14 ವಲಯಗಳಿಗೆ 1.97 ಲಕ್ಷ ಕೋಟಿ ರೂ ಉತ್ಪಾದನಾ ಆಧಾರಿತ ಭತ್ಯೆ ಘೋಷಿಸಿದ ಕೇಂದ್ರ ಸರ್ಕಾರ

|

Updated on: Aug 02, 2023 | 9:44 PM

ಪ್ರಮುಖ 14 ವಲಯಗಳಿಗೆ 1.97 ಲಕ್ಷ ಕೋಟಿ ರೂ. ಉತ್ಪಾದನಾ ಆಧಾರಿತ ಭತ್ಯೆವನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಸೋಮ್ ಪ್ರಕಾಶ್ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.

14 ವಲಯಗಳಿಗೆ 1.97 ಲಕ್ಷ ಕೋಟಿ ರೂ ಉತ್ಪಾದನಾ ಆಧಾರಿತ ಭತ್ಯೆ ಘೋಷಿಸಿದ ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ
Follow us on

14 ಪ್ರಮುಖ ವಲಯಗಳಿಗೆ ಉತ್ಪಾದನಾ ಆಧಾರಿತ ಭತ್ಯೆ (Production Linked Incentive Schemes) ವನ್ನು ಹೆಚ್ಚಿಸುವುದಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಪ್ರಕಟಣೆ ಮೂಲಕ ಬುಧವಾರ ತಿಳಿಸಿದೆ. ಇದು ಭಾರತದ ಉತ್ಪಾದನಾ ಸಾಮರ್ಥ್ಯ ಮತ್ತು ರಫ್ತು ಹೆಚ್ಚಿಸುವ ಗುರಿಯನ್ನು ಹೊಂದಿವೆ. ‘ಆತ್ಮನಿರ್ಭರ್’ ಹೊಂದುವ ಭಾರತದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಪ್ರಮುಖ 14 ವಲಯಗಳಿಗೆ 1.97 ಲಕ್ಷ ಕೋಟಿ ರೂ. ಉತ್ಪಾದನಾ ಸಂಬಂಧಿತ ಪ್ರೋತ್ಸಾಹ ಭತ್ಯೆವನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಸೋಮ್ ಪ್ರಕಾಶ್ ಅವರು ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಮುಖ ವಲಯಗಳು

ಮೊಬೈಲ್ ತಯಾರಿಕಾ ಮತ್ತು ನಿರ್ದಿಷ್ಟಪಡಿಸಿದ ಎಲೆಕ್ಟ್ರಾನಿಕ್ ಘಟಕಗಳು, ಔಷಧ ಮಧ್ಯವರ್ತಿಗಳು ಮತ್ತು ಸಕ್ರಿಯ ಔಷಧೀಯ ಪದಾರ್ಥಗಳು, ವೈದ್ಯಕೀಯ ಸಾಧನಗಳ ತಯಾರಿಕೆ, ಆಟೋಮೊಬೈಲ್‌, ವಿಶೇಷ ಉಕ್ಕು, ಟೆಲಿಕಾಂ ಮತ್ತು ನೆಟ್‌ವರ್ಕಿಂಗ್ ಉತ್ಪನ್ನಗಳು, ಆಹಾರ ಉತ್ಪನ್ನಗಳು, ಜವಳಿ ಉತ್ಪನ್ನಗಳು, ಡ್ರೋನ್‌ ಘಟಕಗಳು ಸೇರಿದಂತೆ ಹೀಗೆ 14 ವಲಯಗಳು ಒಳಗೊಂಡಿವೆ.

ಇದನ್ನೂ ಓದಿ: ಕಳೆದ ಮೂರು ವರ್ಷಗಳಲ್ಲಿ ಮಾನ್ಯತೆ ಪಡೆದ ಸ್ಟಾರ್ಟಪ್‌ಗಳಿಂದ ಹೆಚ್ಚಿನ ಉದ್ಯೋಗ ಸೃಷ್ಠಿಯಾಗಿದೆ: ಕೇಂದ್ರ ಸರ್ಕಾರ

