Mann Ki Baat: ಮನ್ ಕಿ ಬಾತ್ನ 100ನೇ ಸಂಚಿಕೆ, 9 ಸಾವಿರ ಕಡೆಗಳಲ್ಲಿ ಸಾಕ್ಷಿಯಾಗಲಿರುವ ಹರಿಯಾಣದ 9 ಲಕ್ಷ ಜನ
ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 30 ರಂದು ನಡೆಯುವ ತಿಂಗಳ ಕೊನೆಯ 'ಮನ್ ಕಿ ಬಾತ್' ತುಂಬಾ ವಿಶೇಷವಾಗಿದೆ. ಹೌದು ಈ ಮನ್ ಕಿ ಬಾತ್ 100ನೇ ಸಂಚಿಕೆಯಾಗಿದೆ. ಇದೀಗ ಈ ಬಾರಿಯ ಮನ್ ಕಿ ಬಾತ್ಗೆ ಹರಿಯಾಣ ಭಾರತೀಯ ಜನತಾ ಪಕ್ಷದ (ಬಿಜೆಪಿ) ದೊಡ್ಡ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಚಂಡೀಗಢ: ಪ್ರಧಾನಿ ನರೇಂದ್ರ ಮೋದಿ (Narendra Modi) ಏಪ್ರಿಲ್ 30 ರಂದು ನಡೆಯುವ ತಿಂಗಳ ಕೊನೆಯ ‘ಮನ್ ಕಿ ಬಾತ್’ ತುಂಬಾ ವಿಶೇಷವಾಗಿದೆ. ಹೌದು ಈ ಮನ್ ಕಿ ಬಾತ್ 100ನೇ ಸಂಚಿಕೆಯಾಗಿದೆ. ಇದೀಗ ಈ ಬಾರಿಯ ಮನ್ ಕಿ ಬಾತ್ಗೆ ಹರಿಯಾಣ ಭಾರತೀಯ ಜನತಾ ಪಕ್ಷದ (ಬಿಜೆಪಿ) ದೊಡ್ಡ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹರಿಯಾಣದಲ್ಲಿ 9 ಲಕ್ಷ ಜನರ ಈ ಬಾರಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ಕಾರ್ಯಕ್ರಮಕ್ಕಾಗಿ ರಾಜ್ಯದಾದ್ಯಂತ 9,000ಕ್ಕೂ ಹೆಚ್ಚು ಸ್ಥಳಗಳನ್ನು ನಿಯೋಜನೆ ಮಾಡಲಾಗಿದೆ.
ಹರಿಯಾಣ ಬಿಜೆಪಿ ಮುಖ್ಯಸ್ಥ ಓಂ ಪ್ರಕಾಶ್ ಧನಕರ್ ಅವರು ರೂಪಿಸಿರುವ ಈ ಕಾರ್ಯಕ್ರಮದಡಿಯಲ್ಲಿ ಪಕ್ಷವು 13 ಲಕ್ಷ ಆಮಂತ್ರಣ ಪತ್ರಗಳನ್ನು ಮುದ್ರಿಸಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 100 ವಿವಿಧ ಸ್ಥಳಗಳಲ್ಲಿ ಪಾಲ್ಗೊಳ್ಳುವವರಿಗೆ ರೆಡ್ ಕಾರ್ಪೆಟ್ ಹಾಸಲಿದೆ. ಹರಿಯಾಣ 90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಬಿಜೆಪಿಯ 4.50 ಲಕ್ಷ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಜ್ಜುಗೊಂಡಿದ್ದಾರೆ.
ಈ ಬಾರಿಯ ಮನ್ ಕಿ ಬಾತ್ ಲೈವ್ 9 ಸಾವಿರ ವೇದಿಕೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ಪ್ರತಿ ಕ್ಷೇತ್ರದಿಂದ 100 ಜನರ ಉಪಸ್ಥಿತಿ ಇರುವಂತೆ ಬಿಜೆಪಿ ಕಾರ್ಯಕರ್ತರಿಗೆ ತಿಳಿಸಲಾಗಿದೆ. ಆಹ್ವಾನ ಪ್ರತಿಕೆಯನ್ನು ಹಂಚಲು ಸಾವಿರಾರೂ ಕಾರ್ಯಕರ್ತರು ರಾಜ್ಯಾದ್ಯಂತ ಹೋಗಲಿದ್ದಾರೆ. ಈ ಕಾರ್ಯಕ್ರಮದಲ್ಲಿ 5,000 ಹೆಚ್ಚು ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದು ಧನಕರ್ ಹೇಳಿದರು.
ಇದನ್ನೂ ಓದಿ:Narendra Modi Interaction: ಕರ್ನಾಟಕದ ವಿಧಾನಸಭಾ ಚುನಾವಣೆಗೆ ಪ್ರಧಾನಿ ಮೋದಿಯ ಡಬಲ್ ಇಂಜಿನ್ ಸೂತ್ರ
ಈ ಬಾರಿ ಮನ್ ಕಿ ಬಾತ್ನಲ್ಲಿ 9 ಲಕ್ಷ ಜನರ ಉಪಸ್ಥಿತಿರುವ ನಿರೀಕ್ಷೆ ಇದೆ ಎಂದು ಧನಕರ್ ಹೇಳಿದ್ದಾರೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ವಿಧಾನಸಭಾ ಸ್ಪೀಕರ್ ಜಿಯಾನ್ ಚಂದ್ ಗುಪ್ತಾ ಅವರು ಪಂಚಕುದಿಂದಲ್ಲೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ
ಎಲ್ಲಾ ಚುನಾಯಿತ ಪ್ರತಿನಿಧಿಗಳು, ಸಂಸದರು, ಶಾಸಕರು ಮತ್ತು ಸಚಿವರು ಭಾನುವಾರದಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಮನ್ ಕಿ ಬಾತ್ ಬಗ್ಗೆ ಜನರಿಗೆ ದೊಡ್ಡ ನಿರೀಕ್ಷೆ ಮತ್ತು ಉತ್ಸಾಹದಿಂದ ಭಾಗವಹಿಸಲಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:12 am, Sat, 29 April 23