Defamation case: ಮಾನನಷ್ಟ ಪ್ರಕರಣ: ಶಿಕ್ಷೆಗೆ ತಡೆಯಾಜ್ಞೆ ಕೋರಿ ರಾಹುಲ್ ಗಾಂಧಿ ಮೇಲ್ಮನವಿ ಅಂತಿಮ ವಿಚಾರಣೆ ಮೇ 2ಕ್ಕೆ

|

Updated on: Apr 29, 2023 | 7:10 PM

Rahul Gandhi: ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಕಳೆದ ತಿಂಗಳು, ಸೂರತ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿತ್ತು ಮತ್ತು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು

Defamation case: ಮಾನನಷ್ಟ ಪ್ರಕರಣ: ಶಿಕ್ಷೆಗೆ ತಡೆಯಾಜ್ಞೆ ಕೋರಿ ರಾಹುಲ್ ಗಾಂಧಿ ಮೇಲ್ಮನವಿ ಅಂತಿಮ ವಿಚಾರಣೆ ಮೇ 2ಕ್ಕೆ
ರಾಹುಲ್ ಗಾಂಧಿ
Follow us on

ಅಹಮದಾಬಾದ್: ಮೋದಿ ಸರ್​​ನೇಮ್ (Modi Surname) ಹೇಳಿಕೆಗೆ ಸಂಬಂಧಿಸಿದಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ (defamation case) ತಮ್ಮ ಶಿಕ್ಷೆಗೆ ತಡೆಯಾಜ್ಞೆ ಕೋರಿ ಸೂರತ್ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್  (Gujarat High Court) ಅಂತಿಮ ವಿಚಾರಣೆಗೆ ಮೇ 2ಕ್ಕೆ ಮುಂದೂಡಿದೆ.ಸೆಷನ್ಸ್ ನ್ಯಾಯಾಲಯದ ಏಪ್ರಿಲ್ 20 ರ ಆದೇಶವನ್ನು ಪ್ರಶ್ನಿಸಿ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಕೈಗೆತ್ತಿಕೊಂಡರು. ಬುಧವಾರ, ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಗೀತಾ ಗೋಪಿ ಅವರು ಪ್ರಕರಣವನ್ನು ತುರ್ತು ವಿಚಾರಣೆಗಾಗಿ ತಮ್ಮ ಮುಂದೆ ತಂದ ನಂತರ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ನಂತರ ಈ ವಿಷಯವನ್ನು ನ್ಯಾಯಮೂರ್ತಿ ಪ್ರಚ್ಛಕ್ ಅವರಿಗೆ ವಹಿಸಲಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಮೇಲ್ಮನವಿಯನ್ನು ವಿರೋಧಿಸಿದ ಗುಜರಾತ್ ಸರ್ಕಾರ ಗಂಭೀರ ಅಪರಾಧದಲ್ಲಿ ಗಾಂಧಿಗೆ ಶಿಕ್ಷೆಯಾಗಿರುವುದರಿಂದ ಈ ಅರ್ಜಿಯನ್ನು ವಿರೋಧಿಸುತ್ತಿರುವುದಾಗಿ ಗುಜರಾತ್ ಹೈಕೋರ್ಟ್‌ಗೆ ಹೇಳಿದೆ.

ನ್ಯಾಯಾಲಯದಲ್ಲಿ ವಾದ- ಪ್ರತಿವಾದ ಹೀಗಿತ್ತು

ಗಾಂಧಿ ಪರ ವಾದ ನಡೆಸಿ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿದ್ದು, ಈ ರೀತಿ ಗಂಭೀರ ಅಪರಾಧಗಳಲ್ಲಿ ಶಿಕ್ಷೆಗೊಳಗಾದ ಶಾಸಕರ ವಿರುದ್ಧ ನ್ಯಾಯಾಲಯಗಳು ಶಿಕ್ಷೆಗೆ ತಡೆ ನೀಡಿದ್ದವು ಎಂಬ ಪಟ್ಟಿಯನ್ನು ಮುಂದಿಟ್ಟಿದ್ದಾರೆ. ಈ ಪ್ರಕರಣವು ಸಿವಿಲ್ ಕೇಸ್​​ನಂತೆ ದ್ವಿಪಕ್ಷೀಯವಾಗಿದೆ. ರಾಜ್ಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿಂಘ್ವಿ ವಾದಿಸಿದರು. ರಾಹುಲ್ ಗಾಂಧಿ ವಿರುದ್ಧದ ಪ್ರಕರಣವು ಗಂಭೀರವೂ ಅಲ್ಲ ಅಥವಾ ನೈತಿಕ ಕ್ಷೋಭೆಯನ್ನೂ ಒಳಗೊಂಡಿಲ್ಲ. ಹಾಗಾಗಿ ಶಿಕ್ಷೆಯನ್ನು ರದ್ದುಗೊಳಿಸಬೇಕು ಅವರು ವಾದಿಸಿದರು.

