
ನವದೆಹಲಿ, ಸೆಪ್ಟೆಂಬರ್ 3: ಕೇಂದ್ರ ಮತ್ತು ರಾಜ್ಯಗಳನ್ನು ಒಳಗೊಂಡ ಜಿಎಸ್‌ಟಿ ಮಂಡಳಿ (GST Council), ಕೇಂದ್ರ ಸರ್ಕಾರವು ಸಲ್ಲಿಸಿದ ಜಿಎಸ್‌ಟಿ ಕಡಿತ ಮತ್ತು ಸುಧಾರಣೆಗಳ ಪ್ರಸ್ತಾವನೆಗಳನ್ನು ಸರ್ವಾನುಮತದಿಂದ ಅನುಮೋದಿಸಿದೆ. ಇದು ಸಾಮಾನ್ಯ ಜನರು, ರೈತರು, ಎಂಎಸ್‌ಎಂಇಗಳು, ಮಧ್ಯಮ ವರ್ಗ, ಮಹಿಳೆಯರು ಮತ್ತು ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ. 56ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸುದ್ದಿಗೋಷ್ಠಿ ನಡೆಸಿದ್ದು, ಮಧ್ಯಮ ವರ್ಗ ಮತ್ತು ಸಾಮಾನ್ಯ ಜನರ ಬಳಕೆಯ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಸಂಪೂರ್ಣವಾಗಿ ಕಡಿಮೆ ಮಾಡಲಾಗಿದೆ ಎಂದಿದ್ದಾರೆ. ಹಾಗಾದರೆ, ನೂತನ ಜಿಎಸ್‌ಟಿ ನೀತಿಯಿಂದ ಯಾವ ವಸ್ತುಗಳಿಗೆ ಜಿಎಸ್‌ಟಿ ಕಡಿಮೆಯಾಗಿದೆ? ಎಂಬುದರ ಮಾಹಿತಿ ಇಲ್ಲಿದೆ.
12% ಅಥವಾ 18%ನಿಂದ 5%ಗೆ ಇಳಿದಿರುವ ವಸ್ತುಗಳು:
* ಕೇಶ ತೈಲ (ಹೇರ್ ಆಯಿಲ್)
* ಟಾಯ್ಲೆಟ್ ಸೋಪ್, ಸೋಪ್ ಬಾರ್‌ಗಳು
* ಶಾಂಪೂ
* ಶೇವಿಂಗ್ ಕ್ರೀಮ್
* ಟೂತ್‌ಬ್ರಶ್, ಟೂತ್‌ಪೇಸ್ಟ್
* ಸೈಕಲ್
* ಟೇಬಲ್ ವೇರ್, ಕಿಚನ್ ವೇರ್ ಮತ್ತು ಇತರೆ ಮನೆಯ ಉಪಕರಣಗಳು
* ಬೆಣ್ಣೆ, ತುಪ್ಪ, ಚೀಸ್ ಮತ್ತು ಡೈರಿ ಸ್ಪ್ರೆಡ್‌ಗಳು, ನಾಮ್‌ಕೀನ್‌ಗಳು, ಪಾತ್ರೆಗಳು
*ಫೀಡಿಂಗ್ ಬಾಟಲಿಗಳು, ಶಿಶುಗಳಿಗೆ ನ್ಯಾಪ್‌ಕಿನ್‌ಗಳು ಮತ್ತು ಕ್ಲಿನಿಕಲ್ ಡೈಪರ್‌ಗಳು
* ಹೊಲಿಗೆ ಯಂತ್ರಗಳು
#WATCH | Delhi: After the 56th GST Council meeting, Union Finance Minister Nirmala Sitharaman says, “All this will be effective 22 September 2025, the first day of Navratri… The changes on GST of all products except sin goods, will be applicable 22 September… Sin goods will… pic.twitter.com/duA494ogxK
— ANI (@ANI) September 3, 2025
ಇದನ್ನೂ ಓದಿ: ಸೆಪ್ಟೆಂಬರ್ 22ರಿಂದ ನೂತನ ಜಿಎಸ್‌ಟಿ ಜಾರಿ; 4ರ ಬದಲಿಗೆ 2 ಸ್ಲ್ಯಾಬ್ ದರಗಳಿಗೆ ಕೇಂದ್ರ ಸರ್ಕಾರ ಅನುಮೋದನೆ
#WATCH | Delhi: After the 56th GST Council meeting, Union Finance Minister Nirmala Sitharaman says, “Paan masala, tobacco and everything else. Under the GST, till such a time the loan is repaid, as I said, the 28% plus the compensation cess will run. Once I clear the loan, they… pic.twitter.com/GBi8xFai8y
— ANI (@ANI) September 3, 2025
ಶೂನ್ಯಕ್ಕೆ ಇಳಿದಿರುವ ವಸ್ತುಗಳು (0%):
* ಅಲ್ಟ್ರಾ-ಹೈ ಟೆಂಪರೇಚರ್ ಹಾಲು
* ಪನೀರ್
* ರೊಟ್ಟಿ, ಪರೋಟಾ
* 33 ಜೀವರಕ್ಷಕ ಔಷಧಗಳು, ಕ್ಯಾನ್ಸರ್ ಔಷಧಿಗಳು, ಅಪರೂಪದ ಕಾಯಿಲೆಗಳಿಗೆ ಔಷಧಿಗಳು
* ವೈಯಕ್ತಿಕ ಜೀವ ವಿಮೆ, ಆರೋಗ್ಯ ಪಾಲಿಸಿಗಳು
#WATCH | Delhi: On the impact on GDP after the rationalisation of GST rates, Union Finance Minister Nirmala Sitharaman says, “…I think it will have a very positive impact on the GDP.” pic.twitter.com/fzCswMag67
— ANI (@ANI) September 3, 2025
28%ನಿಂದ 18%ಗೆ ಇಳಿದಿರುವ ವಸ್ತುಗಳು:
* ಹವಾನಿಯಂತ್ರಣ ಯಂತ್ರಗಳು (ಎಸಿ)
* 32 ಇಂಚುಗಳಿಗಿಂತ ದೊಡ್ಡದಾದ ಟಿವಿಗಳು (ಎಲ್ಲಾ ಟಿವಿಗಳು ಈಗ 18% ಜಿಎಸ್‌ಟಿ ವ್ಯಾಪ್ತಿಗೆ)
* ಡಿಶ್‌ವಾಷಿಂಗ್ ಯಂತ್ರಗಳು
* ಸಣ್ಣ ಕಾರುಗಳು
* 350 ಸಿಸಿ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದ ಬೈಕ್ಗಳು
* ಬಸ್‌ಗಳು, ಟ್ರಕ್‌ಗಳು, ಆಂಬ್ಯುಲೆನ್ಸ್‌ಗಳು
* ಎಲ್ಲಾ ಆಟೋ ಭಾಗಗಳು
* ತ್ರಿಚಕ್ರ ವಾಹನಗಳು
* ಸಿಮೆಂಟ್
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:21 pm, Wed, 3 September 25