ಪ್ರಮುಖ ವಲಯ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದೇ PLI ಯೋಜನೆಗಳ ಉದ್ದೇಶವಾಗಿದೆ. ಜೊತೆಗೆ ಭಾರತೀಯ ಕಂಪನಿಗಳು ಮತ್ತು ತಯಾರಕರು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸು ಗುರಿಯನ್ನು ಹೊಂದಿದೆ. ಮುಂದಿನ ಐದು ವರ್ಷಗಳಲ್ಲಿ ಉತ್ಪಾದನೆ, ಉದ್ಯೋಗ ಮತ್ತು ಆರ್ಥಿಕ ಬೆಳವಣಿಗೆಯನ್ನು ಗಣನೀಯವಾಗಿ ಹೆಚ್ಚಿಸುವ ಸಾಮರ್ಥ್ಯವನ್ನು ಈ ಯೋಜನೆಯೂ ಹೊಂದಿದೆ.

ಸದ್ಯ ಈ ಯೋಜನೆಗಳು ಅನುಷ್ಠಾನ ಹಂತದಲ್ಲಿದ್ದು, ಸೂಕ್ತ ಅನುಮೋದನೆಯ ನಂತರ ಸಂಬಂಧಿತ ಸಚಿವಾಲಯ, ಇಲಾಖೆಗಳ ಸೂಚನೆಯ ಮೆರೆಗೆ ಎಲ್ಲಾ 14 ವಲಯಗಳಿಗೆ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು.

ಇದನ್ನೂ ಓದಿ: ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವಿಲ್ಲ: ಶಾಂತಿ ಕಾಪಾಡಲು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮನವಿ

ಉತ್ಪಾದನಾ ಆಧಾರಿತ ಯೋಜನೆಯೂ ದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಪ್ರತಿ ವಲಯದಲ್ಲಿ ನಿರ್ಮಿಸಲಾಗುವ ಆಂಕರ್ ಘಟಕಗಳು ಹೊಸ ಪೂರೈಕೆದಾರರು, ಮಾರಾಟಗಾರರನ್ನು ಸ್ಥಾಪಿಸುವ ಸಾಧ್ಯತೆಯಿದೆ.

ಪ್ರತಿಯೊಂದು ವಲಯದಲ್ಲಿ ನಿರ್ಮಿಸಲಾಗುವ ಘಟಕಗಳು ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಹೊಸ ಪೂರೈಕೆದಾರ, ಮಾರಾಟಗಾರರ ನೆಲೆಯನ್ನು ಹೊಂದಿಸುವ ಸಾಧ್ಯತೆಯಿದೆ. ಈ ಪೂರಕ ಘಟಕಗಳಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ವಯಲಗಳು ನಿರ್ಮಾಣವಾಗುವ ನಿರೀಕ್ಷೆಯಿದೆ.

ಈ ಯೋಜನೆಗೆ ಒಟ್ಟು 733 ಅಪ್ಲಿಕೇಶನ್​ಗಳು ಬಂದಿದ್ದು, ಅದರಲ್ಲಿ 176 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳೊಂದಿಗೆ ಡ್ರಗ್ಸ್, ವೈದ್ಯಕೀಯ ಸಾಧನಗಳು, ಫಾರ್ಮಾ, ಟೆಲಿಕಾಂ, ವೈಟ್ ಗೂಡ್ಸ್, ಆಹಾರ ಸಂಸ್ಕರಣೆ, ಜವಳಿ ಮತ್ತು ಡ್ರೋನ್​ ಘಟಕಗಳು ಫಲಾನುಭವಿಗಳಾಗಿದ್ದಾರೆ.

ಉತ್ಪಾದನಾ ಆಧಾರಿತ ಪ್ರೋತ್ಸಾಹ ಯೋಜನೆ ಅಡಿಯಲ್ಲಿ ಗುರುತಿಸಲಾದ ಎಲ್ಲಾ ಅನುಮೋದಿತ ವಲಯಗಳು ಪ್ರಮುಖ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸುವ ಮಾನದಂಡಗಳನ್ನು ಒಳಗೊಂಡಿದ್ದು, ಇದು ಉದ್ಯೋಗ, ರಫ್ತು ಮತ್ತು ಆರ್ಥಿಕತೆ ಹೆಚ್ಚಿಸಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:42 pm, Wed, 2 August 23