ಸೂರ್ಯಪೇಟೆ: ಮನೆಗೆ ನುಗ್ಗಿದ ಮಂಗಗಳ ಹಿಂಡು ಒಂಟಿಯಾಗಿದ್ದ ಅನಾರೋಗ್ಯ ವೃದ್ಧೆಯನ್ನು ಕೊಂದುಹಾಕಿತು

Suryapet: ಸೂರ್ಯಪೇಟೆ ಜಿಲ್ಲೆಯಲ್ಲಿ ಅಮಾನುಷ ಕೃತ್ಯವೊಂದು ನಡೆದಿದೆ. ಮಾನವನ ಮೂಲಸ್ವರೂಪದ ಮಂಗಗಳ ಗುಂಪೊಂದು ಏಕಾಂಗಿಯಾಗಿದ್ದ, ಅಸ್ವಸ್ಥ ವಯೋ ವೃದ್ಧೆಯ ಪ್ರಾಣ ತೆಗೆದಿದೆ. ಯಾರೂ ಇಲ್ಲದ ವೇಳೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿ, ಪೈಶಾಚಿಕತೆ ತೋರಿವೆ ಈ ಮಂಗಗಳು.

ಸೂರ್ಯಪೇಟೆ: ಮನೆಗೆ ನುಗ್ಗಿದ ಮಂಗಗಳ ಹಿಂಡು ಒಂಟಿಯಾಗಿದ್ದ ಅನಾರೋಗ್ಯ ವೃದ್ಧೆಯನ್ನು ಕೊಂದುಹಾಕಿತು
ಮನೆಗೆ ನುಗ್ಗಿದ ಮಂಗಗಳ ಹಿಂಡು ಒಂಟಿಯಾಗಿದ್ದ ಅನಾರೋಗ್ಯ ವೃದ್ಧೆಯನ್ನು ಕೊಂದುಹಾಕಿತು
Updated By: ಸಾಧು ಶ್ರೀನಾಥ್​

Updated on: Sep 27, 2022 | 3:05 PM

ಸೂರ್ಯಪೇಟೆ ಜಿಲ್ಲೆಯಲ್ಲಿ ಅಮಾನುಷ ಕೃತ್ಯವೊಂದು ನಡೆದಿದೆ. ಮಾನವನ ಮೂಲಸ್ವರೂಪದ ಮಂಗಗಳ ಗುಂಪೊಂದು ಏಕಾಂಗಿಯಾಗಿದ್ದ, ಅಸ್ವಸ್ಥ ವಯೋ ವೃದ್ಧೆಯ ಪ್ರಾಣ ತೆಗೆದಿದೆ. ಯಾರೂ ಇಲ್ಲದ ವೇಳೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿ, ಪೈಶಾಚಿಕತೆ ತೋರಿವೆ ಈ ಮಂಗಗಳು. ತೀವ್ರ ರಕ್ತಸ್ರಾವದಿಂದ ವೃದ್ಧೆ ಸಾವನ್ನಪ್ಪಿದ್ದಾಳೆ. ಜಿಲ್ಲೆಯ ಆತ್ಮಕೂರು (ಎಸ್) ಮಂಡಲದ ಹಳೇ ಸೂರ್ಯಪೇಟೆಯಲ್ಲಿ ಈ ಘಟನೆ ನಡೆದಿದೆ.

ಈ ಘಟನೆಯ ವಿವರ ಇಂತಿದೆ. ಹಳೆ ಸೂರ್ಯಪೇಟೆ ಗ್ರಾಮದ ವೃದ್ಧೆಯೊಬ್ಬರು ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಯಾರೂ ಇಲ್ಲದ ಕಾರಣ ಮಂಗಗಳು ಆಕೆಯ ಮನೆಗೆ ನುಗ್ಗಿವೆ. ಇದೇ ವೇಳೆ ಮುದುಕಿ ಕಾಣಿಸಿಕೊಂಡಾಗ ಕೋತಿಗಳ ಗುಂಪು ಆಕೆಯ ಮೇಲೆ ದಾಳಿ ನಡೆಸಿವೆ. ಮಂಗಗಳ ಗುಂಪು ದಾಳಿ ಮಾಡಿದ್ದರಿಂದ ವೃದ್ಧೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೊನೆಗೆ, ತೀವ್ರತರದ ಗಾಯಗಳಿಗೆ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ.

ಈ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ. ಕೋತಿಗಳ ಗುಂಪೊಂದು ವೃದ್ಧೆಯೊಬ್ಬರ ಪ್ರಾಣ ತೆಗೆದಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಗ್ರಾಮದಲ್ಲಿ ಮಂಗಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಂಗಗಳ ಕಾಟದಿಂದ ರಕ್ಷಿಸುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಮೊರೆ ಇಡುತ್ತಿದ್ದಾರೆ.

ಮಂಗಗಳ ಗುಂಪು ಮನೆಗಳಿಗೆ ನುಗ್ಗಿ ವಸ್ತುಗಳನ್ನು ತೆಗೆದುಕೊಂಡು ಹೋಗಿ ಬೆದರಿದವರ ಮೇಲೆ ದಾಳಿ ನಡೆಸುತ್ತಿರುವ ಆತಂಕ ವ್ಯಕ್ತವಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸ್ಪಂದಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಕೋತಿಗಳು ವೃದ್ಧೆಯನ್ನು ಕೊಂದಿರುವ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಮಂಗಗಳನ್ನು ಓಡಿಸಲು ಅವರು ಬೋನಿನೊಂದಿಗೆ ಪ್ರವೇಶಿಸಿದ್ದಾರೆ.

To read more in Telugu click here