Rajya Sabha Elections: ಗುಜರಾತ್‌ನ ಗಾಂಧಿನಗರದಿಂದ ರಾಜ್ಯಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್
ರಾಜ್ಯಸಭಾ ಸ್ಥಾನಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್(S Jaishankar) ಗುಜರಾತ್‌ನ ಗಾಂಧಿನಗರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯಸಭಾ ಸ್ಥಾನಕ್ಕೆ ವಿದೇಶಾಂಗ ಸಚಿವ ಎಸ್ ಜೈಶಂಕರ್(S Jaishankar) ಗುಜರಾತ್‌ನ ಗಾಂಧಿನಗರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಗುಜರಾತ್‌ನ ಇನ್ನೂ ಇಬ್ಬರು ರಾಜ್ಯಸಭಾ ಸದಸ್ಯರ ಅವಧಿ ಆಗಸ್ಟ್ 18ಕ್ಕೆ ಕೊನೆಗೊಳ್ಳಲಿದೆ. ಈ ಸಂಬಂಧ, ಎಸ್ ಜೈಶಂಕರ್ ಅವರು ಭಾನುವಾರ ಅಹಮದಾಬಾದ್ ವಿಮಾನ ನಿಲ್ದಾಣವನ್ನು ತಲುಪಿದರು, ಅಲ್ಲಿ ಅವರನ್ನು ಗುಜರಾತ್ ಸಚಿವ ರಾಘವ್ ಪಟೇಲ್ ಮತ್ತು ಅಹಮದಾಬಾದ್ ಮೇಯರ್ ಕಿರಿತ್ ಪರ್ಮಾರ್ ಸೇರಿದಂತೆ ಹಲವು ಬಿಜೆಪಿ ಅಧಿಕಾರಿಗಳು ಬರಮಾಡಿಕೊಂಡರು.
ಜುಲೈ 24 ರಂದು ಚುನಾವಣೆ ನಡೆಯಲಿರುವ ಗುಜರಾತ್‌ನ ಮೂರು ರಾಜ್ಯಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಅಧಿಕೃತವಾಗಿ ಘೋಷಿಸಿಲ್ಲ. ಅದಕ್ಕೂ ಮುನ್ನ ಗುಜರಾತ್‌ನಿಂದ ಮೂರು ರಾಜ್ಯಸಭಾ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿತ್ತು.
ಮತ್ತಷ್ಟು ಓದಿ: ರಷ್ಯಾದಿಂದ ತೈಲ ಖರೀದಿ ಬಗ್ಗೆ ಲಿಜ್ ಟ್ರಸ್ಗೆ ಖಡಕ್ ಉತ್ತರ ನೀಡಿದ್ದ ಭಾರತದ ವಿದೇಶಾಂಗ ಸಚಿವ ಜೈಶಂಕರ್; ಹಳೇ ವಿಡಿಯೊ ಮತ್ತೆ ವೈರಲ್
ವರ್ಷಾಂತ್ಯದಲ್ಲಿ ಗುಜರಾತ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 156 ಸ್ಥಾನಗಳನ್ನು ಗೆದ್ದು ದಾಖಲೆ ಬರೆದಿತ್ತು. ಗುಜರಾತ್‌ನ 11 ರಾಜ್ಯಸಭಾ ಸ್ಥಾನಗಳಲ್ಲಿ ಪ್ರಸ್ತುತ ಎಂಟು ಬಿಜೆಪಿ ಮತ್ತು ಉಳಿದ ಮೂರು ಕಾಂಗ್ರೆಸ್‌ನ ವಶದಲ್ಲಿದೆ.
#WATCH | Gujarat | EAM Dr S Jaishankar files his nomination in Gandhinagar for the forthcoming Rajya Sabha elections. pic.twitter.com/Dmj2azX2eD
— ANI (@ANI) July 10, 2023
ಪ್ರಸ್ತುತ, ಗುಜರಾತ್‌ನಲ್ಲಿ ಬಿಜೆಪಿ ಹೊಂದಿರುವ ಎಂಟು ಸ್ಥಾನಗಳ ಪೈಕಿ ಎಸ್ ಜೈಶಂಕರ್, ಜುಗಲ್ಜಿ ಠಾಕೂರ್ ಮತ್ತು ದಿನೇಶ್ ಅನವಾಡಿಯಾ ಅವರ ಅಧಿಕಾರಾವಧಿಯು ಆಗಸ್ಟ್ 18 ರಂದು ಕೊನೆಗೊಳ್ಳಲಿದೆ.
ರಾಜ್ಯಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಜುಲೈ 13 ಕೊನೆಯ ದಿನವಾಗಿದ್ದು, ನಾಮಪತ್ರ ಹಿಂಪಡೆಯಲು ಜುಲೈ 17 ಕೊನೆಯ ದಿನವಾಗಿದೆ. ಅಗತ್ಯ ಬಿದ್ದರೆ ಜುಲೈ 24ರಂದು ಮತದಾನ ನಡೆಯಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