ತೆಲಂಗಾಣ: ಶ್ರೀ ರಾಮಾನುಜಾಚಾರ್ಯರ ಆಶ್ರಮದಲ್ಲಿ ಅದ್ಧೂರಿ 75ನೇ ಸ್ವಾತಂತ್ರ್ಯ ದಿನಾಚರಣೆ

| Updated By: ವಿವೇಕ ಬಿರಾದಾರ

Updated on: Aug 15, 2022 | 10:13 PM

ತೆಲಂಗಾಣದ ಶ್ರೀ ರಾಮನಗರಂ ಮುಚ್ಚಿಂತಲ್​ನಲ್ಲಿ ಸಮತಾಮೂರ್ತಿ ಶ್ರೀ ರಾಮಾನುಜಾಚಾರ್ಯರ ಆಶ್ರಮದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ತೆಲಂಗಾಣ: ಶ್ರೀ ರಾಮಾನುಜಾಚಾರ್ಯರ ಆಶ್ರಮದಲ್ಲಿ ಅದ್ಧೂರಿ 75ನೇ ಸ್ವಾತಂತ್ರ್ಯ ದಿನಾಚರಣೆ
ಶ್ರೀ ರಾಮಾನುಜಾಚಾರ್ಯರ ಪ್ರತಿಮೆ
Follow us on

ತೆಲಂಗಾಣ: ತೆಲಂಗಾಣದ (Telangana) ಶ್ರೀ ರಾಮನಗರಂ ಮುಚ್ಚಿಂತಲ್​ನಲ್ಲಿ ಸಮತಾಮೂರ್ತಿ ಶ್ರೀ ರಾಮಾನುಜಾಚಾರ್ಯರ (Sri Ramanujacharya) ಆಶ್ರಮದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. 108 ಅಡಿ ಎತ್ತರದಲ್ಲಿ ನಿರ್ಮಿಸಿರುವ ತ್ರಿವರ್ಣ ಧ್ವಜವನ್ನು ಶ್ರೀ ತ್ರಿದಂಡಿ ಜೀಯರ್ ಸ್ವಾಮಿಜಿ ಧ್ವಜಾರೋಹಣ ಮಾಡಿದರು. 114ನೇ ತಿರು ನಕ್ಷತ್ರ ಉತ್ಸವವನ್ನು ಸ್ವಾತಂತ್ರ್ಯ ದಿನದಂದು ಆಚರಿಸುತ್ತಿರುವುದು ಸಂತಸ ತಂದಿದೆ . ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ, ಈಗ ಭಾರತೀಯರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಗಲಿದ್ದು, ಪ್ರತಿ ಮನೆಯ ಮೇಲೂ ಭಾರತದ ಧ್ವಜ ರಾರಾಜಿಸಲಿದೆ ಎಂದರು. ಶ್ರೀ ರಾಮಾನುಜಾಚಾರ್ಯರ ಪ್ರತಿಮೆಗೆ ತ್ರಿವರ್ಣ ಬಣ್ಣದ ಲೈಟಿಂಗ್ ಮೆರಗುತಂದಿತ್ತು.

ತೆಲಂಗಾಣ ರಾಜ್ಯಪಾಲರ ‘ಮನೆಯಲ್ಲಿ ಔತಣ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕೆ ಚಂದ್ರಶೇಕರ ರಾವ್ ಮತ್ತೆ ಚಕ್ಕರ್!

ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರು ಕಳೆದ ಎರಡು ವರ್ಷಗಳಿಂದ ರಾಜಭವನದಲ್ಲಿ ಆಯೋಜಿಸಿದ್ದ “ಅಟ್ ಹೋಮ್” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ, ತಪ್ಪಿಸಿದ್ದಾರೆ. ಮೂರನೆಯ ಬಾರಿಗೆ ಈ ವರ್ಷವೂ ಚಕ್ಕರ್ ಹೊಡೆದಿದ್ದಾರೆ. ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಹೊರತುಪಡಿಸಿ, ಟಿಆರ್‌ಎಸ್ ಶಾಸಕರು, ಸಚಿವರು, ಎಂಎಲ್‌ಸಿಗಳು ಸಹ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು.

