ಆಂಟಿಗುವಾ: ದೇಶ ಭ್ರಷ್ಟ ವಜ್ರ ವ್ಯಾಪಾರಿ ಮೆಹುಲ್ ಚೋಸ್ಕಿ ಮೊನ್ನೆ ಆಂಟಿಗೋವಾದಿಂದ ಪರಾರಿಯಾಗಿದ್ದಾನೆ ಎಂಬ ಬಗ್ಗೆ ವರದಿ ಕೇಳಿದಿರಿ. ತಾಜಾ ಮಾಹಿತಿ ಪ್ರಕಾರ ಮೆಹುಲ್ ಚೋಸ್ಕಿ ಆಂಟಿಗೋವಾ ಬಿಟ್ಟು ಪರಾರಿಯಾಗಿರುವುದು ಬಹುತೇಕ ದೃಢಪಟ್ಟಿದೆ. ಈ ಬಗ್ಗೆ ಆಂಟಿಗುವಾ ಮತ್ತು ಬಾರ್ಬುಡಾ ಪ್ರಧಾನ ಮಂತ್ರಿ ಗಷ್ಟನ್ ಬ್ರೌನ್ ಮಾತನಾಡಿದ್ದಾರೆ. ಆಂಟಿಗುವಾದಲ್ಲಿ ವ್ಯಾಪಾರ ಮಾಡ್ತೀನಿ ಅಂತಾ ಬಂದು ಇಲ್ಲಿನ ಪೌರತ್ವ ಪಡೆದು ಇಲ್ಲೇ ಸೆಟಲ್ ಆಗಿರುವ ಉದ್ಯಮಿ ಮೆಹುಲ್ ಚೋಸ್ಕಿ ನಮ್ಮ ದೇಶದಿಂದ ಹೊರಹೋಗಿರುವ ಮಾಹಿತಿ ಖಚಿತಪಟ್ಟಿಲ್ಲ. ಆದರೆ ಆ ಬಗ್ಗೆ ಊಹಾಪೋಹ ಎದ್ದಿದೆ ಎಂದು ತಿಳಿಸಿದ್ದಾರೆ.
61 ವರ್ಷ ಪ್ರಾಯದ ವಜ್ರದ ವ್ಯಾಪಾರಿ ಮೆಹುಲ್ ಚೋಸ್ಕಿ ಮತ್ತು ಅವನ ಸಂಬಂಧೀ ನೀರವ್ ಮೋದಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (Punjab National Bank -PNB) 13,500 ಕೋಟಿ ರೂಪಾಯಿ ವಂಚನೆ ಎಸಗಿ ಪರಾರಿಯಾಗಿದ್ದಾರೆ. ಇಬ್ಬರು ವಿರುದ್ಧವೂ ಸಿಬಿಐ (CBI) ಮತ್ತು ಜಾರಿ ನಿರ್ದೇಶನಾಲಯ (ED) ತನಿಖೆ ನಡೆಸುತ್ತಿದ್ದು, ಇಬ್ಬರೂ ಭಾರತಕ್ಕೆ ವಾಪಸಾಗಬೇಕಾಗಿದ್ದಾರೆ.
