Nilamben Parikh: ಮಹಾತ್ಮ ಗಾಂಧಿಯವರ ಮರಿಮೊಮ್ಮಗಳು ನೀಲಂಬೆನ್ ನಿಧನ
ಮಹಾತ್ಮ ಗಾಂಧಿ ಯವರ ಮರಿ ಮೊಮ್ಮಗಳು ನೀಲಂಬೆನ್ ಪಾರಿಖ್ಅವರು ನಿಧನರಾಗಿದ್ದಾರೆ. ಅವರು ನವಸಾರಿಯಲ್ಲಿ ಕೊನೆಯುಸಿರೆಳೆದರು. ನೀಲಂಬೆನ್ ಅವರು ಮಹಾತ್ಮ ಗಾಂಧಿಯವರ ಪುತ್ರ ಹರಿದಾಸ್ ಗಾಂಧಿಯವರ ಮೊಮ್ಮಗಳು. ಅವರು ನವಸಾರಿ ಜಿಲ್ಲೆಯ ಅಲ್ಕಾ ಸೊಸೈಟಿಯಲ್ಲಿರುವ ತಮ್ಮ ಮಗ ಡಾ. ಸಮೀರ್ ಪಾರಿಖ್ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಅಂತಿಮ ಯಾತ್ರೆ ಇಂದು ಬೆಳಗ್ಗೆ 8 ಗಂಟೆಗೆ ಅವರ ನಿವಾಸದಿಂದ ಪ್ರಾರಂಭವಾಗಲಿದ್ದು, ವೀರ್ವಾಲ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಗುಜರಾತ್, ಏಪ್ರಿಲ್ 2: ಮಹಾತ್ಮ ಗಾಂಧಿ(Mahatma Gandhi) ಯವರ ಮರಿ ಮೊಮ್ಮಗಳು ನೀಲಂಬೆನ್ ಪಾರಿಖ್(Nilamben Parikh) ಅವರು ನಿಧನರಾಗಿದ್ದಾರೆ. ನವಸಾರಿಯಲ್ಲಿ ಕೊನೆಯುಸಿರೆಳೆದರು. ಅವರಿಗೆ 93 ವರ್ಷ ವಯಸ್ಸಾಗಿತ್ತು. ನೀಲಂಬೆನ್ ಮಹಾತ್ಮ ಗಾಂಧಿಯವರ ಪುತ್ರ ಹರಿದಾಸ್ ಗಾಂಧಿಯವರ ಮೊಮ್ಮಗಳು. ಅವರು ನವಸಾರಿ ಜಿಲ್ಲೆಯ ಅಲ್ಕಾ ಸೊಸೈಟಿಯಲ್ಲಿರುವ ತಮ್ಮ ಮಗ ಡಾ. ಸಮೀರ್ ಪಾರಿಖ್ ಅವರ ಮನೆಯಲ್ಲಿ ವಾಸಿಸುತ್ತಿದ್ದರು.
ಅವರ ಅಂತಿಮ ಯಾತ್ರೆ ಇಂದು ಬೆಳಗ್ಗೆ 8 ಗಂಟೆಗೆ ಅವರ ನಿವಾಸದಿಂದ ಪ್ರಾರಂಭವಾಗಲಿದ್ದು, ವೀರ್ವಾಲ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ನೀಲಂಬೆನ್ ಪಾರಿಖ್ ನಿಜವಾದ ಗಾಂಧಿವಾದಿ. ಯಾವಾಗಲೂ ಮಹಿಳಾ ಕಲ್ಯಾಣ ಮತ್ತು ಮಾನವ ಸೇವೆಗೆ ಸಮರ್ಪಿತರಾಗಿದ್ದರು.
ಜನವರಿ 30, 2008 ರಂದು ಮಹಾತ್ಮ ಗಾಂಧಿಯವರ 60 ನೇ ಪುಣ್ಯತಿಥಿಯಂದು, ನೀಲಂಬೆನ್ ಪಾರಿಖ್ ಅವರು ಬಾಪು ಅವರ ಕೊನೆಯ ಚಿತಾಭಸ್ಮವನ್ನು ಗೌರವಯುತವಾಗಿ ವಿಸರ್ಜಿಸಿದರು. ಈ ಸಂದರ್ಭದಲ್ಲಿ ಗಾಂಧೀಜಿಯವರ ಅನುಯಾಯಿಗಳು ಮತ್ತು ಕುಟುಂಬ ಸದಸ್ಯರು ಸಹ ಅವರಿಗೆ ಗೌರವ ಸಲ್ಲಿಸಿದ್ದರು. ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗ ತರಬೇತಿ ನೀಡುವುದು ಇದರ ಉದ್ದೇಶವಾಗಿತ್ತು.