ಆಗ ರಾಜಭವನ ಮತ್ತು ಪ್ರಗತಿ ಭವನದ ನಡುವಿನ ಸಂಬಂಧಗಳು ಹೆಚ್ಚು ಸೌಹಾರ್ದಯುತವಾಗಿದ್ದ ಕಾರಣ 2020 ರವರೆಗೆ ಸಿಎಂ ಕೆಸಿಆರ್ ಭಾಗವಹಿಸಿದ್ದರು. ಟಿಆರ್‌ಎಸ್ ನಾಯಕರು ಕೂಡ ಕಳೆದ ಕೆಲವು ದಿನಗಳಿಂದ ರಾಜ್ಯಪಾಲರ ವಿರುದ್ಧ ಟೀಕೆ ಮಾಡುತ್ತಿದ್ದಾರೆ. 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸಿಎಂ ಕೆಸಿಆರ್ ಅವರು ಕಾರ್ಯಕ್ರಮಕ್ಕೆ ಹಾಜರಾಗಲು ಆಯ್ಕೆ ಮಾಡಿಕೊಂಡಿರುವುದು ಕುತೂಹಲ ಮೂಡಿಸಿದೆ.

ದೇಶಾದ್ಯಂತ ಮುಖ್ಯಮಂತ್ರಿಗಳಾದವರು ತಮ್ಮ ಆಯ್ಕೆಯ ಸ್ಥಳದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ ಮತ್ತು ತದನಂತರ ರಾಜ್ಯಪಾಲರು ತಮ್ಮ ನಿವಾಸಗಳಲ್ಲಿ ಆಯೋಜಿಸುವ ‘ಅಟ್ ಹೋಮ್’ ಕಾರ್ಯಕ್ರಮದಲ್ಲಿ ಆಯಾ ಮುಖ್ಯಮಂತ್ರಿಗಳು ಭಾಗವಹಿಸುತ್ತಾರೆ. ದೆಹಲಿಯಲ್ಲಿ, ಪ್ರಧಾನಿ ತಮ್ಮ ಕಾರ್ಯಕ್ರಮಗಳ ಬಳಿಕ, ರಾಷ್ಟ್ರಪತಿ ಆಯೋಜಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಶಿಷ್ಟಾಚಾರ.

ವರದಿಗಳ ಪ್ರಕಾರ, ಪ್ರೋಟೋಕಾಲ್ ಸಮಸ್ಯೆಗಳ ಕುರಿತು ರಾಜಭವನ ಮತ್ತು ಪ್ರಗತಿ ಭವನದ ನಡುವೆ ವಿಷಯಗಳು ಬಗೆಹರಿಯದೆ ಉಳಿದಿವೆ. ಆದಾಗ್ಯೂ, ಜೂನ್‌ನಲ್ಲಿ ರಾಜಭವನದಲ್ಲಿ ನಡೆದ ಉಜ್ಜಲ್ ಭುಯಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದರು. ಯುಗಾದಿ ಆಚರಣೆ ವೇಳೆ ಮುಖ್ಯಮಂತ್ರಿ ಮತ್ತು ಟಿಆರ್‌ಎಸ್ ಮುಖಂಡರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದು, ರಾಜ್ಯಪಾಲರ ಆಕ್ರೋಶಕ್ಕೆ ಕಾರಣವಾಗಿತ್ತು.

ರಾಜ್ಯಪಾಲರು ಹೆಚ್ಚಿನ ಸಂಖ್ಯೆಯ ಅತಿಥಿಗಳನ್ನು ಆಹ್ವಾನಿಸಿದ್ದಾರೆ ಎಂದು ವರದಿಯಾಗಿದೆ, ಇದರಲ್ಲಿ ವಿವಿಧ ಕ್ಷೇತ್ರಗಳ ತಜ್ಞರು ಸೇರಿದ್ದಾರೆ.

ಮತ್ತಷಟ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:13 pm, Mon, 15 August 22