ಗುಜರಾತ್​​ನಲ್ಲಿ ಸಂಪೂರ್ಣ ಹೊಸ ಕ್ಯಾಬಿನೆಟ್ ರಚನೆ ​; 24 ಮಂತ್ರಿಗಳ ಪಟ್ಟಿ ಹೀಗಿದೆ

| Updated By: guruganesh bhat

Updated on: Sep 16, 2021 | 10:38 PM

ಇಂದು ಪ್ರಮಾಣವಚನ ಸ್ವೀಕರಿಸಿದವರಲ್ಲಿ 10 ಮಂದಿ ಸಂಪುಟ ದರ್ಜೆಯ ಸ್ಥಾನ ಮಾನ ಪಡೆದಿದ್ದಾರೆ. ಉಳಿದ 14 ಜನರಿಗೆ ರಾಜ್ಯದರ್ಜೆಯಲ್ಲಿ ಸಚಿವ ಸ್ಥಾನ ನೀಡಲಾಗಿದೆ.

ಗುಜರಾತ್​​ನಲ್ಲಿ ಸಂಪೂರ್ಣ ಹೊಸ ಕ್ಯಾಬಿನೆಟ್ ರಚನೆ ​; 24 ಮಂತ್ರಿಗಳ ಪಟ್ಟಿ ಹೀಗಿದೆ
ಗುಜರಾತ್​ ಕ್ಯಾಬಿನೆಟ್​ ಸಚಿವರು
Follow us on

ಗಾಂಧಿನಗರ: ಗುಜರಾತ್​ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್​ ಪ್ರಮಾಣ ವಚನ ಸ್ವೀಕಾರ ಮಾಡಿ ಮೂರು ದಿನಗಳ ಬಳಿಕ ಇಂದು ನೂತನ ಕ್ಯಾಬಿನೆಟ್​ ಕೂಡ ರಚನೆಯಾಗಿದೆ. 24 ಸಚಿವರು ಇಂದು ಗಾಂಧಿನಗರದಲ್ಲಿರುವ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಗುಜರಾತ್​​ನಲ್ಲಿ ವಿಧಾನಸಭೆ ಚುನಾವಣೆ ಒಂದೇ ವರ್ಷ ಬಾಕಿ ಇರುವಾಗ ಮುಖ್ಯಮಂತ್ರಿಯನ್ನು ಬದಲು ಮಾಡಿದ್ದಲ್ಲದೆ, ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾದವರೂ ಕೂಡ  ಹೊಸಬರೇ ಆಗಿದ್ದಾರೆ.  ಗುಜರಾತ್​ ರಾಜ್ಯಪಾಲ ಆಚಾರ್ಯ ದೇವವೃತ ಅವರು ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್​ ರೂಪಾನಿ, ಉಪಮುಖ್ಯಮಂತ್ರಿ ನಿತಿನ್​ ಪಟೇಲ್​, ಬಿಜೆಪಿ ಗುಜರಾತ್​ ಅಧ್ಯಕ್ಷ ಸಿ.ಆರ್.ಪಾಟೀಲ್​, ಬಿಜೆಪಿ ರಾಜ್ಯ ಉಸ್ತುವಾರಿ ಭೂಪೇಂದ್ರ ಯಾದವರ್​ ಮತ್ತು ಕೇಂದ್ರದ ವೀಕ್ಷಕರಾದ ಬಿ.ಎಲ್​.ಸಂತೋಷ್​ ಹಾಜರಿದ್ದರು.

ಇಂದು ಪ್ರಮಾಣವಚನ ಸ್ವೀಕರಿಸಿದವರಲ್ಲಿ 10 ಮಂದಿ ಸಂಪುಟ ದರ್ಜೆಯ ಸ್ಥಾನ ಮಾನ ಪಡೆದಿದ್ದಾರೆ. ಉಳಿದ 14 ಜನರಿಗೆ ರಾಜ್ಯದರ್ಜೆಯಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಈ 14 ಜನರಲ್ಲಿ ಐವರಿಗೆ ಸ್ವತಂತ್ರ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ.
ಸಂಪುಟ ದರ್ಜೆಯ ಸಚಿವ ಸ್ಥಾನಮಾನ ಪಡೆದವರ ಪಟ್ಟಿ ಹೀಗಿದೆ..
ರಾಜೇಂದ್ರ ತ್ರಿವೇದಿ, ಜಿತು ವಾಘನಿ, ಋಷಿಕೇಶ ಪಟೇಲ್​, ರಾಘವ್​​ಜಿ ಪಟೇಲ್​, ಪೂರ್ಣೇಶ್​ ಮೋದಿ, ಕಾನುಭಾಯಿ ದೇಸಾಯಿ, ಕಿರೀಟ್​ಸಿನ್ಹಾ ರಾಣಾ, ನರೇಶ್​ ಪಟೇಲ್​, ಪ್ರದೀಪ್​ಸಿನ್ಹ್​ ಪಾರ್ಮಾರ್​ ಮತ್ತು ಅರ್ಜುನ್​ ಸಿಂಗ್​ ಚೌಹಾಣ್​.

