Farmers’ Protest ಕೃಷಿ ಕಾಯ್ದೆ ವಿರೋಧಿಸಿ ರೈತರ ಹೋರಾಟಕ್ಕೆ 6 ತಿಂಗಳು: ಇಂದು ಕರಾಳ ದಿನ ಆಚರಣೆ, ರೈತರಿಂದ ಕಪ್ಪು ಧ್ವಜ  ಪ್ರದರ್ಶನ

Black Day: ದೇಶದ ಗಡಿಯಲ್ಲಿ ರೈತರು ಕಪ್ಪು ದಿನವನ್ನು ಆಚರಿಸುತ್ತಾರೆ, ಆದರೆ ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದಿಲ್ಲ ಎಂದು ರೈತ ಸಂಘಟನೆಗಳ ಮುಖಂಡರು ಹೇಳಿದ್ದಾರೆ. ತಮ್ಮ ಮನೆಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಕಪ್ಪು ಧ್ವಜಗಳನ್ನು ಹಾರಿಸುವ ಮೂಲಕ ರೈತರನ್ನು ಬೆಂಬಲಿಸುವಂತೆ ಅವರು ದೇಶಾದ್ಯಂತದ ನಾಗರಿಕರನ್ನು ಒತ್ತಾಯಿಸಿದರು.

Farmers' Protest ಕೃಷಿ ಕಾಯ್ದೆ ವಿರೋಧಿಸಿ ರೈತರ ಹೋರಾಟಕ್ಕೆ 6 ತಿಂಗಳು: ಇಂದು ಕರಾಳ ದಿನ ಆಚರಣೆ, ರೈತರಿಂದ ಕಪ್ಪು ಧ್ವಜ  ಪ್ರದರ್ಶನ
ಮನೆಗಳಲ್ಲಿ ಕಪ್ಪು ಧ್ವಜ ಪ್ರದರ್ಶಿಸಿದ ರೈತರು
Follow us
ರಶ್ಮಿ ಕಲ್ಲಕಟ್ಟ
|

