ಕೋವಿಡ್​ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ: ಐವರು ಕೊರೊನಾ ಸೋಂಕಿತರು ಬಲಿ..

|

Updated on: Nov 27, 2020 | 8:46 AM

ಗುಜರಾತ್​ ರಾಜ್​ಕೋಟ್​​ನ ಉದಯ ಶಿವಾನಂದ ಕೋವಿಡ್​ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು ದುರ್ಘಟನೆಯಲ್ಲಿ ಐವರು ಕೊರೊನಾ ಸೋಂಕಿತರು ಮೃತಪಟ್ಟ ಘಟನೆ ನಡೆದಿದೆ.

ಕೋವಿಡ್​ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ: ಐವರು ಕೊರೊನಾ ಸೋಂಕಿತರು ಬಲಿ..
Follow us on

ಗುಜರಾತ್​ನ ಕೋವಿಡ್​ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದೆ. ರಾಜ್​ಕೋಟ್​​ನ ಉದಯ ಶಿವಾನಂದ ಆಸ್ಪತ್ರೆಯ ICUನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆ ವೇಳೆ ಆಸ್ಪತ್ರೆಯಲ್ಲಿ 33 ಕೊರೊನಾ ಸೋಂಕಿತರಿದ್ದರು ಈ ಪೈಕಿ ಐವರು ಕೊರೊನಾ ಸೋಂಕಿತರು ಬಲಿಯಾಗಿದ್ದಾರೆ.

ಸದ್ಯ ಅಗ್ನಿಶಾಮಕ ಸಿಬ್ಬಂದಿ ಕಿಟಕಿ ಮೂಲಕ ಉಳಿದವರನ್ನ ರಕ್ಷಿಸಿದ್ದಾರೆ. ಈ ಹಿಂದೆಯೂ ಗುಜರಾತ್​ನ ಕೆಲವು ಆಸ್ಪತ್ರೆಗಳಲ್ಲಿ ಇಂತಹ ಅವಘಡಗಳು ಸಂಭವಿಸಿದ್ದವು. ಆಗಸ್ಟ್.6ರಂದು ಅಹಮದಾಬಾದ್​ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹಾಗೂ ಆಗಸ್ಟ್.25ರಂದು ಜಾಮ್​ನಗರ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿತ್ತು. ಈ ರೀತಿ ಕೊರೊನಾ ಆಸ್ಪತ್ರೆಗಳಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಿವೆ.

Published On - 7:09 am, Fri, 27 November 20