ರಾಜ್ಯ ದರ್ಜೆಯ ಸ್ಥಾನಮಾನ ಪಡೆದವರ ಪಟ್ಟಿ ಹೀಗಿದೆ..
ಹರ್ಷ ಸಾಂಘ್ವಿ, ಜಗದೀಶ್​ ಪಾಂಚಾಲ್​, ಬ್ರಿಜೇಶ್​ ಮೆರ್ಜಾ, ಜಿತು ಚೌಧರಿ, ಮನೀಶಾ ವಾಕಿಲ್​, ಮುಕೇಶ್​ ಪಟೇಲ್​, ನಿಮಿಶಾ ಸುತಾರ್​, ಅರವಿಂದ್ ರೈಯಾನಿ, ಕುಬೇರ್ ದಿಂಡೋರ್, ಕೀರ್ತಿಸಿನ್ಹ ವಘೇಲಾ, ರಾಜೇಂದ್ರಸಿನ್ಹ ಪರ್ಮಾರ್, ರಾಘವ ಜಿ ಮಕ್ವಾನಾ, ವಿನೋದ್ ಮೊರಾದಿಯಾ ಮತ್ತು ದೇವಭಾಯಿ ಮಲಮ್. ಇವರಲ್ಲಿ ಹರ್ಷ ಸಾಂಘ್ವಿ, ಜಗದೀಶ್​ ಪಾಂಚಾಲ್​, ಬ್ರಿಜೇಶ್​ ಮೆರ್ಜಾ, ಜಿತು ಚೌಧರಿ, ಮನೀಶಾ ವಾಕಿಲ್​ ಅವರಿಗೆ ಸ್ವತಂತ್ರ ಕಾರ್ಯ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ.

ಇಂದು ಮೊದಲ ಸಭೆ
ಇಂದು ಮಧ್ಯಾಹ್ನದ ವೇಳೆಗೆ ಹೊಸ ಸಚಿವರೆಲ್ಲ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಅದಾದ ಬಳಿಕ ಕ್ಯಾಬಿನೆಟ್​ನ ಮೊದಲ ಸಭೆ ಸಂಜೆ 4ಗಂಟೆಗೆ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್​ ನೇತೃತ್ವದಲ್ಲಿ ಸರ್ಣಿಮ್​ ಸಂಕುಲ್​​ನಲ್ಲಿ ನಡೆದಿದೆ.

ಇದನ್ನೂ ಓದಿ: ಬ್ಯಾಂಕಿಂಗ್ ಕ್ಷೇತ್ರ ಸುಧಾರಣೆಗೆ ಕೇಂದ್ರ ಮಹತ್ವದ ತೀರ್ಮಾನ, 6 ವರ್ಷಗಳಲ್ಲಿ 5 ಲಕ್ಷ ಕೋಟಿ ಸಾಲ ವಸೂಲು: ನಿರ್ಮಲಾ ಸೀತಾರಾಮನ್

ರಸ್ತೆ ಆಗುವವರೆಗೂ ಮದುವೆಯಾಗಲ್ಲ ಎಂದು ಪಟ್ಟು ಹಿಡಿದ ಯುವತಿಗೆ ಗುಡ್ ನ್ಯೂಸ್; ರಸ್ತೆ ಮಾತ್ರವಲ್ಲ ನಿನ್ನ ಮದುವೆ ಕೂಡಾ ಮಾಡುತ್ತೇನೆ ಎಂದ ದಾವಣಗೆರೆ ಡಿಸಿ

Published On - 5:03 pm, Thu, 16 September 21