ಡೆಹ್ರಾಡೂನ್‌ನಲ್ಲಿ ಪ್ರವಾಹದಲ್ಲಿ ಸಿಲುಕಿದ ಬಸ್; ಕಿಟಕಿಯಿಂದ ಹಾರಿ ಪ್ರಾಣ ಉಳಿಸಿಕೊಂಡ ಪ್ರಯಾಣಿಕರು
ಉತ್ತರ ಭಾರತದ ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಈ ರಾಜ್ಯಗಳಾದ್ಯಂತ ಭೂಕುಸಿತ ಮತ್ತು ಪ್ರವಾಹವುಂಟಾಗಿದೆ.
ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ (HRTC) ಬಸ್ಸೊಂದು ಡೆಹ್ರಾಡೂನ್‌ನಲ್ಲಿ (Dehradun) ಪ್ರವಾಹದಲ್ಲಿ ಸಿಲುಕಿದ್ದು, ಪ್ರಯಾಣಿಕರು ಬಸ್‌ನ ಕಿಟಕಿಗಳಿಂದ ಹಾರುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral) ಆಗಿದೆ. ಪ್ರವಾಹದ ರಭಸಕ್ಕೆ ಬಸ್ ವಾಲಿದ್ದನ್ನು ವಿಡಿಯೊದಲ್ಲಿ ಕಾಣಬಹುದು. ಉತ್ತರ ಭಾರತದ ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಈ ರಾಜ್ಯಗಳಾದ್ಯಂತ ಭೂಕುಸಿತ ಮತ್ತು ಪ್ರವಾಹವುಂಟಾಗಿದೆ. ಮಳೆಯ ಅಬ್ಬರವು ವಿವಿಧೆಡೆ ನಾಶ ನಷ್ಟವನ್ನುಂಟು ಮಾಡಿದ್ದು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಭೂಕುಸಿತ ಮತ್ತು ಮಳೆ ಸಂಬಂಧಿತ ಘಟನೆಗಳಿಂದ ಇದುವರೆಗೆ 28 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.
ಮಂಡಿಯಲ್ಲಿ ಪಂಚವಕ್ತ್ರ ಸೇತುವೆ ಕುಸಿದಿದೆ
ಭಾನುವಾರ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಮಂಡಿಯಲ್ಲಿರುವ ಪಂಚವಕ್ತ್ರ ಸೇತುವೆಯು ಕುಸಿದು ಬಿದ್ದಿದ್ದು, ವಿವಿಧ ಪ್ರದೇಶಗಳಲ್ಲಿ ಭೂಕುಸಿತಗಳು ಮತ್ತು ಹಠಾತ್ ಪ್ರವಾಹವನ್ನು ಉಂಟುಮಾಡಿತು. ನದಿಯ ನೀರಿನ ಮಟ್ಟ ಹೆಚ್ಚಾದ ಕಾರಣ ಐತಿಹಾಸಿಕ ಸೇತುವೆ ಕೊಚ್ಚಿಹೋಗಿದೆ ಎಂದು ಮಂಡಿಯ ಹೆಚ್ಚುವರಿ ಜಿಲ್ಲಾಧಿಕಾರಿ ಅಶ್ವನಿ ಕುಮಾರ್ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
HRTC bus passengers saved their lives by coming out of the windows near shimla bypass chowk in Dehradun. pic.twitter.com/AhcZ1N6UGQ
— Nikhil Choudhary (@NikhilCh_) July 10, 2023
ಮಂಡಿ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ಬಿಯಾಸ್ ನದಿಯಿಂದ ಔತ್ ಗ್ರಾಮದಿಂದ ಬಂಜಾರ್ ಮತ್ತು ಪಾಂಡೋ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ಕೊಚ್ಚಿ ಹೋಗಿವೆ. ಘಟನೆಯನ್ನು ಗಮನಿಸಿದ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಕೊಚ್ಚಿಹೋಗಿರುವ ಸೇತುವೆಗಳು “ಹಿಮಾಚಲದ ಗುರುತು” ಎಂದು ಹೇಳಿದ್ದಾರೆ.
ಇದನ್ನೂ ಓದಿ: Viral Video: ಪ್ರವಾಹ; ಐವರ ಸಾವು, ಆಟಿಕೆಗಳಂತೆ ತೇಲಿಹೋದ ಕಾರುಗಳು
ರೆಡ್ ಅಲರ್ಟ್
ದೆಹಲಿ, ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಉತ್ತರ ಭಾರತದ ಪ್ರಮುಖ ನಗರಗಳಲ್ಲಿ ಸಾರಿಗೆ ಮತ್ತು ವಿದ್ಯುತ್ ವ್ಯತ್ಯಯವನ್ನು ವರದಿ ಮಾಡಿರುವುದರಿಂದ ಹಿಮಾಚಲ ಮತ್ತು ಉತ್ತರಾಖಂಡ ರಾಜ್ಯಗಳಿಗೆ ರೆಡ್ ಅಲರ್ಟ್ ನೀಡಲಾಗಿದೆ. ಭಾನುವಾರ ಇಲ್ಲಿ ಹೆಚ್ಚಿನ ಪ್ರದೇಶಗಳು ಜಲಾವೃತವಾಗಿದ್ದು ಹಠಾತ್ ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿದೆ.ಭಾರತೀಯ ಹವಾಮಾನ ಇಲಾಖೆ ಪ್ರಕಾರ ಮಾನ್ಸೂನ್ ಮಾರುತಗಳ ನಡುವಿನ ಪರಸ್ಪರ ಕ್ರಿಯೆಯು ದೆಹಲಿ ಸೇರಿದಂತೆ ವಾಯುವ್ಯ ಭಾರತದಲ್ಲಿ ತೀವ್ರವಾದ ಮಳೆಗೆ ಕಾರಣವಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:04 pm, Mon, 10 July 23