Mann Ki Baat: ಪ್ರಧಾನಿ ಮೋದಿ ಜತೆ ಮನ್ ಕೀ ಬಾತ್ ಕೇಳಲಿದ್ದಾರೆ ಕರ್ನಾಟಕದ ಸಾಧಕರು

|

Updated on: Apr 29, 2023 | 6:20 PM

ಮನ್​ ಕೀ ಬಾತ್​ನ 100ನೇ ಸಂಚಿಕೆಯ ಪ್ರಸಾರವನ್ನು ರಾಜ್ಯದ ಸಾಧಕರು ಪ್ರಧಾನಿ ಅವರ ಜತೆಗೇ ಇದ್ದು ಕೇಳಲಿದ್ದಾರೆ. 7 ಜನ ಅತಿಥಿಗಳನ್ನು ರಾಜಭವನಕ್ಕೆ ಆಹ್ವಾನಿಸಲಾಗಿದೆ.

Mann Ki Baat: ಪ್ರಧಾನಿ ಮೋದಿ ಜತೆ ಮನ್ ಕೀ ಬಾತ್ ಕೇಳಲಿದ್ದಾರೆ ಕರ್ನಾಟಕದ ಸಾಧಕರು
ನರೇಂದ್ರ ಮೋದಿ
Follow us on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಮನ್ ಕೀ ಬಾತ್ (Mann Ki Baat) ಕಾರ್ಯಕ್ರಮದ 100 ನೇ ಸಂಚಿಕೆ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಈ ಸಂದರ್ಭದಲ್ಲಿ ರಾಜ್ಯದ ಸಾಧಕರು ಕೂಡ ಮೋದಿಯವರ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಮನ್​ ಕೀ ಬಾತ್​​ನಲ್ಲಿ ಮೋದಿಯವರು ಪ್ರಸ್ತಾಪಿಸಿರುವ ರಾಜ್ಯದ ಸಾಧಕರಿಗೆ ರಾಜಭವನಕ್ಕೆ ಬರುವಂತೆ ಆಹ್ವಾನ ನೀಡಲಾಗಿದೆ ಎಂದು ಮೂಲಗಳು ‘ಟಿವಿ9 ಕನ್ನಡ ಡಿಜಿಟಲ್​’ಗೆ ತಿಳಿಸಿವೆ. ಮನ್​ ಕೀ ಬಾತ್​​ನ 100ನೇ ಸಂಚಿಕೆಯ ಧ್ವನಿಮುದ್ರಣ ಪ್ರಯುಕ್ತ ಕರ್ನಾಟಕದ 7 ಮಂದಿ ಸಾಧಕರನ್ನು ಪ್ರಸಾರ ಭಾರತಿ (Prasar Bharati) ಆಹ್ವಾನಿಸಿದ್ದು, ಇವರು ಏಪ್ರಿಲ್ 26ರಂದು ದೆಹಲಿಗೆ ತೆರಳಿದ್ದರು.

ಕರ್ನಾಟಕದ ಸಾಧಕರು ಈಗಾಗಲೇ ದೆಹಲಿಗೆ ತೆರಳಿ ವಾಪಸಾಗಿದ್ದಾರೆ. ಏಪ್ರಿಲ್ 26 ರಂದು ಮನ್ ಕೀ ಬಾತ್ ಸಂಬಂಧಿತ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಇವರು ಮರುದಿನ ಕರ್ತವ್ಯ ಪಥ, ರಾಷ್ಟ್ರಪತಿ ಭವನ ಮತ್ತು ಪ್ರಧಾನಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದಾರೆ. ಏಪ್ರಿಲ್ 28 ರಂದು ಕೆಂಪು ಕೋಟೆ, ರಾಜ್‌ ಘಾಟ್​ ಮತ್ತು ಮಹಾತ್ಮಾ ಗಾಂಧಿ ಮ್ಯೂಸಿಯಂ ವೀಕ್ಷಿಸಿ ಇಂದು (ಏಪ್ರಿಲ್ 29) ದೆಹಲಿಗೆ ವಾಪಸಾಗಿದ್ದಾರೆ.

ಮೋದಿ ಜತೆ ನೂರನೇ ಸಂಚಿಕೆ ಕೇಳಲಿದ್ದಾರೆ ರಾಜ್ಯದ ಸಾಧಕರು

ಮನ್​ ಕೀ ಬಾತ್​ನ 100ನೇ ಸಂಚಿಕೆಯ ಪ್ರಸಾರವನ್ನು ರಾಜ್ಯದ ಸಾಧಕರು ಪ್ರಧಾನಿ ಅವರ ಜತೆಗೇ ಇದ್ದು ಕೇಳಲಿದ್ದಾರೆ. 7 ಜನ ಅತಿಥಿಗಳನ್ನು ರಾಜಭವನಕ್ಕೆ ಆಹ್ವಾನಿಸಲಾಗಿದೆ. ಬೆಳಿಗ್ಗೆ ಸುಮಾರು 8.30 ವೇಳೆಗೆ ರಾಜಭವನದಲ್ಲಿ ಹಾಜರಿರುವಂತೆ ಅವರಿಗೆ ಆಹ್ವಾನ ಕಳುಹಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: Mann Ki Baat: ನಾಳೆ ಮನ್​ ಕೀ ಬಾತ್​ನ ನೂರನೇ ಆವೃತ್ತಿ; ತಮ್ಮದೇ ಮನದ ಮಾತು ಕೇಳಲು ಮೋದಿ ಎಲ್ಲಿರುತ್ತಾರೆ ಗೊತ್ತೇ?

ಅರಣ್ಯ ಪುನರುಜ್ಜೀವನಗೊಳಿಸುವ ಬೆಂಗಳೂರಿನ ಸುರೇಶ್, ಗದಗದ ಕಾವೆಂಶ್ರೀ ಅವರು ‘ಕಲಾ ಚೇತನ’ದ ಮೂಲಕ ಮಾಡುವ ಕಲೆ ಮತ್ತು ಸಂಸ್ಕೃತಿ ಸೇವೆ, ಅಡಿಕೆ ನಾರಿನಿಂದ ತಯಾರಿಸಿದ ಅನೇಕ ವಿಶಿಷ್ಟ ಉತ್ಪನ್ನಗಳನ್ನು ಲಂಡನ್ ಮತ್ತು ಯುರೋಪ್‌ನಂತಹ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸುತ್ತಿರುವ ಶಿವಮೊಗ್ಗದ ಸುರೇಶ್ ಮತ್ತು ಅವರ ಪತ್ನಿ ಮೈಥಿಲಿ ಅವರ ಬಗ್ಗೆ ಮೋದಿ ಮನ್​ ಕೀ ಬಾತ್​ನ ವಿವಿಧ ಆವೃತ್ತಿಗಳಲ್ಲಿ ಉಲ್ಲೇಖಿಸಿದ್ದರು. ಇದೇ ರೀತಿ ರಾಜ್ಯದ ಇನ್ನೂ ಹಲವರ ಬಗ್ಗೆ ಮೋದಿ ಉಲ್ಲೇಖಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