Narendra Modi birthday: ರಾಷ್ಟ್ರೀಯ ನಿರುದ್ಯೋಗ ದಿನವಾಗಿ ನರೇಂದ್ರ ಮೋದಿ ಜನ್ಮದಿನ ಆಚರಿಸಲು ಕಾಂಗ್ರೆಸ್ ನಿರ್ಧಾರ

ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ 20 ದಿನಗಳ ಸೇವಾ ಸಮರ್ಪಣ ಅಭಿಯಾನ ನಡೆಸುವ ಬಿಜೆಪಿ ನಿರ್ಧಾರಕ್ಕೆ ಈ ಮೂಲಕ ತಿರುಗೇಟು ನೀಡಲು ಕಾಂಗ್ರೆಸ್ ನಿರ್ಧರಿಸಿದೆ

Narendra Modi birthday: ರಾಷ್ಟ್ರೀಯ ನಿರುದ್ಯೋಗ ದಿನವಾಗಿ ನರೇಂದ್ರ ಮೋದಿ ಜನ್ಮದಿನ ಆಚರಿಸಲು ಕಾಂಗ್ರೆಸ್ ನಿರ್ಧಾರ
ಕಾಂಗ್ರೆಸ್ ಮತ್ತು ಬಿಜೆಪಿ ಚಿಹ್ನೆಗಳಿರುವ ಬಾವುಟ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 16, 2021 | 4:10 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನ್ಮದಿನವನ್ನು (ಸೆ.17) ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸಲು ಯುವ ಕಾಂಗ್ರೆಸ್ ನಿರ್ಧರಿಸಿದೆ. ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ 20 ದಿನಗಳ ಸೇವಾ ಸಮರ್ಪಣ ಅಭಿಯಾನ ನಡೆಸುವ ಬಿಜೆಪಿ ನಿರ್ಧಾರಕ್ಕೆ ಈ ಮೂಲಕ ತಿರುಗೇಟು ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಈ ಅವಧಿಯಲ್ಲಿ ದೊಡ್ಡಮಟ್ಟದ ಜನಸಂಪರ್ಕ ಅಭಿಯಾನ ನಡೆಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಇದು ನರೇಂದ್ರ ಮೋದಿ ಅವರು ಸಾರ್ವಜನಿಕ ಬದುಕಿನಲ್ಲಿ 20ನೇ ವರ್ಷ ಪೂರೈಸಿದ ದಿನವೂ ಹೌದು.

ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿರುವ ಲಕ್ಷಾಂತರ ಯುವಕರಲ್ಲಿ ಒತ್ತಡ ಹೆಚ್ಚಿಸಿದೆ. ಭಾರತೀಯ ಯುವ ಕಾಂಗ್ರೆಸ್ ಪ್ರಧಾನಿಯ ಹುಟ್ಟುಹಬ್ಬವನ್ನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸಲಿದೆ. ನರೇಂದ್ರ ಮೋದಿ ಅಧಿಕಾರ ಅವಧಿಯಲ್ಲಿ ಕೆಲಸ ಕಳೆದುಕೊಂಡ 32 ಲಕ್ಷ ವೇತನದಾರ ಉದ್ಯೋಗಿಗಳ ನೋವನ್ನು ಇದು ಬಿಂಬಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಂಡವಾಳಶಾಹಿ ಗೆಳೆಯರು ಕೊರೊನಾ ಪಿಡುಗಿನ ಅವಧಿಯಲ್ಲಿ ಶ್ರೀಮಂತರಾಗುತ್ತಲೇ ಹೋದರು. ಪಕೋಡ ಅರ್ಥಶಾಸ್ತ್ರ ಇನ್ನು ಸಾಕು. ದೇಶದ ಯುವಕರಿಗೆ ನಿಯಮಿತ ಉದ್ಯೋಗ ಬೇಕಿದೆ ಎಂದು ಯುವ ಕಾಂಗ್ರೆಸ್ ಆಗ್ರಹಿಸಿದೆ.

ದೇಶದ ನಿರುದ್ಯೋಗಿಗಳ ಪರಿಸ್ಥಿತಿ ಬಿಂಬಿಸುವ ಹಲವು ಕಾರ್ಯಕ್ರಮಗಳನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ದೇಶವ್ಯಾಪಿ ಆಯೋಜಿಸಲಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಒದಗಿಸುವ ಭರವಸೆ ನೀಡಿದ್ದ ನರೇಂದ್ರ ಮೋದಿ ಸರ್ಕಾರದ ಆಡಳಿತ ಅವಧಿಯಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ. ಬೀದಿಬೀದಿಗಳಲ್ಲಿ ನಿರುದ್ಯೋಗಿಗಳು ಅಲೆಯುತ್ತಿದ್ದಾರೆ. ಇದಕ್ಕೆ ಮೋದಿ ಅವರ ತಪ್ಪು ನೀತಿಗಳೇ ಕಾರಣ ಎಂದು ಯುವ ಕಾಂಗ್ರೆಸ್​ನ ರಾಷ್ಟ್ರೀಯ ಘಟಕದ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿದರು.