Updated on:May 26, 2021 | 12:36 PM

ದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರುದ್ಧ ನಡೆಯುತ್ತಿರುವ ರೈತರ ಚಳವಳಿ ಆರು ತಿಂಗಳು ಪೂರ್ಣಗೊಂಡಿದ್ದನ್ನು ಗುರುತಿಸಲು ರೈತ ಸಂಘಗಳು ಮೇ 26 ಅನ್ನು ‘ಕರಾಳದಿನ’ ಎಂದು ಆಚರಿಸುತ್ತಿವೆ. ರೈತರು ತಮ್ಮ ಮನೆ, ವಾಹನಗಳು ಮತ್ತು ಇತರ ಸ್ಥಳಗಳಿಂದ ಕಪ್ಪು ಧ್ವಜಗಳನ್ನು ಹಾರಿಸುವುದರ ಜೊತೆಗೆ ಕಪ್ಪು ಟರ್ಬನ್ ಮತ್ತು ಕಪ್ಪು ದುಪಟ್ಟಾ ಧರಿಸಿ ಕಪ್ಪು ದಿನವನ್ನು ಆಚರಿಸುತ್ತಿದ್ದಾರೆ. ರೈತರು ಪ್ರತಿ ಗಡಿಯಲ್ಲಿಯೂ ಕಪ್ಪು ಧ್ವಜಗಳನ್ನು ಹಾರಿಸಿದ್ದಾರೆ. ದೇಶದ ಗಡಿಯಲ್ಲಿ ರೈತರು ಕಪ್ಪು ದಿನವನ್ನು ಆಚರಿಸುತ್ತಾರೆ, ಆದರೆ ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದಿಲ್ಲ ಎಂದು ರೈತ ಸಂಘಟನೆಗಳ ಮುಖಂಡರು ಹೇಳಿದ್ದಾರೆ. ತಮ್ಮ ಮನೆಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಕಪ್ಪು ಧ್ವಜಗಳನ್ನು ಹಾರಿಸುವ ಮೂಲಕ ರೈತರನ್ನು ಬೆಂಬಲಿಸುವಂತೆ ಅವರು ದೇಶಾದ್ಯಂತದ ನಾಗರಿಕರನ್ನು ಒತ್ತಾಯಿಸಿದರು. ಏತನ್ಮಧ್ಯೆ, ಕೊವಿಡ್ ಪರಿಸ್ಥಿತಿ ಮತ್ತು ಲಾಕ್‌ಡೌನ್ ಕಾರಣದಿಂದಾಗಿ ಸಭೆ ನಡೆಸದಂತೆ ದೆಹಲಿ ಪೊಲೀಸರು ಜನರಲ್ಲಿ ಕೋರಿದ್ದಾರೆ. ನಗರದ ಗಡಿಯಲ್ಲಿರುವ ಪ್ರತಿಭಟನಾ ಸ್ಥಳಗಳಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಬಿಗಿ ಜಾಗ್ರತೆ ವಹಿಸುತ್ತಿದ್ದೇವೆ.  ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಸಿಂಗು , ಟಿಕ್ರಿ ಮತ್ತು ಗಾಜಿಪುರದ ಪ್ರತಿಭಟನಾ ಸ್ಥಳಗಳು ಸೇರಿದಂತೆ ಎಲ್ಲಾ ಗಡಿ ಕೇಂದ್ರಗಳಲ್ಲಿ ಪೊಲೀಸ್ ಪಡೆ ನಿಯೋಜನೆ ಆಗಿದ್ದು ಯಾವುದೇ ಅಕ್ರಮ ಚಟುವಟಿಕೆ ಅಥವಾ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ದೆಹಲಿ ಪೊಲೀಸ್ ಪಿಆರ್​ಒ ಚಿನ್ಮಯ್ ಬಿಸ್ವಾಲ್ ಹೇಳಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ ಪ್ರಕಟಣೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಮಂಗಳವಾರ ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಮತ್ತು ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಕೊರೊನಾನವೈರಸ್ ಪರಿಸ್ಥಿತಿಯಿಂದಾಗಿ ತಮ್ಮ ಮನೆಗಳಿಂದ ಹೊರಗೆ ಬಂದು ಅನಗತ್ಯವಾಗಿ ಒಟ್ಟುಗೂಡಿಸಬಾರದು ಎಂದು ಜನರನ್ನು ಒತ್ತಾಯಿಸಿದರು. ಕಳೆದ ವಾರ, ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಡ ಪಕ್ಷಗಳು, ಎಸ್ಪಿ, ಎನ್‌ಸಿಪಿ ಮತ್ತು ಡಿಎಂಕೆ ಸೇರಿದಂತೆ ಹನ್ನೆರಡು ಪ್ರಮುಖ ವಿರೋಧ ಪಕ್ಷಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದವು.

ಜನರು ಎಲ್ಲಿದ್ದಾರೋ ಅಲ್ಲೇ ಧ್ವಜಗಳನ್ನು ಹಾರಿಸಿ: ಟಿಕಾಯತ್ ನಾವು ತ್ರಿವರ್ಣ ಧ್ವಜವನ್ನೂ ಹಿಡಿದಿದ್ದೇವೆ. ಈಗ 6 ತಿಂಗಳುಗಳು ಕಳೆದಿವೆ, ಆದರೆ ಸರ್ಕಾರ ನಮ್ಮ ಮಾತನ್ನು ಕೇಳುತ್ತಿಲ್ಲ. ಆದ್ದರಿಂದ ರೈತರು ಕಪ್ಪು ಧ್ವಜಗಳನ್ನು ಪ್ರದರ್ಶಿಸುತ್ತಿದ್ದಾರೆ . ಇದನ್ನು ಶಾಂತಿಯುತವಾಗಿ ಮಾಡಲಾಗುತ್ತದೆ. ನಾವು ಕೊವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಿದ್ದೇವೆ. ಇಲ್ಲಿ ಯಾರೂ ಬರುತ್ತಿಲ್ಲ. ಜನರು ಎಲ್ಲಿದ್ದಾರೋ ಅಲ್ಲಿಯೇ ಕಪ್ಪು ಧ್ವಜಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಮಹಿಳೆಯರ ಬೆಂಬಲ; ಕೃಷಿ ಕಾಯ್ದೆ ಹಿಂಪಡೆಯಲು ಒತ್ತಾಯ

Published On - 12:08 pm, Wed, 26 May 21