Air India: ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ; ಕಣ್ಣೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ

85 ಮಂದಿಯಲ್ಲಿ 24 ಮಂದಿ ವಿದೇಶಕ್ಕೆ ತೆರಳುವ ಪ್ರಯಾಣಿಕರಾಗಿದ್ದು, ಅವರನ್ನು ನಿನ್ನೆ ಮತ್ತು ಇಂದು ಬೆಳಗ್ಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಲ್ಲಿ ದುಬೈ ಮತ್ತು ಬಹ್ರೇನ್‌ಗೆ ಕಳುಹಿಸಲಾಗಿದೆ. ಈಗ 61 ದೇಶೀಯ ಪ್ರಯಾಣಿಕರು ಕಣ್ಣೂರಿನಲ್ಲಿದ್ದಾರೆ.

Air India: ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ; ಕಣ್ಣೂರು ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ
ಏರ್ ಇಂಡಿಯಾ ವಿಮಾನ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 27, 2022 | 3:53 PM

ತಿರುವನಂತಪುರಂ: ಕೇರಳದ ಕೋಝಿಕ್ಕೋಡ್‌ನಿಂದ (Kozhikode) ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ (Air India Flight) ಸೋಮವಾರ ಕಣ್ಣೂರು ವಿಮಾನ ನಿಲ್ದಾಣದಲ್ಲಿ (Kannur Airport) ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನಕ್ಕೆ ಪಕ್ಷಿ ಡಿಕ್ಕಿ ಹೊಡೆದ ಕಾರಣ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದ್ದು, ವಿಮಾನದ ದುರಸ್ತಿ ಕಾರ್ಯ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ವಿಮಾನವು ಇಂದು (ಮಂಗಳವಾರ) ದೆಹಲಿಗೆ ಹೊರಡುವ ನಿರೀಕ್ಷೆಯಿದೆ.

ವಿಮಾನ ಹೊರಡುವುದು ಒಂದು ದಿನ ತಡವಾಗುವುದು ಎಂದು ಗೊತ್ತಾಗುತ್ತಿದ್ದಂತೆ ಏರ್ ಇಂಡಿಯಾ ವಿಮಾನದಲ್ಲಿದ್ದ ಒಟ್ಟು 135 ಪ್ರಯಾಣಿಕರಲ್ಲಿ ಕೆಲವರು ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದಾರೆ. ಏರ್ ಇಂಡಿಯಾ ಬದಲಾಗಿ ಇಂಡಿಗೋ ವಿಮಾನದಲ್ಲಿ ಅವರು ದೆಹಲಿಗೆ ಪ್ರಯಾಣಿಸಿದ್ದಾರೆ. ಏರ್ ಇಂಡಿಯಾ ವಿಮಾನದಲ್ಲಿದ್ದ ಸುಮಾರು 85 ಪ್ರಯಾಣಿಕರಿಗೆ ಕಣ್ಣೂರಿನ ಹೋಟೆಲ್‌ಗಳಲ್ಲಿ ವಸತಿ ಕಲ್ಪಿಸಲಾಗಿತ್ತು.

ಇದನ್ನೂ ಓದಿ: Video Viral: ಚೆನ್ನೈ ವಿಮಾನ ನಿಲ್ದಾಣದಲ್ಲಿ CPR ನೀಡಿ ವೃದ್ಧನ ಜೀವ ಉಳಿಸಿದ CISF ಅಧಿಕಾರಿ

85 ಮಂದಿಯಲ್ಲಿ 24 ಮಂದಿ ವಿದೇಶಕ್ಕೆ ತೆರಳುವ ಪ್ರಯಾಣಿಕರಾಗಿದ್ದು, ಅವರನ್ನು ನಿನ್ನೆ ಮತ್ತು ಇಂದು ಬೆಳಗ್ಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳಲ್ಲಿ ದುಬೈ ಮತ್ತು ಬಹ್ರೇನ್‌ನಲ್ಲಿರುವ ಆಯಾ ಸ್ಥಳಗಳಿಗೆ ಕಳುಹಿಸಲಾಗಿದೆ. ಈಗ 61 ದೇಶೀಯ ಪ್ರಯಾಣಿಕರು ಕಣ್ಣೂರಿನಲ್ಲಿದ್ದಾರೆ. ಈ ವಿಮಾನವನ್ನು ಸರಿಪಡಿಸಿದ ನಂತರ ಅವರನ್ನು ಅದೇ ವಿಮಾನದಲ್ಲಿ ದೆಹಲಿಗೆ ಕಳುಹಿಸಲಾಗುವುದು ಎಂದು ಏರ್ ಇಂಡಿಯಾ ಅಧಿಕಾರಿ ಮಾಹಿತಿ ನೀಡಿದ್ದಾರೆ.

ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಕಣ್ಣೂರಿನ 7 ಹೋಟೆಲ್‌ಗಳಲ್ಲಿ ರಾತ್ರಿ ಕಳೆಯಲು ವ್ಯವಸ್ಥೆ ಮಾಡಿದೆ. ಇಂಜಿನಿಯರ್‌ಗಳು ದೆಹಲಿಯಿಂದ ಕಣ್ಣೂರಿಗೆ ಆಗಮಿಸಿದ್ದು, ವಿಮಾನದ ಇಂಜಿನ್‌ಗಳನ್ನು ಪರೀಕ್ಷಿಸುತ್ತಿದ್ದಾರೆ. ವಿಮಾನದಲ್ಲಿ ಪಕ್ಷಿಗಳ ಅವಶೇಷಗಳಿವೆ. ದುರಸ್ತಿ ಕಾರ್ಯ ಪೂರ್ಣಗೊಂಡ ನಂತರ, ವಿಮಾನವು ಹಾರಾಟಕ್ಕೆ ಯೋಗ್ಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅವರು ಎಂಜಿನ್ ರನ್-ಅಪ್‌ಗಳನ್ನು ನಡೆಸುತ್ತಾರೆ. ಎಲ್ಲವೂ ಸರಿಯಾಗಿ ನಡೆದರೆ ಏರ್ ಇಂಡಿಯಾ ವಿಮಾನವು ಇಂದು ಟೇಕ್ ಆಫ್ ಆಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