ಸೆಪ್ಟೆಂಬರ್ 17ನೇ ತಾರೀಖು ಯುವವಿರೋಧಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ. ಈ ದಿನವನ್ನು ನಾನು ರಾಷ್ಟ್ರೀಯ ನಿರುದ್ಯೋಗ ದಿನವಾಗಿ ಆಚರಿಸುತ್ತೇವೆ. ಈ ಮೂಲಕ ಕೋಟ್ಯಂತರ ಯುವಕರು ಹೇಗೆ ಕೆಲಸ ಕಳೆದುಕೊಂಡರು ಎಂಬುದನ್ನು ನೆನಪಿಸುತ್ತೇವೆ. ಕೇವಲ ಒಂದೇ ವರ್ಷದಲ್ಲಿ ದೇಶದಲ್ಲಿ ನಿರುದ್ಯೋಗಿಗಳ ಪ್ರಮಾಣ ಶೇ 2.4ರಿಂದ 10.3ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

ಉದ್ಯೋಗ ನಷ್ಟದ ಬಗ್ಗೆ ಮೋದಿ ಸರ್ಕಾರವನ್ನು ಸೆಪ್ಟೆಂಬರ್ 12ರಂದು ಟ್ವೀಟ್ ಮೂಲಕ ಟೀಕಿಸಿದ್ದ ರಾಹುಲ್ ಗಾಂಧಿ, ಮುಂದಿನ ದಿನಗಳಲ್ಲಿ ಸುಮಾರು 4000 ಕಂಪನಿಗಳು ಬಾಗಿಲು ಹಾಕಬಹುದು ಎಂಬ ಸುದ್ದಿಯ ತುಣುಕನ್ನೂ ರಾಹುಲ್ ಗಾಂಧಿ ಹಂಚಿಕೊಂಡಿದ್ದರು. ‘ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಎಂದರೆ ಭಾನುವಾರ ಮತ್ತು ಸೋಮವಾರದ ವ್ಯತ್ಯಾಸವೇ ನಾಪತ್ತೆಯಾಗುವುದು ಎಂದರ್ಥ. ಒಂದು ವೇಳೆ ಕೆಲಸವೇ ಇಲ್ಲ ಎಂದಾದರೆ ಭಾನುವಾರವಾದರೇನು? ಸೋಮವಾರವಾದರೇನು ಎಂದು ಟ್ವೀಟ್ ಮಾಡಿದ್ದರು.

ಉದ್ಯೋಗಾವಕಾಶಗಳು ಲಭ್ಯವಿಲ್ಲದ ಕಾರಣ ವಿದ್ಯಾವಂತರು ರಿಕ್ಷಾ ಎಳೆಯುವಂತಾಗಿದೆ. ತಮ್ಮ ಮಕ್ಕಳು ರಿಕ್ಷಾ ಎಳೆಯುವುದು ಅಥವಾ ಪಕೋಡ ಕರಿಯುವ ಸ್ಥಿತಿಗೆ ದೂಡಲ್ಪಟ್ಟಿರುವುದನ್ನು ಈ ಯುವಕರ ಪೋಷಕರು ಅಸಹಾಯಕತೆಯಿಂದ ಗಮನಿಸುತ್ತಿದ್ದಾರೆ. ಮಕ್ಕಳ ಭವಿಷ್ಯ ಕಸಿದುಕೊಳ್ಳುವ ಮೂಲಕ ನರೇಂದ್ರ ಮೋದಿ ಸರ್ಕಾರವು ಅವರನ್ನು ಸ್ವಾವಲಂಬಿಯಾಗಿಸಿದೆ ಎಂದು ವ್ಯಂಗ್ಯವಾಡಿದ್ದರು.

ನಿರುದ್ಯೋಗ, ಇಂಧನ ದರ ಏರಿಕೆ ಮತ್ತು ರೈತರ ಪ್ರತಿಭಟನೆಗಳನ್ನು ಸರ್ಕಾರಗಳು ನಿರ್ವಹಿಸುತ್ತಿರುವ ವಿಚಾರವಾಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರದ ಸತತ ವಾಗ್ದಾಳಿ ನಡೆಸುತ್ತಿದೆ.

(Narendra Modi birthday Youth Congress Decides to observe National Unemployment Day to oppose BJPs Seva Samarpan Abhiyan)

ಇದನ್ನೂ ಓದಿ: Ram Dhun: ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದಂದು ಗುಜರಾತ್​ನಲ್ಲಿ ವಿಶೇಷ ಕಾರ್ಯಕ್ರಮ; 7100 ಹಳ್ಳಿಗಳಲ್ಲಿ ನಡೆಯಲಿದೆ ರಾಮ್​ ಧುನ್​

ಇದನ್ನೂ ಓದಿ: ‘ಸೇವಾ ಸಪ್ತಾಹ’ ಕಾರ್ಯಕ್ರಮದ ಮೂಲಕ ಈ ಬಾರಿ ಮೋದಿ ಹುಟ್ಟುಹಬ್ಬ ಆಚರಣೆ