ಮತ್ತಷ್ಟು ಓದಿ: ಆರ್ಎಸ್ಎಸ್, ಬಿಜೆಪಿಯವರು ಮಹಾತ್ಮ ಗಾಂಧಿ ಹಂತಕ ಗೋಡ್ಸೆ ಆರಾಧಕರು: ಸಿದ್ದರಾಮಯ್ಯ ಕಿಡಿ
ನೀಲಂಬೆನ್, ಹರಿಲಾಲ್ ಗಾಂಧಿ ಮತ್ತು ಅವರ ಪತ್ನಿ ಗುಲಾಬ್ ಅವರ ಐದು ಮಕ್ಕಳಲ್ಲಿ ಹಿರಿಯವರಾದ ರಾಮಿಬೆನ್ ಅವರ ಮಗಳು. ಅವರ ಮಗ ಸಮೀರ್ ಪಾರಿಖ್ ನವಸಾರಿಯಲ್ಲಿ ನೇತ್ರಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತಿ ದಿವಂಗತ ಯೋಗೇಂದ್ರಭಾಯಿ.
ತಾಯಿ ಯಾವುದೇ ಕಾಯಿಲೆಗಳಿಂದ ಬಳಲುತ್ತಿರಲಿಲ್ಲ ಆದರೆ ಕಳೆದ ಕೆಲವು ದಿನಗಳಿಂದ, ಅವರು ವಯಸ್ಸಿನ ಕಾರಣದಿಂದಾಗಿ ಊಟ ಮಾಡುವುದನ್ನು ಬಹುತೇಕ ತ್ಯಜಿಸಿದ್ದರು. ಇಂದು ಯಾಕೋ ಆಸ್ಪತ್ರೆಗೆ ಹೋಗುವ ಮನಸ್ಸಾಗಲಿಲ್ಲ, ನಾನು ಅವರ ಪಕ್ಕದಲ್ಲಿ ಕುಳಿತು ಅವರ ಕೈ ಹಿಡಿದುಕೊಂಡೆ. ಕ್ರಮೇಣ ಅವರ ನಾಡಿಮಿಡಿತ ಕಡಿಮೆಯಾಗುತ್ತಿರುವುದನ್ನು ಗಮನಿಸಿದೆ.
ಯಾವುದೇ ನೋವಿಲ್ಲದೆ ಅಮ್ಮ ಕಣ್ಮುಚ್ಚಿದ್ದಾರೆ ಎಂದು ಮಗ ಸಮೀರ್ ಹೇಳಿದ್ದಾರೆ. ವರು ಕುಟುಂಬದ ಮೇಲೆ ಗಾಂಧಿವಾದಿ ಸಿದ್ಧಾಂತಗಳನ್ನು ಹೇರದಿದ್ದರೂ, ಅವರ ವೈಯಕ್ತಿಕ ಮೌಲ್ಯಗಳೇ ಅವರ ಜೀವನದಲ್ಲಿ ಅವರಿಗೆ ಸ್ಫೂರ್ತಿ ನೀಡಿತು ಎಂದು ಡಾ. ಪಾರಿಖ್ ಹೇಳಿದರು.
ಯೋಗೇಂದ್ರಭಾಯಿ ಮತ್ತು ನೀಲಂಬೆನ್ 1955 ರಲ್ಲಿ ಪದವಿ ಪಡೆದ ನಂತರ ಬಾಂಬೆಯನ್ನು ತೊರೆದರು. ಅವರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಾ ತಮ್ಮ ಜೀವನವನ್ನು ಕಳೆಯಲು ನಿರ್ಧರಿಸಿದ್ದರು. ಸ್ವಲ್ಪ ಕಾಲ ವಿನೋಬಾ ಭಾವೆ ಅವರ ಭೂದಾನ ಚಳವಳಿಯಲ್ಲಿ ಸೇರಿಕೊಂಡರು. ಅವರು 1962 ರಲ್ಲಿ ದಕ್ಷಿಣ ಗುಜರಾತ್‌ನ ವ್ಯಾರಾಗೆ ಸ್ಥಳಾಂತರಗೊಳ್ಳುವ ಮೊದಲು ಒಡಿಶಾದ ದೂರದ ಹಳ್ಳಿಯಲ್ಲಿ ವಾಸಿಸುತ್ತಿದ್ದರು.ಆರಂಭದಲ್ಲಿ, ಅವರು ತಾಪಿ ಜಿಲ್ಲೆಯ ದೂರದ ಹಳ್ಳಿಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು ಎಂದು ಮಗ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:48 am, Wed, 2 April 25