ಶ್ರೀನಗರದಲ್ಲಿ ಉಗ್ರರಿಂದ ಸಿಆರ್​ಪಿಎಫ್ ಮೇಲೆ ಗ್ರೆನೇಡ್ ದಾಳಿ: ಇಬ್ಬರಿಗೆ ಗಾಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 10, 2021 | 7:37 PM

ಕೆಲ ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಕೊಲ್ಲುವ ಪ್ರಕರಣಗಳು ಹೆಚ್ಚಾಗಿವೆ

ಶ್ರೀನಗರದಲ್ಲಿ ಉಗ್ರರಿಂದ ಸಿಆರ್​ಪಿಎಫ್ ಮೇಲೆ ಗ್ರೆನೇಡ್ ದಾಳಿ: ಇಬ್ಬರಿಗೆ ಗಾಯ
ಸಾಂಕೇತಿಕ ಚಿತ್ರ
Follow us on

ಶ್ರೀನಗರ: ಕೇಂದ್ರೀಯ ಮೀಸಲು ಪೊಲೀಸ್ ಪಡೆ (Central Reserve Police Force – CRPF) ಸಿಬ್ಬಂದಿಯನ್ನು ಗುರಿಯಾಗಿಸಿ ಉಗ್ರರು ಬುಧವಾರ ಗ್ರೆನೇಡ್​ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕ ಗಾಯಗೊಂಡಿದ್ದಾರೆ. ಶ್ರೀನಗರದ ಆಲಿಮ್​ಸಾಜಿದ್ ಈದ್ಗಾ ಸಮೀಪ ಈ ದಾಳಿ ನಡೆದಿದೆ.

ಕೆಲ ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಕೊಲ್ಲುವ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಸೋಮವಾರ ಭಯೋತ್ಪಾದಕರು ಬೊಹ್ರಿ ಕಾದರ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬನನ್ನು ಕೊಂದಿದ್ದರು. ಕಳೆದ 24 ಗಂಟೆಗಳಲ್ಲಿ ನಡೆದಿರುವ ಎರಡನೇ ದಾಳಿ ಇದು.

ಸೋಮವಾರ ರಾತ್ರಿ 8 ಗಂಟೆ ವೇಳೆಯಲ್ಲಿ ಭಯೋತ್ಪಾದಕರು ಮೊಹಮದ್ ಇಬ್ರಾಹಿಂ ಖಾನ್ ಎನ್ನುವವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಯಲಿಲ್ಲ.

ಇದನ್ನೂ ಓದಿ: Curfew: ಶ್ರೀನಗರದಲ್ಲಿ ನಾಳೆಯಿಂದ 10 ದಿನ ಕೊರೊನಾ ಕರ್ಫ್ಯೂ ಜಾರಿ
ಇದನ್ನೂ ಓದಿ: ಶ್ರೀನಗರದಲ್ಲಿ ಮುಂದುವರಿದ ನಾಗರಿಕರ ಹತ್ಯೆ; ಉಗ್ರರ ಗುಂಡಿಗೆ ಫಾರ್ಮಸಿ ಉದ್ಯೋಗಿ ಬಲಿ