Vijay Rupani: ವೇದಿಕೆ ಮೇಲೆ ಭಾಷಣ ಮಾಡುವ ವೇಳೆ ಕುಸಿದುಬಿದ್ದ ಗುಜರಾತ್​ ಸಿಎಂ ವಿಜಯ್​ ರೂಪಾನಿ

Vijay Rupani: ಗುಜರಾತ್​ನ ವಡೋದರಾದ ನಿಜಾಂಪುರದಲ್ಲಿ ಭಾಷಣ ಮಾಡುವ ವೇಳೆ ಸಿಎಂ ವಿಜಯ್​ ರೂಪಾನಿ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ವೇದಿಕೆ ಮೇಲೆ ಮಾತನಾಡುವ ವೇಳೆ ಕೊಂಚ ಅಸ್ವಸ್ಥರಾಗಿ ಕಂಡುಬಂದ ಸಿಎಂ ವಿಜಯ್ ರೂಪಾನಿ ನೋಡನೋಡುತ್ತಿದ್ದಂತೆ ವೇದಿಕೆ ಮೇಲೆ ಕುಸಿದುಬಿದ್ದರು.

Vijay Rupani: ವೇದಿಕೆ ಮೇಲೆ ಭಾಷಣ ಮಾಡುವ ವೇಳೆ ಕುಸಿದುಬಿದ್ದ ಗುಜರಾತ್​ ಸಿಎಂ ವಿಜಯ್​ ರೂಪಾನಿ
ವೇದಿಕೆ ಮೇಲೆ ಇದ್ದಕ್ಕಿದ್ದಂತೆ ಕುಸಿದುಬಿದ್ದ ಗುಜರಾತ್​ ಸಿಎಂ ವಿಜಯ್​ ರೂಪಾನಿ
Updated By: Digi Tech Desk

Updated on: Feb 15, 2021 | 3:20 PM

ಗಾಂಧಿನಗರ: ಗುಜರಾತ್​ನ ವಡೋದರಾದ ನಿಜಾಂಪುರದಲ್ಲಿ ಭಾಷಣ ಮಾಡುವ ವೇಳೆ ಸಿಎಂ ವಿಜಯ್​ ರೂಪಾನಿ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ವೇದಿಕೆ ಮೇಲೆ ಮಾತನಾಡುವ ವೇಳೆ ಕೊಂಚ ಅಸ್ವಸ್ಥರಾಗಿ ಕಂಡುಬಂದ ಸಿಎಂ ವಿಜಯ್ ರೂಪಾನಿ ನೋಡನೋಡುತ್ತಿದ್ದಂತೆ ವೇದಿಕೆ ಮೇಲೆ ಕುಸಿದುಬಿದ್ದರು. ವಡೋದರಾದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಇರುವ ಹಿನ್ನೆಲೆಯಲ್ಲಿ ರೂಪಾನಿ ನಗರದ ಮೂರು ಬಡಾವಣೆಗಳಲ್ಲಿ ಪ್ರಚಾರ ಮಾಡುವುದಕ್ಕೆ ಆಗಮಿಸಿದ್ದರು. ತರಸಾಲಿ ಮತ್ತು ಕರೇಲಿಬಾಗ್​ನಲ್ಲಿ ಭಾಷಣ ಮಾಡಿದ್ದ ಬಳಿಕ ನಿಜಾಂಪುರದಲ್ಲಿ ಭಾಷಣೆ ಮಾಡುವಾಗ ವೇದಿಕೆ ಮೇಲೆ ಕುಸಿದುಬಿದ್ದರು. ಈ ವೇಳೆ, ಅವರ ಹಿಂದೆಯಿದ್ದ ಭದ್ರತಾ ಸಿಬ್ಬಂದಿ ಅವರನ್ನು ಹಿಡಿಯಲು ಯತ್ನಿಸಿದರೂ ಗುಜರಾತ್​ ಸಿಎಂ ನೆಲಕ್ಕೆ ಕುಸಿದರು.

ವೇದಿಕೆ ಮೇಲೆ ಕೆಲ ಹೊತ್ತು ಸುಧಾರಿಸಿಕೊಂಡ ಬಳಿಕ ರೂಪಾನಿ ಕೊಂಚ ಚೇತರಿಕೆ ಕಂಡರು. ಆದರೆ, ತಮ್ಮ ಭಾಷಣ ವನ್ನು ಅಲ್ಲೇ ಮೊಟಕುಗೊಳಿಸಿ ಅಲ್ಲಿಂದ ತೆರಳಿದರು. ಚುನಾವಣಾ ಪ್ರಚಾರದಲ್ಲಿ ಕೈಗೊಂಡ ಓಡಾಟದಿಂದ ದಣಿವಾಗಿದ್ದ ಬೆನ್ನಲ್ಲೇ ಸಿಎಂ ಕುಸಿದುಬಿದ್ದರು. ಇದೀಗ, ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಉಪಮುಖ್ಯಮಂತ್ರಿ ನಿತಿನ್​ ಪಟೇಲ್​ ಮಾಹಿತಿ ನೀಡಿದರು.

ಇದನ್ನೂ ಓದಿ: ಅಭಿಮಾನಿಗಳ ಒತ್ತಾಯದ ಮೇರೆಗೆ.. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಜಬರ್​ದಸ್ತ್​ ಡ್ಯಾನ್ಸ್​!

Published On - 11:13 pm, Sun, 14 February 21