ರಾಜ್ಯ ಸರ್ಕಾರದ ಪರ ಹಾಜರಾದ ಸರ್ಕಾರಿ ವಕೀಲ ಮಿತೇಶ್ ಅಮೀನ್ ಅವರು ಸರ್ಕಾರಿ ವಕೀಲರಿಗೆ ನ್ಯಾಯಾಲಯದಲ್ಲಿ ಹಾಜರಾಗುವ ಶಾಸನಬದ್ಧ ಹಕ್ಕು ಇದೆ ಎಂದು ವಾದಿಸಿದರು. ಈ ಪರಿಣಾಮಕ್ಕೆ ವಿಭಿನ್ನ ತೀರ್ಪುಗಳಿವೆ ಆದರೆ ಅಂತಿಮವಾಗಿ ಅದು ನ್ಯಾಯಾಲಯದ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ.

ವಿಚಾರಣೆ ಸಂದಂರ್ಭದಲ್ಲಿ ಏಕಸದಸ್ಯ ನ್ಯಾಯಮೂರ್ತಿ ಹೇಮಂತ್ ಪ್ರಚ್ಚಕ್ ಅವರು ಚುನಾಯಿತ ಪ್ರತಿನಿಧಿಯಾಗಿ ರಾಹುಲ್ ಗಾಂಧಿಯವರು ಹೇಳಿಕೆಗಳನ್ನು ನೀಡುವಾಗ ಹೆಚ್ಚು ಜಾಗರೂಕರಾಗಿರಬೇಕು. ವಾಸ್ತವವಾಗಿ, ಜನರ ಕಡೆಗೆ ಅವರ ಹೆಚ್ಚಿನ ಕರ್ತವ್ಯವಾಗಿದೆ. ಅವರು ಜನರನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ತಮ್ಮ ಹೇಳಿಕೆಗಳನ್ನು ಮಿತಿಯಲ್ಲಿ ಮಾಡಬೇಕು ಅವರು ಮೌಖಿಕವಾಗಿ ಟೀಕಿಸಿದರು. ಸುದೀರ್ಘ ವಿಚಾರಣೆಯ ನಂತರ, ನ್ಯಾಯಮೂರ್ತಿ ಪ್ರಚ್ಚಕ್ ಅವರು ಮಂಗಳವಾರ ಹೆಚ್ಚಿನ ವಿಚಾರಣೆಗೆ ವಿಷಯವನ್ನು ಮುಂದೂಡಿದರು..

2019 ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ಗಾಂಧಿ ನೀಡಿದ ಹೇಳಿಕೆಯು ಯಾವುದೇ ಗುರುತಿಸಬಹುದಾದ ವರ್ಗದ ಜನರನ್ನು ಉದ್ದೇಶಿಸಿಲ್ಲ. ನೀರವ್ ಮೋದಿ, ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಸೇರಿದಂತೆ ಹೇಳಿಕೆಯಲ್ಲಿ ಕಾಣಿಸಿಕೊಂಡಿರುವ ಯಾವುದೇ ವ್ಯಕ್ತಿಗಳು ಯಾವುದೇ ದೂರು ದಾಖಲಿಸಿಲ್ಲ ಎಂದು ಸಿಂಘ್ವಿ ವಾದಿಸಿದರು.

ಆದ್ದರಿಂದ, ಅಪರಾಧವು ವ್ಯಕ್ತಿಗೆ (ನಿರ್ದಿಷ್ಟ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿನ ವಿರುದ್ಧ ಅಲ್ಲ) ಸಂಬಂಧಪಟ್ಟಿದ್ದಲ್ಲ. ಅದು ನ್ಯಾಯವ್ಯಾಪ್ತಿಯ ಮೇಲೆ ಪ್ರತಿಬಂಧ ರಚಿಸುತ್ತದೆ ಅವರು ವಾದಿಸಿದರು. ಅಂತಹ ದೂರನ್ನು ಪರಿಗಣಿಸುವುದು ಮಾನನಷ್ಟ ಕಾನೂನನ್ನು ಅಪಹಾಸ್ಯ ಮಾಡಿದಂತಾಗುತ್ತದೆ ಎಂದು ಅವರು ಹೇಳಿದರು.

