ಕೇರಳ: ನಿಷೇಧಿತ PFI ನಡೆಸುತ್ತಿದ್ದ ಶಸ್ತ್ರಾಸ್ತ್ರ ತರಬೇತಿ ಕೇಂದ್ರ ಮೇಲೆ NIA ದಾಳಿ, ಗ್ರೀನ್ ವ್ಯಾಲಿಯ ಸತ್ಯ ಬಿಚ್ಚಿಟ್ಟ ತನಿಖಾ ಸಂಸ್ಥೆ
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿದಲ್ಲಿ ನಡೆಸುತ್ತಿರುವ ಗ್ರೀನ್ ವ್ಯಾಲಿ ಅಕಾಡೆಮಿ ಮೇಲೆ ದಾಳಿ ಮಾಡಿದೆ.
ಮಂಜೇರಿ, ಆ.1: ಇಂದು (ಆ.1) ಬೆಳಿಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿದಲ್ಲಿ ನಡೆಸುತ್ತಿರುವ ಗ್ರೀನ್ ವ್ಯಾಲಿ ಅಕಾಡೆಮಿ ಮೇಲೆ ದಾಳಿ ಮಾಡಿದೆ. NIA ವರದಿ ಪ್ರಕಾರ ಗ್ರೀನ್ ವ್ಯಾಲಿಯು ಕೇರಳದ PFI ಯ ಅತ್ಯಂತ ಹಳೆಯ ಮತ್ತು ದೊಡ್ಡ ಶಸ್ತ್ರಾಸ್ತ್ರ ತರಬೇತಿ ಕೇಂದ್ರಗಳಲ್ಲಿ ಒಂದಾಗಿದೆ. ಇದನ್ನು 1994ರಲ್ಲಿ ಪಿಎಫ್‌ಐನ ಹಿಂದಿನ ಸಂಘಟನೆಯಾದ ನ್ಯಾಷನಲ್ ಡೆವಲಪ್‌ಮೆಂಟ್ ಫ್ರಂಟ್ ಅವಧಿಯಲ್ಲಿ ಪ್ರಾರಂಭಿಸಲಾಯಿತು.
ಗ್ರೀನ್ ವ್ಯಾಲಿ ನಿಷೇಧದ ನಂತರ PFI ಕೇರಳದಲ್ಲಿ ಹುಟ್ಟಿಕೊಂಡಿರುವ 18ನೇ ಸಂಘಟನೆಯಾಗಿದೆ ಎಂದು NIA ಹೇಳಿದೆ. ಗ್ರೀನ್ ವ್ಯಾಲಿ ಫೌಂಡೇಶನ್ ನಿರ್ವಹಿಸುವ ಗ್ರೀನ್ ವ್ಯಾಲಿ ಅಕಾಡೆಮಿಯನ್ನು ಆರಂಭದಲ್ಲಿ ಎನ್‌ಡಿಎಫ್‌ನ ಕಾರ್ಯಕರ್ತರು ಶಸ್ತ್ರಾಸ್ತ್ರ ಮತ್ತು ದೈಹಿಕ ತರಬೇತಿಗಾಗಿ ಬಳಸುತ್ತಿದ್ದರು. ಬಳಿಕ ಈ ತರಬೇತಿ ಕೇಂದ್ರವನ್ನು ಪಿಎಫ್‌ಐ ಸದಸ್ಯರು ಬಳಸುತ್ತಿದ್ದರು ಎಂದು ಎನ್‌ಐಎ ಹೇಳಿದೆ. ಈ ಶಸ್ತ್ರಾಸ್ತ್ರ ಮತ್ತು ದೈಹಿಕ ತರಬೇತಿ ಕೇಂದ್ರವು 10 ಎಕರೆಗಳಷ್ಟು ಪ್ರದೇಶದಲ್ಲಿ ಸ್ಥಾಪನೆಯಾಗಿದೆ ಎಂದು ಎನ್‌ಐಎ ಬಹಿರಂಗಪಡಿಸಿದೆ.
ಕೊಲೆಗಳು ಸೇರಿದಂತೆ ಅನೇಕ ಅಪರಾಧ ಕೃತ್ಯಗಳಿಗೆ ಈ ಕೇಂದ್ರವನ್ನು ಪಿಎಫ್‌ಐ ಸದಸ್ಯರು ಬಳಸುತ್ತಿದ್ದಾರೆ. ಈ ಸಂಘಟನೆ ಅಪರಾಧ ಕತ್ಯಗಳನ್ನು ಮಾಡಲು ಬೆಂಬಲ ಮತ್ತು ಅದಕ್ಕೆ ಬೇಕಾಗಿರುವ ಸೌಲಭ್ಯಗಳನ್ನು ನೀಡುತ್ತಿದೆ. ಇನ್ನೂ ಸರ್ಕಾರದ ಮುಂದೆ ಶೈಕ್ಷಣಿಕ ಕೇಂದ್ರ ಎಂಬ ನೆಪದಲ್ಲಿ ಗ್ರೀನ್ ವ್ಯಾಲಿ ಕಾರ್ಯನಿರ್ವಹಿಸುತ್ತಿದೆ ಎಂದು ಎನ್‌ಐಎ ಹೇಳಿದೆ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಸುಳ್ಯ PFI ಕಚೇರಿ ಸಂಪೂರ್ಣ ಜಪ್ತಿ ಮಾಡಿದ ಎನ್‌ಐಎ
ಮಲಬಾರ್ ಹೌಸ್, ಪೆರಿಯಾರ್ ವ್ಯಾಲಿ, ವಳ್ಳುವನಾಡ್ ಹೌಸ್, ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಮತ್ತು ತಿರುವನಂತಪುರ ಶಿಕ್ಷಣ ಮತ್ತು ಸೇವಾ ಟ್ರಸ್ಟ್ ಇವುಗಳು ಇತ್ತೀಚೆಗೆ NIA ದಾಳಿಗೊಳಗಾದ PFI ತರಬೇತಿ ಕೇಂದ್ರಗಳಾಗಿವೆ. ಶಸ್ತ್ರಾಸ್ತ್ರ ತರಬೇತಿ ಮತ್ತು ಸೈದ್ಧಾಂತಿಕ ಪ್ರಚಾರಕ್ಕಾಗಿ ಬಳಸಲಾಗುತ್ತಿರುವ ಪಿಎಫ್‌ಐ ಅಡಿಯಲ್ಲಿ ನಡೆಸುತ್ತಿರುವ ಇಂತಹ ಸಂಸ್ಥೆಗಳ ಮೇಲೆ ಎನ್‌ಐಎ ದಾಳಿ ನಡೆಸಿ, ತನಿಖೆ ನಡೆಸುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