ಗುಜರಾತ್​​: ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯ: ಸಿಎಂ ಭೂಪೇಂದ್ರ ಪಟೇಲ್ ಸುಳಿವು

|

Updated on: Aug 01, 2023 | 11:24 AM

ಪ್ರೇಮ ವಿವಾಹವಾಗಬೇಕಾದರೆ ಮನೆಯವರು ಒಪ್ಪಿಗೆ ಕಡ್ಡಾಯವಾಗಿ ಬೇಕು ಎಂದು ಗುಜರಾತ್​​ ಸರ್ಕಾರ ಹೊಸ ಆದೇಶ ನೀಡುವ ಸಾಧ್ಯತೆ ಇದೆ.

ಗುಜರಾತ್​​: ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯ: ಸಿಎಂ ಭೂಪೇಂದ್ರ ಪಟೇಲ್ ಸುಳಿವು
ಗುಜರಾತ್​​ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್
Follow us on

ಗಾಂಧಿನಗರ: ಇನ್ನು ಮುಂದೆ ಪ್ರೇಮ ವಿವಾಹವಾಗಬೇಕಾದರೆ ಮನೆಯವರು ಒಪ್ಪಿಗೆ ಕಡ್ಡಾಯವಾಗಿ ಬೇಕು ಎಂಬ ಕಾನೂನನ್ನು  ಗುಜರಾತ್​​ ಸರ್ಕಾರ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಗುಜರಾತ್​​ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮೆಹ್ಸಾನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸರ್ದಾರ್ ಪಟೇಲ್ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಪ್ರೇಮ ವಿವಾಹಕ್ಕೆ ಪೋಷಕರ ಒಪ್ಪಿಗೆಯ ಬೇಡಿಕೆಯನ್ನು ಪಾಟಿದಾರ್ ಸಮುದಾಯದ ಕೆಲವು ವರ್ಗಗಳು ಮಾಡುತ್ತಿವೆ. ಈ ಬಗ್ಗೆ ಖಂಡಿತ ತಕ್ಷಣದಲ್ಲೇ ಕ್ರಮಕೈಗೊಳ್ಳುತ್ತೇವೆ ಎಂದು ಹೇಳುವ ಮೂಲಕ ಪ್ರೇಮ ವಿವಾಹಕ್ಕೆ ಮನೆಯವರ ಒಪ್ಪಿಗೆ ಬೇಕು ಎಂಬ ಚರ್ಚೆಗೆ ಸಿಎಂ ತೆರೆ ಎಳೆದಂತಾಗಿದೆ.

ಡಿಜಿಟಲ್​​ ವರದಿ ಪ್ರಕಾರ ಪ್ರೇಮ ವಿವಾಹ ಮಾಡಿಕೊಳ್ಳಲು ಮನೆಬಿಟ್ಟು ಓಡಿ ಹೋಗಿರುವ ಘಟನೆಗಳ ಬಗ್ಗೆ ಮಾಹಿತಿ ಪಡೆಯುವ ಬಗ್ಗೆ ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ಅವರಿಗೆ ಹೇಳಿದ್ದಾನೆ. ಪ್ರೇಮ ವಿವಾಹಕ್ಕೆ ಪೋಷಕರ ಅನುಮೋದನೆಯನ್ನು ಕಡ್ಡಾಯಗೊಳಿಸಲು ರಚಿಸಬೇಕಾದ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮವನ್ನು ಮಾಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಂವಿಧಾನಿಕ ಅನುಮೋದನೆ ಸಿಕ್ಕರೆ ಖಂಡಿತ ಮುಂದಿನ ಹಂತ ಕಾರ್ಯಯೋಜನೆಗಳನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದ್ದಾರೆ. ಇನ್ನು ಈ ನಿರ್ಧಾರಕ್ಕೆ ಪ್ರತಿಪಕ್ಷ ಕಾಂಗ್ರೆಸ್​ ಕೂಡ ಮೇಲ್ನೋಟಕ್ಕೆ ಒಲುವು ತೋರಿಸಿದೆ ಎಂದು ಹೇಳಿದ್ದಾರೆ. ಸುದ್ದಿ ಸಂಸ್ಥೆ ಎಎನ್​ಐ ವರದಿ ಪ್ರಕಾರ ಪ್ರೇಮ ವಿವಾಹಕ್ಕೆ ಜೋಡಿಗಳು ಪೋಷಕರನ್ನು ನಿರ್ಲಕ್ಷಿಸುತ್ತಿರುವ ಕಾರಣ ಈ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಶಾಸಕ ಇಮ್ರಾನ್ ಖೇದವಾಲಾ ಹೇಳಿದ್ದಾರೆ.

ಇದನ್ನೂ ಓದಿ: ಗುಜರಾತ್​ನ ಗಾಂಧಿನಗರದಿಂದ ರಾಜ್ಯಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ವಿದೇಶಾಂಗ ಸಚಿವ ಎಸ್​ ಜೈಶಂಕರ್

ಇನ್ನು ಭಾರತದ ಕಾನೂನಿ ಪ್ರಕಾರ, ಪುರುಷರು 21 ವರ್ಷ ವಯಸ್ಸಿನಲ್ಲಿ ಮತ್ತು ಮಹಿಳೆಯರು 18 ವರ್ಷ ವಯಸ್ಸಿನಲ್ಲಿ ಮದುವೆಯಾಗಬಹುದು ಎಂದು ಹೇಳಿದೆ. ಹೀಗಾಗಿ ಪ್ರೇಮ ವಿವಾಹಗಳು ಹೆಚ್ಚಾಗಿದೆ ಎಂದು ಜನರು ವಾದಿಸುತ್ತಿದ್ದಾರೆ. ಮನೆಯವರು ಪ್ರೇಮ ವಿವಾಹಕ್ಕೆ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಓಡಿ ಹೋಗಿ ಪ್ರೇಮ ವಿವಾಹವಾಗುತ್ತಿದ್ದಾರೆ. ಅದಕ್ಕಾಗಿ ಎರಡು ಮನೆಯವರು (ಹುಡುಗ-ಹುಡುಗಿ) ಒಪ್ಪಿಗೆ ನೀಡಿ. ಮನೆಯವರ ಒಪ್ಪಿಗೆ ಪ್ರಕಾರ ಮದುವೆಯಾಗುವುದು ಒಳ್ಳೆಯದು ಎಂದು ಹೇಳಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 11:18 am, Tue, 1 August 23