೆ ಎಂದು ಅವರು ಹೇಳಿದ್ದಾರೆ. ಮೂರು ವರ್ಷಗಳಿಂದ ಕೇರಳ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಖಾನ್, ಎಲ್ಲಾ ಬಿಜೆಪಿಯೇತರ ರಾಜ್ಯಗಳಿಗೆ ಆಯಾ ರಾಜ್ಯಪಾಲರೊಂದಿಗೆ ಸಮಸ್ಯೆಗಳಿವೆ ಎಂದು ನಂಬುವುದಿಲ್ಲ ಎಂದಿದ್ದಾರೆ. ಬಿಜೆಪಿ ಸರ್ಕಾರಗಳೊಂದಿಗೆ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಕೂಡಾ ನಾನು ನಂಬುವುದಿಲ್ಲ. ಇತ್ತೀಚಿನ ಮೂರು ತೀರ್ಪುಗಳು, ಒಂದು ಪಶ್ಚಿಮ ಬಂಗಾಳ, ಒಂದು ಕೇರಳ ಮತ್ತು ಇನ್ನೊಂದು ಬಿಜೆಪಿ ಸರ್ಕಾರ ಹೊಂದಿರುವ ಗುಜರಾತ್‌ಗೆ ಸಂಬಂಧಿಸಿದವು. ನಾವು ಈ ವಿಷಯಗಳನ್ನು ಒಂದೇ ರೀತಿಯಾಗಿ ಕಾಣಬೇಕು ಎಂದು ನಾನು ಭಾವಿಸುವುದಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೂ ಕೆಲವೊಮ್ಮೆ ಭಿನ್ನಾಭಿಪ್ರಾಯಗಳಿವೆ ಎಂದು ಹೇಳಿದರು.
ನವದೆಹಲಿಯಲ್ಲಿ ನಡೆದ ಟೈಮ್ಸ್ ನೌ ಶೃಂಗಸಭೆ 2022 ರ ಅಧಿವೇಶನದಲ್ಲಿ, ರಾಜ್ಯಪಾಲರು ರಬ್ಬರ್ ಸ್ಟ್ಯಾಂಪ್ ಆಗಿದ್ದಾರೆ ಎಂಬ ಟೀಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖಾನ್, “ನೀವು ರಾಜ್ಯಪಾಲರ ಅಧಿಕಾರವನ್ನು ಏಕೆ ಹೊಂದಿದ್ದೀರಿ” ಎಂಬ ಪ್ರಶ್ನೆಯನ್ನು ಹೇಳಿದರು. “ಅಲ್ಲಿ ಕುಳಿತು ರಬ್ಬರ್ ಸ್ಟಾಂಪ್ ನಂತೆ ವರ್ತಿಸಲು ನೀವು ಈ ವ್ಯವಸ್ಥೆಯನ್ನು ಮಾಡಿದ್ದೀರಿ, ಅವರ ಮನಸ್ಸಿನ ನಿರ್ಧಾರ ತೆಗೆದುಕೊಳ್ಳಲು ಅಲ್ಲ ಅಲ್ಲವೇ? ಅಧ್ಯಕ್ಷ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದ ಕಾರ್ಟೂನ್ ಬಗ್ಗೆ ಎಲ್ಲರೂ ಟೀಕಿಸುತ್ತಿದ್ದರು. ಎಷ್ಟರ ಮಟ್ಟಿಗೆ ಎಂದರೆ ಅವರು ಬಾತ್‌ಟಬ್‌ನಲ್ಲಿ ಕುಳಿತು ತನ್ನ ಅಟೆಂಡೆಂಟ್‌ಗೆ ಇನ್ನೆಷ್ಟು ಸುಗ್ರೀವಾಜ್ಞೆಗಳಿಗೆ ಸಹಿ ಹಾಕುಬೇಕು ಎಂದು ಕೇಳುತ್ತಿದ್ದರು. ದಯವಿಟ್ಟು ತುರ್ತು ಪರಿಸ್ಥಿತಿಯ ನಂತರದ ದಿನ ನೀವು ನೆನಪಿಸಿಕೊಂಡರೆ… “ನೀವೇಕೆ ರಾಜಭವನದಲ್ಲಿ ರಬ್ಬರ್ ಸ್ಟಾಂಪ್ ಹಾಕಬಾರದು? ಕ್ಯಾಬಿನೆಟ್ ಕೆಲವು ಸುಗ್ರೀವಾಜ್ಞೆಯನ್ನು ಅಂಗೀಕರಿಸಿದ ನಂತರ, ಮುಖ್ಯಮಂತ್ರಿಗಳು ರಾಜಭವನಕ್ಕೆ ನಿರ್ದಿಷ್ಟ ಕೊಠಡಿಗೆ ಬಂದು, ಆ ರಬ್ಬರ್ ಸ್ಟಾಂಪ್ ಅನ್ನು ಎತ್ತಿಕೊಂಡು ಅದನ್ನು ಹಾಕುತ್ತಾರೆ ಎಂದು ಖಾನ್ ಖಾರವಾಗಿ ವ್ಯಂಗ್ಯ ರೀತಿಯಲ್ಲಿ ಉತ್ತರಿಸಿದ್ದಾರೆ.