ವಿಯಾನ್ (WION) ಟಿವಿ ಮಾಧ್ಯಮದ ಜೊತೆ ಮೆಹುಲ್ ಚೋಸ್ಕಿ ಆಂಟಿಗೋವಾದಿಂದ ಪರಾರಿಯಾಗಿರುವ ವರದಿಗಳ ಬಗ್ಗೆ ಮಾತನಾಡಿರುವ ಆಂಟಿಗುವಾ ಪ್ರಧಾನಿ, ಸ್ವತಃ ಉದ್ಯಮಿ ಮತ್ತು ಬ್ಯಾಂಕರ್ ಆಗಿದ್ದ ಗಷ್ಟನ್ ಬ್ರೌನ್ ಅವರು ‘24 ಗಂಟೆಯಾದರೂ ಮೆಹುಲ್ ಚೋಸ್ಕಿ ಪತ್ತೆಯಾಗಿಲ್ಲ. ಹಾಗಾಗಿ ಆತನ ವಿರುದ್ಧ ಕಣ್ಮರೆಯಾಗಿರುವ ಬಗ್ಗೆ ಸ್ಥಳೀಯವಾಗಿ ಬಿತ್ರರಿಸಲಾಗಿದೆ. ಅದನ್ನ ಈಗ ಇಂಟರ್ಪೋಲ್ ಜೊತೆಗೂ ಹಂಚಿಕೊಳ್ಳಲಾಗಿದೆ. ಮೆಹುಲ್ ಚೋಸ್ಕಿ ವಿರುದ್ಧ ಸ್ಥಳೀಯ ಕೋರ್ಟ್ಗಳಲ್ಲಿ 2 ವಿಷಯಗಳು ದಾಖಲಾಗಿವೆ: ಒಂದು ಆತನ ಪೌರತ್ವವನ್ನು ಹಿಂತೆಗೆದುಕೊಳ್ಳುವುದು, ಮತ್ತೊಂದು ಆತನನ್ನು ಭಾರತಕ್ಕೆ ಹಸ್ತಾಂತರಿಸುವುದು. ಇತ್ತೀಚೆಗೆ ಮೆಹುಲ್ ಚೋಸ್ಕಿ ಸ್ವತಃ ಕೇಸನ್ನು ಶೀಘ್ರವೇ ಇತ್ಯರ್ಥ ಪಡಿಸುವಂತೆ ಕೋರಿದ್ದ. ಅದೇ ವೇಳೆ ತನ್ನ ವಕೀಲರನ್ನೂ ಬದಲಾಯಿಸಿದ್ದ. ಯುಕೆಯ ಪ್ರಸಿದ್ಧ ಕ್ರಿಮಿನಲ್ ಲಾಯರ್ ಎಡ್ವರ್ಡ್ ಫಿಜರಾಲ್ಡ್ ಸಿಬಿಇ ಕ್ಯುಸಿ (Edward Fitzgerald CBE QC) ಸೇವೆಗಳನ್ನು ಪಡೆಯಲಾರಂಭಿಸಿದ್ದ’ ಎಂದು ಸವಿಸ್ತಾರವಾಗಿ ಹೇಳಿದ್ದಾರೆ.
ಭಾರತದಿಂದ ಪರಾರಿಯಾಗಿರುವುದಕ್ಕೆ ಭಾರತ ತನಿಖಾ ಸಂಸ್ಥೆಗಳು ಅದಾಗಲೇ ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಇದೀಗ ನಾವೂ ಸಹ ಆತನ ವಿರುದ್ಧ ಗ್ರೀನ್ ನೋಟಿಸ್ ಜಾರಿ ಮಾಡುತ್ತೇವೆ. ಕಾನೂನು ತನ್ನದೇ ಪ್ರಕ್ರಿಯೆಗಳನ್ನು ಪಾಲಿಸುತ್ತದೆ. ಅಲ್ಲಿಯವರೆಗೂ ಕಾಯಬೇಕು. ಅದು ಮುಗಿದ ಬಳಿಕ ಆತನನ್ನು ನಾವು ಭಾರತಕ್ಕೆ ಹಸ್ತಾಂತರಿಸಲು ಸಿದ್ಧ ಎಂದು ವಿಯಾನ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಆಂಟಿಗುವಾ ಪ್ರಧಾನಿ ಗಷ್ಟನ್ ಬ್ರೌನ್ ಸ್ಪಷ್ಟಪಡಿಸಿದ್ದಾರೆ.
(green notice will be placed internationally for Mehul Choksi as a missing person says Prime Minister of Antigua Gaston Browne)
ಇದನ್ನೂ ಓದಿ:
ವಂಚಕ ಮೆಹೂಲ್ ಚೋಸ್ಕಿ ಆಂಟಿಗುವಾದಲ್ಲಿ ನಾಪತ್ತೆ? ವಾಹನ ಜಾಲಿ ಬಂದರು ಪ್ರದೇಶದಲ್ಲಿ ಪತ್ತೆ! ಆತಂಕದಲ್ಲಿ ಕುಟುಂಬಸ್ಥರು
Published On - 12:27 pm, Wed, 26 May 21