ಆಕ್ಷೇಪಾರ್ಹ ಭಾಷಣಕ್ಕಾಗಿ, ಸಾಕ್ಷ್ಯಾಧಾರ ಕಾಯಿದೆ ಅಥವಾ ಐಟಿ ಕಾಯ್ದೆಯ ಪ್ರಕಾರ ಯಾವುದೇ ಸಾಕ್ಷ್ಯ ಮೂಲಕ ಶಿಕ್ಷೆಯನ್ನು ಸಮರ್ಥಿಸಲಾಗಿಲ್ಲ ಎಂದು ಅವರು ಹೇಳಿದರು. ಗಾಂಧಿಯವರ ಹೇಳಿಕೆಗಳಿಗೆ ಯಾವುದೇ ಪುರಾವೆಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿಲ್ಲ ಎಂದು ಅವರು ಹೇಳಿದರು.

ಮಾರ್ಚ್ 23 ರಂದು, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಗಾಂಧಿಯನ್ನು ತಪ್ಪಿತಸ್ಥರೆಂದು ಘೋಷಿಸಿತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 ರ ಅಡಿಯಲ್ಲಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ಸೂರತ್ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಏತನ್ಮಧ್ಯೆ, ಕೆಳ ನ್ಯಾಯಾಲಯವು ನವಜೋತ್ ಸಿಂಗ್ ಸಿಂಧು ವಿರುದ್ಧದ ಪ್ರಕರಣವನ್ನು ನೋಡಬೇಕು ಎಂದು ಸಿಂಘ್ವಿ ಹೇಳಿದರು. ಸಿಧು  ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರು. ಆದರೆ ಅವರ ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ. ತೀರ್ಪಿನ 24 ಗಂಟೆಗಳಲ್ಲಿ ರಾಹುಲ್ ಗಾಂಧಿಯವರು ಸಂಸತ್ತಿನ ಸದಸ್ಯರಾಗಿ  ಅನರ್ಹಗೊಂಡರು ಎಂದು ಸಿಂಘ್ವಿ ಹೇಳಿದ್ದಾರೆ. ಕಳೆದ ವಾರ ರಾಹುಲ್, ವಯನಾಡ್ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರಾಗಿ ನೆಲೆಸಿದ್ದ ದೆಹಲಿಯ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿದ್ದರು.

ಏಪ್ರಿಲ್ 20 ರಂದು ರಾಹುಲ್ ಸೂರತ್‌ನ ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು ಆ ಮನವಿಯನ್ನು ತಿರಸ್ಕೃತವಾಗಿತ್ತು.

ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಕಳೆದ ತಿಂಗಳು, ಸೂರತ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿತ್ತು ಮತ್ತು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ಅವರನ್ನು ಸಂಸತ್ ಸದಸ್ಯ ಸ್ಥಾನದಿಂದಲೂ ಅನರ್ಹಗೊಳಿಸಲಾಗಿತ್ತು. ರಾಹುಲ್ ಗಾಂಧಿ ಅವರ ‘ಮೋದಿ ಉಪನಾಮ ಟೀಕೆ’ ವಿರುದ್ಧ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಅವರು ಪ್ರಕರಣ ದಾಖಲಿಸಿದ್ದರು.

ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಜಾಮೀನು ಸಹ ನೀಡಿದ್ದ ನ್ಯಾಯಾಲಯ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಶವಕಾಶ ನೀಡಿತ್ತು. ಸಂಸತ್ ಸ್ಥಾನದಿಂದ ಅನರ್ಹಗೊಂಡ ರಾಹುಲ್​ ಗಾಂಧಿಯವರು ಇತ್ತೀಚೆಗೆ ದೆಹಲಿಯ ಸಂಸದರ ಅಧಿಕೃತ ನಿವಾಸವನ್ನೂ ತೆರವುಗೊಳಿಸಿದ್ದರು.

ಇದನ್ನೂ ಓದಿ: Mann Ki Baat: ಮನ್ ಕಿ ಬಾತ್​​ನ 100ನೇ ಸಂಚಿಕೆ, 9 ಸಾವಿರ ಕಡೆಗಳಲ್ಲಿ ಸಾಕ್ಷಿಯಾಗಲಿರುವ ಹರಿಯಾಣದ 9 ಲಕ್ಷ ಜನ

2019 ರಲ್ಲಿ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಕೋಲಾರದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಎಲ್ಲ ಕಳ್ಳರ ಸರ್ ನೇಮ್ ಮೋದಿ ಎಂದೇ ಯಾಕಿದೆ ಎಂದು ಪ್ರಶ್ನಿಸಿದ್ದರು. ಅವರು ಪ್ರಧಾನಿಯನ್ನು ಗುರಿಯಾಗಿಟ್ಟುಕೊಂಡು ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿ ಮತ್ತು ಲಲಿತ್ ಮೋದಿ ಬಗ್ಗೆ ವಾಗ್ದಾಳಿ ನಡೆಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:38 pm, Sat, 29 April 23