ಭಾರತವು ಸಾಂಸ್ಕೃತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಒಂದು ಘಟಕವಾಗಿದೆ.ಆದರೆ ದೇಶವು ಯುಗಯುಗಾಂತರಗಳಿಂದ ರಾಜಕೀಯವಾಗಿ ಛಿದ್ರವಾಗಿದೆ ಎಂದು ಅವರು ಒತ್ತಿ ಹೇಳಿದರು.
“ನಿಮ್ಮ ಒಗ್ಗಟ್ಟು ಕೇವಲ 75 ವರ್ಷಗಳಷ್ಟು ಹಳೆಯದಾದಾಗ ನಮಗೆ ರಾಜ್ಯದಲ್ಲಿ ಯಾರೋ ಒಬ್ಬರು ಬೇಕಾಗಿದ್ದರು. ಭಾರತದಲ್ಲಿ ನಿಮ್ಮ ರಾಜಕೀಯ ವಿಘಟನೆ, ಕೇಂದ್ರಾಪಗಾಮಿ ಶಕ್ತಿಗಳ ಇತಿಹಾಸವು ಕೆಲವು ಸಾವಿರ ವರ್ಷಗಳಷ್ಟು ಹಳೆಯದು. ನನಗೆ ಏನಾದರೂ ಅನುಮೋದನೆಗೆ ಬಂದರೆ, ನಾನು ನನ್ನ ಮನಸ್ಸನ್ನು ಕೇಳುತ್ತೇನೆ ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಯ ಹಿನ್ನೆಲೆಯಲ್ಲಿ ಕೆಲವು ಭಾಗಗಳಲ್ಲಿ ನಡೆದ ಆಂದೋಲನಗಳನ್ನು ರಾಜ್ಯಪಾಲರು ಪ್ರಸ್ತಾಪಿಸಿದ್ದು ಕಾಯ್ದೆಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಟೀಕೆ ಮಾಡುವ ಹಕ್ಕಿದೆ, ಟೀಕೆ ಪ್ರಜಾಪ್ರಭುತ್ವದ ಮೂಲತತ್ವ. ಆದರೆ ಗಡಿ ದಾಟಿದಾಗ ಸಮಸ್ಯೆ ಉದ್ಭವಿಸುತ್ತದೆ. ಪೌರತ್ವ ಎನ್ನುವುದು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವಂತಹದ್ದು.”ರಾಜ್ಯದಲ್ಲಿ ಯಾವುದೇ ರಾಜಕೀಯ ಪಕ್ಷವು ಅದರ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದರೆ ಅದು ಸಂಪೂರ್ಣವಾಗಿ ಒಳ್ಳೆಯದು. ಆದರೆ ನೀವು ಪೌರತ್ವದ ಬಗ್ಗೆ ಯಾವುದೇ ಅಧಿಕಾರವನ್ನು ಹೊಂದಿರದ ಕೇರಳ ವಿಧಾನಸಭೆ ವಿಷಯವನ್ನು ತೆಗೆದುಕೊಂಡಾಗ ಈ ಅಧಿವೇಶನಗಳನ್ನು ಕರೆಯಲು ನೀವು ಖಜಾನೆಯ ಹಣವನ್ನು ವ್ಯರ್ಥ ಮಾಡುತ್ತೀರಿ . ನಂತರ ನೀವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೀರಿ ಅದನ್ನು ನೀವು ರಾಜ್ಯಪಾಲರಿಗೂ ತಿಳಿಸುವುದಿಲ್ಲ, ನಂತರ ನೀವು ನಿಮ್ಮ ಅಧಿಕಾರವನ್ನು ಮೀರಿದ್ದರಿಂದ ಸಮಸ್ಯೆ ಉದ್ಭವಿಸುತ್ತದೆ ಎಂದು ಖಾನ್ ಹೇಳಿದ್ದಾರೆ. ರಾಜ್ಯಪಾಲ ಆರಿಫ್ ಖಾನ್ ಮತ್ತು ಕೇರಳ ಸರ್ಕಾರ ನಡುವೆ ವಿವಿಧ ವಿಷಯಗಳಲ್ಲಿ ಜಟಾಪಟಿ ನಡೆದಿದೆ.